'ಕುರುಕ್ಷೇತ್ರ' ಸಿನಿಮಾದ ಕಲೆಕ್ಷನ್ ನೋಡಿ ಖುಷಿಯಾದ ಜಗ್ಗೇಶ್
ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಈ ವರ್ಷದ ದೊಡ್ಡ ಹಿಟ್ ಆಗಿದೆ. ಈ ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರದರ್ಶನ ಆಗುತ್ತಿದೆ. ಜೀ ಕನ್ನಡ ವಾಹಿನಿ ಮೂಲಕ ಸಿನಿಮಾ ಮನೆ ಮನೆಗೆ ಬರುತ್ತಿದೆ.
ಈ ಸಿನಿಮಾದ ಬಗ್ಗೆ ನಟ ಜಗ್ಗೇಶ್ ಮಾತನಾಡಿದ್ದಾರೆ. ಜೀ ಕನ್ನಡದ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ 'ಕುರುಕ್ಷೇತ್ರ' ಸಿನಿಮಾವನ್ನು ಜಗ್ಗೇಶ್ ಹೊಗಳಿದ್ದಾರೆ. 'ಕುರುಕ್ಷೇತ್ರ' ಕನ್ನಡದ ಹೆಮ್ಮೆಯ ಸಿನಿಮಾ. ಈ ಸಿನಿಮಾ ನನಗೆ ಇರುವ ಮಾಹಿತಿ ಪ್ರಕಾರ 75 ಕೋಟಿ ಕಲೆಕ್ಷನ್ ಮಾಡಿದೆ ಎಂದಿದ್ದಾರೆ.

'ಕುರುಕ್ಷೇತ್ರ' ಕಲೆಕ್ಷನ್ ಮೊತ್ತವನ್ನು ತಿಳಿಸಿದ ಜಗ್ಗೇಶ್ ಸಿನಿಮಾದ ಯಶಸ್ಸು ಕಂಡು ಖುಷಿಯಾಗಿದ್ದಾರೆ. ನಟಿ ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿದ್ದು, ದರ್ಶನ್ ನನಗೆ ತಾನೇ ಬಂದು ಯಾವ ಸಿನಿಮಾವನ್ನು ನೋಡು ಎಂದು ಹೇಳಿರಲಿಲ್ಲ. ಆದರೆ, ಕುರುಕ್ಷೇತ್ರ ನೋಡು ಎಂದು ಹೇಳಿದ್ದ. ಅವನಿಗೆ ಅಷ್ಟೊಂದು ಆತ್ಮವಿಶ್ವಾಸ ಇತ್ತು ಎಂದರು.
ಇದೇ ಕಾರ್ಯಕ್ರಮದಲ್ಲಿ ನಟ ಕೋಮಲ್ ಕೂಡ ಅತಿಥಿ ಆಗಿದ್ದರು. ಟಿವಿಯಲ್ಲಿ ಸಿನಿಮಾ ಬರುತ್ತಿದ್ದು, ಎಲ್ಲರೂ ನೋಡಿ ಎಂದು ಹೇಳಿದರು. ಅಂದಹಾಗೆ, 'ಕುರುಕ್ಷೇತ್ರ' ಸಿನಿಮಾ ಇದೇ ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.
'ಕುರುಕ್ಷೇತ್ರ' ನಾಗಣ್ಣ ನಿರ್ದೇಶನದ ಸಿನಿಮಾವಾಗಿದ್ದು, ಮುನಿರತ್ನ ನಿರ್ಮಾಣ ಮಾಡಿದ್ದರು. ಈ ವರ್ಷ ನೂರು ದಿನ ಓಡಿದ ಸಿನಿಮಾಗಳ ಪೈಕಿ ಇದು ಒಂದಾಗಿದೆ.


Click it and Unblock the Notifications











