ಸೋಲಿಗೆ ನಿಜವಾದ ಕಾರಣ ಬಹಿರಂಗ ಪಡಿಸಿದ ನಟ ಜಗ್ಗೇಶ್
Recommended Video

ಕನ್ನಡ ಚಿತ್ರ ನಟ ನವರಸ ನಾಯಕ ಜಗ್ಗೇಶ್ ಅವರು ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದಾರೆ.
ಸುಮಾರು 45 ಸಾವಿರ ಮತಗಳ ಅಂತರದಿಂದ ಪರಾಜಯ ಕಂಡಿರುವ ಜಗ್ಗೇಶ್ ಅವರು ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಎಸ್.ಟಿ ಸೋಮಶೇಖರ್ ಸುಮಾರು 1 ಲಕ್ಷ ಮತಗಳನ್ನ ಪಡೆದು ಜಯಶಾಲಿಯಾಗಿದ್ದರೇ, ಜೆಡಿಎಸ್ ಪಕ್ಷದ ಜವರಾಯಿ ಗೌಡ 95 ಸಾವಿರ ಮಗಳನ್ನ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಫಲಿತಾಂಶದ ಬಗ್ಗೆ ಈಗ ನಟ ಹಾಗೂ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ತನ್ನ ಸೋಲಿಗೆ ಕಾರಣ ಏನು ಎಂಬುದನ್ನ ಹೇಳಿಕೊಂಡಿದ್ದಾರೆ.

ಬೇಸರ ವ್ಯಕ್ತಪಡಿಸಿ ಜಗ್ಗೇಶ್
ಚುನಾವಣೆಯಲ್ಲಿ ಜಗ್ಗೇಶ್ ಅವರು ಸೋತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತು ಹಣ, ಹೆಂಡ ಈ ಚುನಾವಣೆಯಲ್ಲಿ ಗೆದ್ದಿದೆ ಅಂದಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾತನಾಡಿರುವ ನಟ ''ಇದು ನನ್ನ ಸೋಲಲ್ಲ. ನನ್ನ ಮೇಲಿನ ಅಭಿಮಾನ ಗೆದ್ದಿದೆ'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
3 ತಿಂಗಳ ಮೊದಲೇ ಕಣಕ್ಕಿಳಿಸಬೇಕಿತ್ತು
ಜಗ್ಗೇಶ್ ಅವರು ಹೇಳುವ ಪ್ರಕಾರ ''ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿದ್ದೆ ಕೊನೆಯ ಘಳಿಗೆಯಲ್ಲಿ. ಸಿಕ್ಕ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮ ಪಟ್ಟು ಪ್ರಚಾರ ಮಾಡಿ ಜನರ ಅಭಿಮಾನಿಗಳಿಸಿಕೊಂಡಿದ್ದೇನೆ. ಒಂದು ವೇಳೆ ಮೂರು ತಿಂಗಳ ಮುಂಚೆಯೇ ನನಗೆ ಅವಕಾಶ ನೀಡಿದ್ದರೇ ಅದರ ಚಿತ್ರಣವೇ ಬೇರೆ ಆಗುತ್ತಿತ್ತು'' ಎಂದು ಜಗ್ಗೇಶ್ ತಿಳಿಸಿದ್ದಾರೆ.

10ದಿನಕ್ಕೇ ಈ ಅಭಿಮಾನ ಸಿಕ್ಕಿದೆ
''ಕೇವಲ 10 ದಿನದ ಶ್ರಮಕ್ಕೆ ಹಾಗೂ ಹಣಹೆಂಡ ಹಂಚದೆ. ಕಲಾವಿದನೆಂಬ ಅಭಿಮಾನದಿಂದ 52,946 ಮತ ನೀಡಿದ ಯಶವಂತಪುರದ ಮಹನೀಯರಿಗೆ ಧನ್ಯವಾದ'' ತಿಳಿಸಿದ್ದಾರೆ ನಟ ಜಗ್ಗೇಶ್.

2008 ರಲ್ಲಿ ಗೆಲುವು ಕಂಡಿದ್ದ ಜಗ್ಗೇಶ್
2008ರಲ್ಲಿ ಕಾಂಗ್ರೆಸ್ಸಿನಿಂದ ತುರುವೇಕೆರೆಯಲ್ಲಿ ಸ್ಪರ್ಧಿಸಿದ್ದ ಜಗ್ಗೇಶ್ 47,849 ಮತಗಳನ್ನು ಗಳಿಸಿದರೆ, ಬಿಜೆಪಿಯ ಎಂ. ಡಿ ಲಕ್ಷ್ಮಿನಾರಾಯಣ (ಅಣ್ಣಯ್ಯ) ಅವರು 30776 ಮತ ಗಳಿಸಿ ಸೋಲು ಕಂಡಿದ್ದರು.


Click it and Unblock the Notifications











