»   » 'ಹ್ಯಾಂಗೋವರ್' ಚಿತ್ರಕ್ಕೆ ಜೊತೆಯಾದ ಜಗ್ಗೇಶ್

'ಹ್ಯಾಂಗೋವರ್' ಚಿತ್ರಕ್ಕೆ ಜೊತೆಯಾದ ಜಗ್ಗೇಶ್

Posted By:
Subscribe to Filmibeat Kannada

ವಿಠಲ್‌ ಭಟ್‌ ನಿರ್ದೇಶನದ 'ಹ್ಯಾಂಗೋವರ್' ಬಹುತೇಕ ಚಿತ್ರೀಕರಣ ಮುಗಿದಿದೆ. ಟೈಟಲ್ ಗೆ ತಕ್ಕಂತೆ ಚಿತ್ರದಲ್ಲೂ ಹ್ಯಾಂಗೋವರ್ ಮಾಡುವಂತಹ ಅಂಶಗಳಿದೆಯಂತೆ. ಮೂವರು ಯುವಕರು ಕುಡಿದ ನಶೆಯಲ್ಲಿ ಮಾಡುವ ಕಿತಾಪತಿ ಚಿತ್ರದ ಹೈಲೈಟ್‌. ಈ ಚಿತ್ರಕ್ಕೀಗ ನವರಸ ನಾಯಕ ಜಗ್ಗೇಶ್ ಸಾಥ್ ಕೊಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಹೌದು, 'ಹ್ಯಾಂಗೋವರ್' ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡುವ ಮೂಲಕ ಹೊಸಬರ ತಂಡವನ್ನ ಪ್ರೋತ್ಸಾಹಿಸಿದ್ದಾರೆ ಜಗ್ಗೇಶ್. ನವರಸ ನಾಯಕ ಜಗ್ಗೇಶ್ ಅವರ ಧ್ವನಿಯಿಂದಲೇ ಚಿತ್ರ ಆರಂಭ-ಅಂತ್ಯ ಮತ್ತು ಚಿತ್ರದಲ್ಲಿರುವ ಮೂವರು ನಾಯಕರ ಪರಿಚಯವೂ ಆಗುತ್ತದೆ. 'ಹ್ಯಾಂಗೋವರ್' ಅಂದ್ರೆ ಏನು? ಎಂಬದನ್ನು ಜಗ್ಗೇಶ್ ಅವರ ಧ್ವನಿಯ ಮುಖಾಂತರ ಹೇಳಲಿದ್ದಾರೆ ನಿರ್ದೇಶಕರು.

ಹೊಸಬರು ಚಿತ್ರರಂಗಕ್ಕೆ ಬರಬೇಕು, ಹೊಸ ತಂಡ ಉಳಿಬೇಕು, ಬೆಳಿಬೇಕು ಮತ್ತು ಕನ್ನಡ ಚಿತ್ರರಂಗ ಉನ್ನತ ಶಿಖರಕ್ಕೇರಬೇಕು ಎಂಬ ಚಿತ್ರರಂಗದ ಮೇಲಿನ ಪ್ರೀತಿಯಿಂದಲೇ ಜಗ್ಗೇಶ್ ಅವರು ಸಾಕಷ್ಟು ಹೊಸಬರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಲ್ಲಿಯೂ ಜಗ್ಗೇಶ್ ಪ್ರೀತಿಯಿಂದ ತಮ್ಮ ಧ್ವನಿಯನ್ನು ನೀಡುವುದರಿಂದ 'ಹ್ಯಾಂಗೋವರ್' ತಂಡಕ್ಕೆ ಮತ್ತಷ್ಟು ಭರವಸೆ ಹುಟ್ಟಿದೆ.

Jaggesh give voice to hangover movie

ರಮನೀ ರೀಲ್ಸ್ ಸಂಸ್ಥೆಯ ಚೊಚ್ಚಲ ಸಿನಿಮಾ 'ಹ್ಯಾಂಗೋವರ್' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಸಧ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಸಿದ್ದತೆಗಳನ್ನು ನಡೆಸುತ್ತಿದೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನ ಇರುವ ಹ್ಯಾಂಗೋವರ್ ಗೆ ಯೋಗಿ ಕ್ಯಾಮರಾ ಹಿಡಿದಿದ್ದು ರಾಖೇಶ್.ಡಿ ಹಣವನ್ನು ಹೊಂದಿಸಿದ್ದಾರೆ.

ನಟ ಜಗ್ಗೇಶ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾದ ಕವಿರಾಜ್

ಇನ್ನು, ಭರತ್‌, ರಾಜ್‌ ಮತ್ತು ಚಿರಾಗ್ ಮೂವರು ಹೀರೋಗಳು. ಇವರಿಗೆ ಮಹತಿ, ಸಹನ್ ಮತ್ತು ನಂದಿನಿ ನಾಯಕಿಯರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರ. ವಿಭಿನ್ನ ತಿರುವುಗಳೊಂದಿಗೆ ಸಾಗುವ ಕಥೆ ಮನರಂಜನೆಯಲ್ಲಿ ಸಾಗಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಏಪ್ರಿಲ್ ಕೊನೆಯ ವಾರ ಬಿಡುಗಡೆ ಮಾಡಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ.

English summary
Navarasa nayaka, Kannada actor Jaggesh has give voice to Hangover movie. the movie directed by vittal bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X