twitter
    For Quick Alerts
    ALLOW NOTIFICATIONS  
    For Daily Alerts

    ಮಾಧ್ಯಮದ ಮುಂದೆ ಅಬ್ಬರಿಸಿದ ದರ್ಶನ್: ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಜಗ್ಗೇಶ್

    |

    ನಡ ದರ್ಶನ್ ನಿನ್ನೆ ಮಾಧ್ಯಮಗಳ ಮುಂದೆ ಅಬ್ಬರಿಸಿದ್ದಾರೆ. ಇಂದ್ರಜಿತ್ ಲಂಕೇಶ್, ಉಮಾಪತಿ, ಪ್ರೇಮ್ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಇಂದ್ರಜಿತ್‌ಗಂತೂ ಗಂಡಸ್ತನದ ಸವಾಲು ಹಾಕಿದ್ದಾರೆ.

    Recommended Video

    Darshan - Indrajit ಗಲಾಟೆಯಲ್ಲಿ Prem ಸಿಕ್ಕಿಕೊಂಡಿದ್ದು ಹೇಗೆ? | Filmibeat Kannada

    ಇದರ ನಡುವೆ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ''ಈ ಬೆಳವಣಿಗೆ ಸರಿಯಲ್ಲ'' ಎಂಬ ಬುದ್ಧಿವಾದ ಹೇಳಲು ಯತ್ನಿಸಿದ್ದಾರೆ.

    ದೊಡ್ಮನೆ ಆಸ್ತಿ ವಿಚಾರ ತೆಗೆದ ಉಮಾಪತಿ ವಿರುದ್ಧ ದರ್ಶನ್ ಗರಂದೊಡ್ಮನೆ ಆಸ್ತಿ ವಿಚಾರ ತೆಗೆದ ಉಮಾಪತಿ ವಿರುದ್ಧ ದರ್ಶನ್ ಗರಂ

    ''ಕಲಾವಿದರು, ವರ್ಷಕ್ಕೊಮ್ಮೆ ಹೊರ ಬರುವ ಊರ ದೇವರ ತರಹ ಇರಬೇಕು, ಪ್ರತಿದಿನ ಹೊರಬಂದರೆ ದೇವರು ಸಹ ಮೌಲ್ಯ ಕಳೆದುಕೊಳ್ಳುತ್ತದೆ'' ಎಂದು ನಿತ್ಯಸುದ್ದಿಯಲ್ಲಿರುವವರಿಗೆ ಪರೋಕ್ಷವಾಗಿ ಬುದ್ಧಿವಾದ ಹೇಳಿದ್ದಾರೆ ಜಗ್ಗೇಶ್.

    ಮಾಧ್ಯಮಗಳಿಗೂ ಮನವಿ ಮಾಡಿರುವ ಜಗ್ಗೇಶ್, ''ಆತ್ಮೀಯ ಮಾಧ್ಯಮಮಿತ್ರರು ಕಲಾರಂಗದ ನಮ್ಮಕಾಯಕ ಜನರಿಗೆ ತಲುಪಿಸೋ ನಾವಿಕರು, ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕು ನೋವಾದರು ನಮಗೆ ನಷ್ಟ, ದಯಮಾಡಿ ನಮ್ಮ ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗುವಂತೆ ಮಾಡಬೇಡಿ'' ಎಂದಿದ್ದಾರೆ.

    ಒಡೆದ ಮನಸ್ಸುಗಳನ್ನು ಸರಿಪಡಿಸಿ: ಜಗ್ಗೇಶ್

    ಒಡೆದ ಮನಸ್ಸುಗಳನ್ನು ಸರಿಪಡಿಸಿ: ಜಗ್ಗೇಶ್

    ''ಈಗಾಗಲೆ ಚಿತ್ರರಂಗ ಕರೋನ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ. ಉಧ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಪ್ರಾರ್ಥನೆ'' ಎಂದು ಚಿತ್ರರಂಗದ ಹಿರಿಯರನ್ನು, ವಾಣಿಜ್ಯ ಮಂಡಳಿಯನ್ನು ದರ್ಶನ್ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದ ಬಗ್ಗೆ ಅಸಮಾಧಾನ

    ಸಾಮಾಜಿಕ ಜಾಲತಾಣದ ಬಗ್ಗೆ ಅಸಮಾಧಾನ

    ಸಾಮಾಜಿಕ ಜಾಲತಾಣಗಳ ಬಗ್ಗೆ ಅಸಮಾಧಾನ ಹೊರಹಾಕಿರುವ ಜಗ್ಗೇಶ್, '' ನೆನಪಿಡಿ ಇಂದು ನೂರಾರು ಮಾಧ್ಯಮ, ಹತ್ತಾರು ವರ್ಷ ಸಾಧನೆಯನ್ನು ಕ್ಷಣಮಾತ್ರದಲ್ಲೆ ಅನುಮಾನದಿಂದ ಸಾಧಕನನ್ನು ನೋಡುವಂತೆ ಮಾಡುವ ಮಾಯಾಜಾಲ ಈ ಸಾಮಾಜಿಕ ಜಾಲತಾಣ. ಸಿಕ್ಕಸಿಕ್ಕವರ ಕೈಲಿ ಈ ಜಾಲ ಸಿಕ್ಕು ವಯಸ್ಸು, ಸಾಧನೆ, ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆ ಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವಂಥಹಾ ವಿಪರ್ಯಾಸದ ದಿನಗಳು ಇವು. ಇಂದಿನ ಸಾರ್ವಜನಿಕ ಜೀವನ ಸಾರ್ವಜನಿಕ ಶೌಚಾಲಯದಂತೆ ಆಗಿವೆ. ಕಲಾವಿದರು ಚರ್ಮ ದಪ್ಪ ಮಾಡಿಕೊಂಡು ಬದುಕಬೇಕು'' ಎಂದಿದ್ದಾರೆ ಜಗ್ಗೇಶ್.

    ನಾನೊಬ್ಬನೇ ಸಾಧಿಸಿದೆ ಎಂದರೆ ದ್ರೋಹವಾಗುತ್ತದೆ: ಜಗ್ಗೇಶ್

    ನಾನೊಬ್ಬನೇ ಸಾಧಿಸಿದೆ ಎಂದರೆ ದ್ರೋಹವಾಗುತ್ತದೆ: ಜಗ್ಗೇಶ್

    ''ಹಠ ಬಿಡಲಿಲ್ಲಾ ಗಾಂಧಿನಗರ ಅಲೆದು ಚಪ್ಪಲಿಸವೆಸಿ ದಡಮುಟ್ಟಿದೆ ಎಂದುಬಿಟ್ಟರೆ ಆತ್ಮ ಧ್ರೋಹ ಆಗಿಬಿಡುತ್ತದೆ ಕಾರಣ ದಡಮುಟ್ಟಿಸಿದ್ದು ಅಂದಿನ ನಿರ್ದೇಶಕರು ನಿರ್ಮಾಪಕರು ಮಾಧ್ಯಮಮಿತ್ರರು ಹಾಗು ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು'' ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ ಜಗ್ಗೇಶ್. ದರ್ಶನ್ ಹೇಳಿಕೆ ಹೊರಬಿದ್ದ ನಂತರ ಜಗ್ಗೇಶ್ ಈ ಮಾತುಗಳನ್ನು ಹೇಳಿರುವ ಕಾರಣ ಇವಕ್ಕೆ ವಿಶೇಷ ಅರ್ಥವಿದೆ.

    ಜಗ್ಗೇಶ್‌ ಬಗ್ಗೆಯೂ ಮಾತನಾಡಿದ ದರ್ಶನ್

    ಜಗ್ಗೇಶ್‌ ಬಗ್ಗೆಯೂ ಮಾತನಾಡಿದ ದರ್ಶನ್

    ನಿನ್ನೆ ದರ್ಶನ್ ಮಾಧ್ಯಮಗಳ ಬಳಿ ಮಾತನಾಡುವಾಗ ಜಗ್ಗೇಶ್ ಹೆಸರೂ ಸಹ ಹೇಳಿದರು. ಹಿರಿಯ ನಟರೊಬ್ಬರ ಜೊತೆ ವಿವಾದ ಆಯಿತು. ನಮ್ಮ ಸೆಲೆಬ್ರಿಟಿಗಳು (ಅಭಿಮಾನಿ) ಏನೋ ಮಾಡಿದರು. ನಾನು ಕ್ಷಮೆ ಕೇಳಿದೆ. ಅಲ್ಲಿ ಸಾಕ್ಷ್ಯ ಇತ್ತು. (ಜಗ್ಗೇಶ್ ಆಡಿಯೋ) ಆದರೂ ಕ್ಷಮೆ ಕೇಳಿದೆ. ಹಾಗೆಂದು ಎಲ್ಲ ಚಾನೆಲ್‌ಗೆ ಹೋಗಿ, ಮತ್ತೆ ಮತ್ತೆ ನಾನು ಯಾಕೆ ಕ್ಷಮೆ ಕೇಳಬೇಕು'' ಎಂದು ದರ್ಶನ್ ನಿನ್ನೆ ಹೇಳಿದರು.

    English summary
    Jaggesh Facebook post on his life and ongoing Darshan controversy. He said senior actors and film chamber should settle this ongoing issue.
    Sunday, July 18, 2021, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X