ರೊಚ್ಚಿಗೆದ್ದ ಜಗ್ಗೇಶ್: ನಕಲಿ ಖಾತೆ ಮಾಡಿದವರಿಗೆ ಮುಂದೈತೆ ಮಾರಿಹಬ್ಬ

Recommended Video

ನೀವು ನೋಡಿರದ ನವರಸನಾಯಕ ಈತ | Oneindia Kannada

ತಮ್ಮ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ಸೃಷ್ಟಿಸಿ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ನಟ ನವರಸ ನಾಯಕ ಜಗ್ಗೇಶ್ ಆಕ್ರೋಶಗೊಂಡಿದ್ದಾರೆ. ದುರ್ಬಳಕೆ ಮಾಡುತ್ತಿರುವ ದುಷ್ಟರ ವಿರುದ್ಧ ಕ್ರಮ ಜರುಗಿಸುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಸೈಬರ್ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಇತ್ತೀಚಿಗಷ್ಟೆ ನಟ ಜಗ್ಗೇಶ್ ಹೆಸರಿನಲ್ಲಿ ರಫೇಲ್ ಹಗರಣಕ್ಕೆ ಸಂಬಂಧಸಿದಂತೆ ಮಾಡಲಾಗಿದ್ದ ಟ್ವೀಟ್ ವೊಂದು ವೈರಲ್ ಆಗಿತ್ತು. ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಇಲಾಖೆಯಲ್ಲಿದ್ದ ದಾಖಲೆಗಳು ಕಳ್ಳತನವಾಗಿದೆ ಎಂದು ವರದಿಯಾಗಿತ್ತು.

Jaggesh filed complaint against fake tweets

ಇದಕ್ಕೆ ಜಗ್ಗೇಶ್ ಪ್ರತಿಕ್ರಿಯೆ ನೀಡಿರುವಂತಿಂದ್ದ ಟ್ವೀಟ್ ನಲ್ಲಿ ''ರಫೇಲ್ ಹಗರಣದ ದಾಖಲೆಗಳು ಕಳ್ಳತನವಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಮೈತ್ರಿ ಸರ್ಕಾರಕ್ಕೆ ಒಂದು ಕಡತವನ್ನ ರಕ್ಷಣೆ ಮಾಡಲು ಸಾಧ್ಯವಾಗದೇ ಇದ್ದರೇ ಜನರ ರಕ್ಷಣೆಯನ್ನ ಹೇಗೆ ಮಾಡ್ತಾರೆ?'' ಎಂದು ಪ್ರಶ್ನಿಸಿರುವಂತಹ ಟ್ವೀಟ್ ವೈರಲ್ ಆಗಿತ್ತು.

ಇದನ್ನ ನೋಡಿ ಜನರು ಜಗ್ಗೇಶ್ ಅವರಿಗೆ ಟೀಕಿಸಿದ್ದರು. ''ರಫೇಲ್ ಹಗರಣ ಕೇಂದ್ರ ಸರ್ಕಾರದ್ದು, ರಾಜ್ಯ ಸರ್ಕಾರದಲ್ಲ'' ಎಂದು ವ್ಯಂಗ್ಯ ಮಾಡಿದ್ದರು. ಜಗ್ಗೇಶ್ ವಿರುದ್ಧ ನೆಟ್ಟರಿಗರು ಕಿಡಿಕಾರಿದ್ದರು. ಇದನ್ನ ಗಮನಿಸಿದ ಜಗ್ಗೇಶ್ ಈಗ ಪೊಲೀಸ್ ದೂರು ನೀಡಿ, ತಮ್ಮ ಟ್ವಿಟ್ಟರ್ ಖಾತೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

More from Filmibeat

English summary
Actor and BJP politician Jaggesh has filed a complaint with the Malleshwaram police alleging that fake tweets attributed to him are being circulated online.
Read more about: jaggesh ಜಗ್ಗೇಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X