For Quick Alerts
  ALLOW NOTIFICATIONS  
  For Daily Alerts

  ಮೊಬೈಲ್ ಕಳ್ಳರಿಂದ ನಿರ್ಮಾಪಕರ ಸೋದರಳಿಯನ ಕೊಲೆ: ಜಗ್ಗೇಶ್ ಆಕ್ರೋಶ

  By Bharath Kumar
  |

  ಕನ್ನಡದ ಖ್ಯಾತ ನಿರ್ಮಾಪಕ ಕೆಸಿಎನ್ ಕುಮಾರ್ ಅವರ ಸಹೋದರಿ ಮಗನನ್ನ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋಪಾಲ್ ಮಾಲ್ ನಿಂದ ಮನೆಗೆ ಹಿಂತಿರುವಾಗ ಕೆಲವು ಕಿಡಿಗೇಡಿಗಳು 17 ವರ್ಷದ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆಯಂತೆ.

  ಈ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಜನಸಾಮಾನ್ಯರ ಸುರಕ್ಷತೆ ಬಗ್ಗೆ ಆತಂಕ ಕಾಡುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

  ಬೆಂಗಳೂರಿನಲ್ಲಿ ಹೆಚ್ಚಾಗಿರುವ ಇಂತಹ ಘಟನೆಗಳಿಗೆ ಗಾಂಜಾ ವ್ಯಸನಿಗಳೇ ಕಾರಣವೆಂದು ನಟ ಜಗ್ಗೇಶ್ ದೂರಿದ್ದಾರೆ. ಇದೇ ಬೇರೆ ದೇಶದಲ್ಲಿ ಇಂತಹ ಕೃತ್ಯಗಳು ಆಗಿದ್ದರೇ ಬುಲೆಟ್ ಮಾತಾಡುತ್ತಿತ್ತು ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ತಮ್ಮ ಮನದಲ್ಲಿರುವ ಕೋಪಾಗ್ನಿಯನ್ನ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಮುಂದೆ ಓದಿ.....

  ನಿರ್ಮಾಪಕರ ಸಂಬಂಧಿಯ ಹತ್ಯೆ

  ನಟ ಜಗ್ಗೇಶ್ ಅವರ ಮಿತ್ರ ಕೆಸಿಎನ್ ಕುಮಾರ್ ಅವರ ತಂಗಿ ಮಗನನ್ನ ಕಿಡಿಗೇಡಿಗಳು ಕೊಲೆ ಮಾಡಿರುವುದಾಗಿ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಗೆಳಯನ ಸೋದರಳಿಯನ ಮೇಲೆ ಆಗಿರುವ ಈ ಕೃತ್ಯಕ್ಕೆ ಜಗ್ಗೇಶ್ ಖಂಡಿಸಿದ್ದಾರೆ.

  ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್

  ಗಾಂಜಾ ವ್ಯಸನಿಗಳೇ ಇದಕ್ಕೆ ಕಾರಣ

  ಬೆಂಗಳೂರಿನಲ್ಲಿ ರಕ್ಷಣೆ ಎಲ್ಲಿದೆ ಎಂಬ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ. ಯಾಕಂದ್ರೆ, ಪಿಕ್ ಪ್ಯಾಕೇಟ್, ಸರಗಳ್ಳತನ, ಮೊಬೈಲ್ ಕಳ್ಳತನ ಮಾಡಲು ಮುಂದಾಗ್ತಾರೆ. ಸಿಕ್ಕಿ ಹಾಕಿಕೊಳ್ಳುವ ಸಂದರ್ಭ ಬಂದರೇ ಕೊಲೆ ಮಾಡುವ ಮಟ್ಟಕ್ಕೆ ಹೋಗ್ತಾರೆ. ಇಂತಹವರಿಗೆ ಜೈಲು ಇಲ್ಲ, ಶಿಕ್ಷೆಯೂ ಇಲ್ಲ ಎಂಬುದು ಬೇಸರದ ಸಂಗತಿ.

  ಎಚ್ಚರದಿಂದಿರಿ ಸಾರ್ವಜನಿಕರೇ....

  ಖಂಡಿತವಾಗಿಯೂ ಕಾಲ ಕೆಟ್ಟೋಗಿದೆ. ರಾತ್ರಿ-ಹಗಲು ಎಂಬ ವ್ಯತ್ಯಾಸವಿಲ್ಲದೇ ಹತ್ಯೆಗಳು, ದರೋಡೆಗಳು ನಡೆಯುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿವವರು ಸ್ವಲ್ಪ ಹೆಚ್ಚು ಜಾಗೃತವಾಗಿರಿ ಎಂದು ನಟ ಜಗ್ಗೇಶ್ ಎಚ್ಚರಿಕೆ ನೀಡುತ್ತಿದ್ದಾರೆ.

  ನನಗೆ ರೌಡಿ ಪಟ್ಟ ಕೊಟ್ಟರು

  ಇನ್ನು ಕಳೆದ ಕೆಲ ದಿನಗಳ ಹಿಂದೆ ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬನ ಮೇಲೆ ಜಗ್ಗೇಶ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ವರದಿಯಾಗಿತ್ತು. ಆದ್ರೆ, ಜಗ್ಗೇಶ್ ಅವರು ಆ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆ ಘಟನೆಯನ್ನ ತಿರುಚಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದಿದ್ದರು. ಈಗ ಅದನ್ನ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.

  ವ್ಯಕ್ತಿ ಮೇಲೆ ಜಗ್ಗೇಶ್ ಹಲ್ಲೆ ಆರೋಪ: ಘಟನೆ ತಿರುಚಲಾಗಿದೆ ಎಂದ ನಟವ್ಯಕ್ತಿ ಮೇಲೆ ಜಗ್ಗೇಶ್ ಹಲ್ಲೆ ಆರೋಪ: ಘಟನೆ ತಿರುಚಲಾಗಿದೆ ಎಂದ ನಟ

  ಇಲ್ಲಿನ ಪರಿಸ್ಥಿತಿ ಹಾಗಾಗಿದೆ

  ತಪ್ಪಿತಸ್ಥರಿಗೆ ಶಿಕ್ಷೆ ನೀಡಿದರೂ, ಅಂತವರನ್ನ ರಕ್ಷಿಸಲು ಕೂಡ ಕೆಲವರು ಕೆಲಸ ಮಾಡ್ತಾರೆ. ಮತ್ತೆ ಏನಾಗುತ್ತೆ. ಅವರು ಹೊರಗೆ ಬಂದು ಮತ್ತೆ ಅದೇ ಮಾಡ್ತಾರೆ. ಏನು ಮಾಡಲು ಸಾಧ್ಯವಿಲ್ಲ. ಇಲ್ಲಿನ ಪರಿಸ್ಥಿತಿ ಹಾಗಾಗಿದೆ ಎನ್ನುತ್ತಾರೆ ನಟ ಜಗ್ಗೇಶ್.

  English summary
  Kannada actor jaggesh has taken his twitter account to expressed his anger over the murder of Producer Kcn kumar sister's son.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X