For Quick Alerts
  ALLOW NOTIFICATIONS  
  For Daily Alerts

  ''ಮಗನ ಬಗ್ಗೆ ಅಪಪ್ರಚಾರ ಮಾಡಬೇಡಿ'' ಜಗ್ಗೇಶ್ ಹೀಗೆ ಹೇಳಿದ್ಯಾಕೆ?

  By Naveen
  |
  ಜಗ್ಗೇಶ್ ಮಗನ ಬಗ್ಗೆ ಹೇಳಿದ್ದೇನು ಗೊತ್ತಾ..? | Filmibeat Kannada

  ನಟ ಜಗ್ಗೇಶ್ ಚುನಾವಣೆ ಮುಗಿಸಿ ಮತ್ತೆ ಸಿನಿಮಾದ ಕೆಲಸಗಳಲ್ಲಿ ತೊಡಗಿದ್ದಾರೆ. ಸದ್ಯ 'ಪ್ರೀಮಿಯರ್ ಪದ್ಮಿನಿ' ಚಿತ್ರೀಕರಣದಲ್ಲಿ ಜಗ್ಗೇಶ್ ಬಿಜಿ ಇದ್ದಾರೆ. ಚಿತ್ರಗಳ ಕೆಲಸದ ಜೊತೆಗೆ ಜಗ್ಗೇಶ್ ಟ್ವಿಟ್ಟರ್ ಖಾತೆಯ ಮೂಲಕ ದಿನನಿತ್ಯ ಅಭಿಮಾನಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ.

  ಪ್ರತಿ ದಿನ ಟ್ವಿಟ್ಟರ್ ನಲ್ಲಿ ಅನೇಕ ವಿಚಾರಗಳನ್ನು ಜಗ್ಗೇಶ್ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಈಗ ತಮ್ಮ ಮಗನ ಬಗ್ಗೆ ಜಗ್ಗೇಶ್ ಬರೆದುಕೊಂಡಿದ್ದಾರೆ. ಜಗ್ಗೇಶ್ ತಮ್ಮ ಎರಡನೇ ಮಗ ಯತಿರಾಜ್ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಹೇಳುತ್ತಿದ್ದಾರೆ.

  ವ್ಯಾಘ್ರ ಗುಣವಿದ್ದ ಜಗ್ಗೇಶ್ ರನ್ನು ಬದಲಾಯಿಸಿದ್ದು ಈ ಪುಸ್ತಕವಂತೆ ವ್ಯಾಘ್ರ ಗುಣವಿದ್ದ ಜಗ್ಗೇಶ್ ರನ್ನು ಬದಲಾಯಿಸಿದ್ದು ಈ ಪುಸ್ತಕವಂತೆ

  ಜಗ್ಗೇಶ್ ರೀತಿ ಅವರ ಇಬ್ಬರ ಮಕ್ಕಳು ಸಹ ಚಿತ್ರರಂಗಕ್ಕೆ ಬಂದರು. ಜಗ್ಗೇಶ್ ಅವರ ಎರಡನೇ ಮಗ ಯತಿರಾಜ್ 'ತರ್ಲೆ ನನ್ ಮಕ್ಳು' ಚಿತ್ರದಲ್ಲಿಯೂ ನಟಿಸಿದ್ದರು.

  ಸ್ಯಾಂಡಲ್ ವುಡ್ 'ಬಾಸ್' ಯಾರು? ಎಂಬ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರವಿದು ಸ್ಯಾಂಡಲ್ ವುಡ್ 'ಬಾಸ್' ಯಾರು? ಎಂಬ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರವಿದು

  ಆದರೆ, ಜಗ್ಗೇಶ್ ಈಗ ತಮ್ಮ ಮಗನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಜಗ್ಗೇಶ್ ಯಾಕೆ ಹೀಗೆ ಹೇಳುತ್ತಿದ್ದಾರೆ ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ...

  ಯತಿರಾಜ್ ಹೊಸ ಸಿನಿಮಾದ ಟೈಟಲ್

  ಯತಿರಾಜ್ ಹೊಸ ಸಿನಿಮಾದ ಟೈಟಲ್

  ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಡ್ರಗ್ ಮಾಫಿಯಾದ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸುದ್ದಿ ಇದೀಗ ಪ್ರಕಟ ಆಗಿದ್ದು, ಅದಕ್ಕೆ ನೀಡಿದ್ದ ಟೈಟಲ್ ಗೆ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  ಪ್ರಚಾರ ಅಪಪ್ರಚಾರಕ್ಕೆ ದಾರಿ

  ಮಗನ ಬಗ್ಗೆ ಬಂದ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ''ಇದು ಯತಿರಾಜ್ ನಟಿಸಿರುವ 'ಗೋಸಿ ಗ್ಯಾಂಗ್' ಚಿತ್ರದ ಕಥೆ. ಈ ಚಿತ್ರದ ಪ್ರಚಾರಕ್ಕೆ ಇಂಥ ಶೀರ್ಷಿಕೆ ಅಷ್ಟೆ. ಕೆಲವೊಮ್ಮೆ ಪ್ರಚಾರ ಅಪಪ್ರಚಾರಕ್ಕೆ ದಾರಿಯಾಗುತ್ತೆ.'' ಎಂದು ಹೇಳಿದ್ದಾರೆ.

  ಜಗ್ಗೇಶ್ ಸ್ಪಷ್ಟೀಕರಣ

  ಜಗ್ಗೇಶ್ ಸ್ಪಷ್ಟೀಕರಣ

  ''ಕೆಲವರಿಗೆ ಈ ರೀತಿಯ ವಿಷಯ ಅರಿವುದಕ್ಕೆ ಸ್ವಲ್ಪ ತಾಳ್ಮೆ ಕಮ್ಮಿ. ಪ್ರಚಾರ ಅಪಪ್ರಚಾರ ಆಗುವುದು ಬೇಡ. ಮಾಧ್ಯಮಕ್ಕೆ ನಮ್ಮ ಹಾಗೂ ನಮ್ಮ ಕುಟುಂಬದ ಅರಿವಿದೆ. ಧನ್ಯವಾದ'' ಎಂದು ಜಗ್ಗೇಶ್ ಮಗನ ಸಿನಿಮಾ ಸುದ್ದಿಯ ವಿಚಾರಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.

  ಯತಿರಾಜ್ ಸಿನಿಮಾದ ಬಗ್ಗೆ

  ಯತಿರಾಜ್ ಸಿನಿಮಾದ ಬಗ್ಗೆ

  'ಗೋಸಿ ಗ್ಯಾಂಗ್' ಯತಿರಾಜ್ ನಟಿಸುತ್ತಿರುವ ಹೊಸ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಡ್ರಗ್ ಮಾಫಿಯಾದ ಕಥೆ ಹೊಂದಿದೆ. ಚಿತ್ರದಲ್ಲಿ ಯತಿರಾಜ್ ಜೊತೆಗೆ ಅಜಯ್ ಕಾರ್ತಿಕ್ ನಟಿಸಿದ್ದಾರೆ. ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗುತ್ತಿದೆಯಂತೆ. ರಾಜು ದೇವಸಂದ್ರ ಸಿನಿಮಾಗೆ ನಿರ್ದೇಶನ ಮಾಡಿದ್ದು, ಕೆ.ಶಿವಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

  English summary
  Kannada actor Jaggesh gave clarification about his son Yathiraj movie title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X