ಗುರುಗಳ ನಿಧನಕ್ಕೆ ಭಾವುಕ: ತ್ರಿಶಂಕು ಸ್ಥಿತಿಯಲ್ಲಿದ್ದೇನೆಂದ ಜಗ್ಗೇಶ್
ಕನ್ನಡ ಚಿತ್ರರಂಗಕ್ಕೆ ಕೆಲವು ಮಾಸದ ಸಿನಿಮಾಗಳನ್ನು ನೀಡಿದ ನಿರ್ದೇಶಕ ಕೆವಿ ರಾಜು ಇಂದು ನಿಧನರಾಗಿದ್ದಾರೆ. ಹಿರಿಯ ನಿರ್ದೇಶಕರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕೆವಿ ರಾಜು ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ''ನನ್ನನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿದ ಗುರುಗಳು ಕೆವಿ ಜಯರಾಮ್ ಅವರ ಸಹೋದರ ಕೆವಿ ರಾಜು ರವರು ನನಗೆ 2ನೇ ಗುರುಗಳು. ಅವರು ಇಂದು ಕಾಲವಾದರು ಎಂದು ತಿಳಿದಾಗ ದುಃಖಿತನಾದೆ. ದೂರದ ಊರಿನಲ್ಲಿ ಚಿತ್ರಕರಣದಲ್ಲಿ ಇರುವ ಪ್ರಯುಕ್ತ ನೋಡಲಾಗದ ತ್ರಿಶಂಕು ಸ್ಥಿತಿ ನನ್ನದು. ನಿಮ್ಮ ಆಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ರಾಯರು ನೀಡಲಿ. ಹೋಗಿಬನ್ನಿ ಗುರುಗಳೆ'' ಎಂದಿದ್ದಾರೆ.
ಕನ್ನಡ ಚಿತ್ರಸಾಹಿತಿ ಹಾಗೂ ನಿರ್ದೇಶಕ ಕೆ. ವಿ ರಾಜು ವಿಧಿವಶರಾಗಿದ್ದಾರೆ. ಇವರ ಅಣ್ಣ ಕೆ.ವಿ. ಜಯರಾಂ ಸಹ ಸಿನಿಮಾ ನಿರ್ದೇಶಕರಾಗಿದ್ದರು. ರಾಜಾಜಿನಗರದಲ್ಲಿ ವಾಸವಾಗಿದ್ದ ಕೆವಿ ರಾಜು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾದರು.

ಕನ್ನಡದಲ್ಲಿ 'ಯುದ್ಧಕಾಂಡ', 'ಬೆಳ್ಳಿಮೋಡ', 'ಹುಲಿಯಾ', ಇನ್ನೂ ಹಲವು ಸಿನಿಮಾಗಳನ್ನು ಕೆವಿ ರಾಜು ನಿರ್ದೇಶನ ಮಾಡಿದ್ದರು. 1991 ರಲ್ಲಿ ಅಮಿತಾಬ್ ಬಚ್ಚನ್, ಜಯಪ್ರದಾ ನಟಿಸಿದ್ದ 'ಇಂದ್ರಜಿತ್' ಸಿನಿಮಾವನ್ನೂ ಸಹ ಕೆವಿ ರಾಜು ನಿರ್ದೇಶನ ಮಾಡಿದ್ದರು. 1990 ರ ದಶಕದ ಟಾಪ್ ನಿರ್ದೇಶಕ ಎನಿಸಿಕೊಂಡಿದ್ದರು ಕೆವಿ ರಾಜು.


Click it and Unblock the Notifications











