For Quick Alerts
  ALLOW NOTIFICATIONS  
  For Daily Alerts

  ನೀವು ಅರ್ಧಂಬರ್ಧ ತಿಳಿದುಬಿಟ್ಟಿರಾ? ಬಿಸಿ ಪಾಟೀಲ್ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ಜಗ್ಗೇಶ್

  |

  'ಇಂದು ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳನ್ನಷ್ಟೆ ನೋಡಿ, ಹೆಚ್ಚಾಗಿ ಸಿನಿಮಾ ನೋಡಲು ಹೋಗಬೇಡಿ' ಎಂದು ಹೇಳಿದ್ದ ನಟ ಜಗ್ಗೇಶ್ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು. ಸಿನಿಮಾದಿಂದಲೇ ಬೆಳೆದು ಎಲ್ಲವನ್ನು ಸಂಪಾದಿಸಿದ ಈಗ ಸಿನಿಮಾಗಳನ್ನು ನೋಡಬೇಡಿ ಎಂದು ಹೇಳುತ್ತಿದ್ದಾರೆ ಎಂದು ಟೀಕೆ ವ್ಯಕ್ತವಾಗಿತ್ತು.

  ಅಪಾರ್ಥ ಮಾಡಿಕೊಂಡ ಬಿಸಿ ಪಾಟೀಲ್ ಗೆ ಜಗ್ಗೇಶ್ ಅರ್ಥ ಮಾಡಿಸಿದ್ದು ಹೇಗೆ? | Filmibeat Kannada

  ಜಗ್ಗೇಶ್ ಅವರ ಹೇಳಿಕೆಯನ್ನು ಸಂಬಂಧ ಕೃಷಿ ಸಚಿವ ಹಾಗೂ ಸಿನಿಮಾ ಕಲಾವಿದ ಬಿಸಿ ಪಾಟೀಲ್ ಇಂದು ಟ್ವಿಟ್ಟರ್ ಮೂಲಕ ಖಂಡಿಸಿದ್ದರು. 'ಯುವಕರನ್ನು ಹೊಸಬರನ್ನು ಪ್ರೋತ್ಸಾಹಿಸಬೇಕೇ ಹೊರತು ಈ ರೀತಿ ಹೊಸಪ್ರತಿಭೆಗಳನ್ನು, ಹೊಸ ಕಲಾವಿದರನ್ನು ನಿರುತ್ಸಾಹಗೊಳಿಸುವಂತಹ ಹೇಳಿಕೆಗಳನ್ನು ನೀಡಬಾರದು'' ಎಂದು ಟ್ವೀಟ್ ಮಾಡಿದರು.

  ಬಿಸಿ ಪಾಟೀಲ್ ಅವರ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ಜಗ್ಗೇಶ್ ಅವರು ಮತ್ತೊಮ್ಮೆ ಸವಿವರವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಮುಂದೆ ಓದಿ...

  ನನ್ನ ಮಾತು ಸರಿಯಾಗಿ ಅರ್ಥೈಸಿಲ್ಲಾ!

  ನನ್ನ ಮಾತು ಸರಿಯಾಗಿ ಅರ್ಥೈಸಿಲ್ಲಾ!

  ''ನನ್ನ ಮಾತು ಸರಿಯಾಗಿ ಅರ್ಥೈಸಿಲ್ಲಾ. ನಾನು ಹೇಳಿದ್ದು ನಮ್ಮ ಕಲೆ ನಿಮ್ಮ 2 ಘಂಟೆ ಸಂತೋಷಕ್ಕೆ ಮಾತ್ರ ಬಳಸಿಕೊಳ್ಳಿ. ಮಿಕ್ಕಂತೆ ನೀವು ನಿಮ್ಮ ತಂದೆ ತಾಯಿ ಸಮಾಜಕ್ಕೆ ನಾಯಕರಾಗಿ. ನಿಮ್ಮ ರಸ್ತೆ, ನಿಮ್ಮ ಸಮಾಜ, ನಿಮ್ಮ ದೇಶಕ್ಕೆ ಹೀರೋ ಆಗಿರಿ. ಸಿನಿಮಾ ನಾಯಕರು ನನ್ನು ಸೇರಿ ನಿಮ್ಮ ರಂಜಿಸುವವರು ಮಾತ್ರ'' ಎಂದು ಜಗ್ಗೇಶ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

  ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ, ಹೆಚ್ಚು ಸಿನಿಮಾ ನೋಡಬೇಡಿ: ಜಗ್ಗೇಶ್

  ನಿಮಗೆ ಅಪಾರ್ಥವಾಗಿ ಕೇಳಿಸಿತು ನಾಕಾಣೆ?

  ನಿಮಗೆ ಅಪಾರ್ಥವಾಗಿ ಕೇಳಿಸಿತು ನಾಕಾಣೆ?

  ''ರಾಜ್ಯದ ವಕ್ತಾರನಾಗಿ ತಳಮಟ್ಟದಿಂದ ನಿಯುಕ್ತಿಯಾದ ಮಾಧ್ಯಮ ವಕ್ತಾರರಿಗೆ ಕಾರ್ಯಗಾರದಲ್ಲಿ ತಳಮಟ್ಟದಿಂದ ಯುವ ಪೀಳಿಗೆ ಸಿನಿಮಾಗಿಂತ ಹೆಚ್ಚಾಗಿ ಸಮಾಜಕ್ಕೆ ಬಳಕೆಯಾಗುವಂತೆ ಮಾಡಿ, ಕಡ್ಡಾಯ ಪತ್ರಿಕೆ ಓದಿ, ಮಾಧ್ಯಮ ಜೊತೆ ಉತ್ತಮ ಸಂಬಂಧ ಹೊಂದಿ. ನಮ್ಮ ಪಕ್ಷದ ತಳಮಟ್ಟದ ಸೈನಿಕರಂತೆ ಕಾರ್ಯ ಮಾಡಿ ಎಂದು ಜವಾಬ್ದಾರಿಯಿಂದ ಮಾಧ್ಯಮ ಕಾರ್ಯಾಗಾರದಲ್ಲಿನ ಮಂಥನದಲ್ಲಿ 3 ಜಿಲ್ಲೆಯ ವಕ್ತಾರರು, ಸಂಘದ ಹಿರಿಯರು, ಶಾಸಕರ ಸಭೆಯಲ್ಲಿ ಉಧ್ಘಟಕನಾಗಿ ನುಡಿದದ್ದು ಹೇಗೆ ನಿಮಗೆ ಅಪಾರ್ಥವಾಗಿ ಕೇಳಿಸಿತು ನಾಕಾಣೆ?'' ಎಂದು ಸ್ಪಷ್ಟನೆ ನೀಡಿದ್ದಾರೆ

  ತಮ್ಮ ಅಪಾರ್ಥಕ್ಕೆ ಉತ್ತರಿಸಿರುವೆ

  ತಮ್ಮ ಅಪಾರ್ಥಕ್ಕೆ ಉತ್ತರಿಸಿರುವೆ

  ''ಕೆಲವರ ಅಪಾರ್ಥಕ್ಕೆ ನಾ ಉತ್ತರಿಸಲಿಲ್ಲಾ. ತಮ್ಮ ಅಪಾರ್ಥಕ್ಕೆ ಉತ್ತರಿಸಿರುವೆ. ಕಡೆಯಿಂದ ಬೆಳೆದು ಕಲೆ ತೆಗಳಲಿಲ್ಲಾ ಬದಲಾಗಿ ಯುವ ಸಮುದಾಯಕ್ಕೆ ಹೆಚ್ಚು ಜವಾಬ್ದಾರಿಯಿದೆ ಎಂದಿರುವೆ. ಬಹುಶ ತಮಗೆ ವಿಷಯ ಅರಿಯಿತು ಎಂದು ಆತ್ಮಿಯವಾಗಿ ಭಾವಿಸುವೆ'' ಎಂದು ಜಗ್ಗೇಶ್ ಸಮಾಧಾನವಾಗಿ ಪ್ರತಿಕ್ರಿಯಿಸಿದ್ದಾರೆ.

  ಒಳ್ಳೆಯ ಮಾತು ಅಪಾರ್ಥಮಾಡಿಕೊಂಡರೆ

  ಒಳ್ಳೆಯ ಮಾತು ಅಪಾರ್ಥಮಾಡಿಕೊಂಡರೆ

  ''ಇಂದು ಒಂದು ಮಾತಿಗೆ ನೂರು ತಪ್ಪು ಹುಡುಕಿ ಕೆಣಕಿ ಜೀವಿಸುವವರ ಮಧ್ಯದಲ್ಲಿ ಬದುಕಬೇಕು. ಒಳ್ಳೆಯ ಮಾತು ಅಪಾರ್ಥಮಾಡಿಕೊಂಡರೆ ಉತ್ತಮ ಮಾತು ಮೌನವಾಗಿ ಆತ್ಮದಲ್ಲೆ ಉಳಿಯುತ್ತದೆ. ಹಾಗಾಗದಿರಲಿ, ನೇರ ನುಡಿಯುವವನ ಮಾತುಗಳು. ನಿಮ್ಮ ಕಾರ್ಯ ರೈತರಪರವಾಗಿ ಯಶಸ್ವಿಯಾಗಲಿ ಶುಭಹಾರೈಕೆ. ರಾಜ್ಯ ವಕ್ತಾರನಾಗಿ ಸ್ನೇಹಿತನಾಗಿ. ಧನ್ಯವಾದ'' ಎಂದು ಜಗ್ಗೇಶ್ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಉತ್ತರಿಸಿದ್ದಾರೆ.

  English summary
  Kannada senior Actor Jaggesh Gives Clarification To Agriculture Minister BC Patil about his statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X