For Quick Alerts
  ALLOW NOTIFICATIONS  
  For Daily Alerts

  ನಟಿ ಮಾಲಾಶ್ರೀಗೆ ತಲೆಬಾಗಿ ಕ್ಷಮೆ ಕೇಳಿದ ಹಿರಿಯ ನಟ ಜಗ್ಗೇಶ್

  |

  ಕನ್ನಡದ ಖ್ಯಾತ ನಿರ್ಮಾಪಕ ರಾಮು ಅವರು ಕೊರೊನಾದಿಂದ ನಿಧನರಾದ ಸುದ್ದಿ ಚಂದನವನವನ್ನು ಬಹುವಾಗಿ ಕಾಡಿದೆ. ರಾಮು ಅವರ ಪತ್ನಿ ಖ್ಯಾತ ನಟಿ ಮಾಲಾಶ್ರೀ ಅವರಿಗೆ ಹಲವಾರು ಮಂದಿ ಸಿನಿ ಸೆಲೆಬ್ರಿಟಿಗಳು ಸಾಂತ್ವಾನ ಹೇಳಿದ್ದಾರೆ.

  ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರು ನಟಿ ಮಾಲಾಶ್ರೀ ಅವರಿಗೆ ಸಾಂತ್ವಾನ ಹೇಳಿದ್ದು, ''ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ! ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ! ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ'' ಎಂದಿದ್ದಾರೆ ನಟ ಜಗ್ಗೇಶ್.

  ಮುಂದುವರೆದು, ''ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ. ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನ ರಾಮು ಎತ್ತರಕ್ಕೆ ಬೆಳಸಿ..ನಿಮ್ಮ ಜೊತೆ ನಾವು ಉಧ್ಯಮದ ಎಲ್ಲಾ ಸ್ನೇಹಿತರು ಸದಾ ಇರುತ್ತೇವೆ.. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು'' ಎಂದಿದ್ದಾರೆ ಜಗ್ಗೇಶ್.

  ಜಗ್ಗೇಶ್ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಸಿನಿಗಣ್ಯರಾದ ಪುನೀತ್ ರಾಜ್‌ಕುಮಾರ್, ಸುದೀಪ್, ಶ್ರುತಿ, ಮಾಳವಿಕ ಅವಿನಾಶ್, ಶ್ರೀಮುರಳಿ ಇನ್ನೂ ಹಲವಾರು ಮಂದಿ ರಾಮು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿಸದ್ದರು ಮತ್ತು ಮಾಲಾಶ್ರೀ ಅವರಿಗೆ ಸಾಂತ್ವನ ಹೇಳಿದ್ದಾರೆ.

  ಕಿತ್ತಾಡೋದು ಬಿಟ್ಟು ಜನರ ಜೀವ ಉಳಿಸಿ ಸರ್ಕಾರಕ್ಕೆ ಇದು ದೊಡ್ಡ ಕೆಲಸ ಅಲ್ಲ | Filmibeat Kannada

  'ಕೋಟಿ ರಾಮು' ಎಂದೇ ಹೆಸರಾಗಿದ್ದ ಖ್ಯಾತ ನಿರ್ಮಾಪಕ ರಾಮು ಅವರು ಏಪ್ರಿಲ್ 26 ರಂದು ಕೊರೊನಾಕ್ಕೆ ಬಲಿಯಾದರು. ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರ ಪತಿಯಾಗಿದ್ದ ರಾಮು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  English summary
  Actor Jaggesh express his condolence to Malashree on demise of her husband Ramu's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X