For Quick Alerts
  ALLOW NOTIFICATIONS  
  For Daily Alerts

  ಬಹುದೊಡ್ಡ ಕನಸನ್ನ ಈಡೇರಿಸಿದ ಖುಷಿ, ವೇದಿಕೆಯಲ್ಲೇ ಕಣ್ಣೀರಿಟ್ಟ ಜಗ್ಗೇಶ್

  |

  ಕಳೆದ ಒಂದು ವರ್ಷದಿಂದ ತಮ್ಮ ಹುಟ್ಟೂರಿನಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪಣ ತೊಟ್ಟಿದ್ದ ನವರಸ ನಾಯಕ ಜಗ್ಗೇಶ್ ಕೊನೆಗೂ ತಾವು ಅಂದುಕೊಂಡಿದ್ದ ಮಹತ್ವದ ಕೆಲಸವನ್ನ ಮಾಡಿ ಮುಗಿಸಿದ್ದಾರೆ.

  ತುರುವೇಕೆರೆ ತಾಲೂಕಿನ ಅನಗೋಡು ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇವಸ್ಥಾನವನ್ನ ಪೂರ್ಣಗೊಳಿಸಿ, ಸಂಪ್ರದಾಯವಾಗಿ ಲೋಕಾರ್ಪಣೆ ಮಾಡಿದ್ದಾರೆ ನಟ ಜಗ್ಗೇಶ್. ಈ ವಿಶೇಷ ಕಾರ್ಯಕ್ರಮಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್, ಆದಿಚುಂಚನಗಿರಿ ಮಠದ ಶಾಖಾಮಠದ ಸ್ವಾಮೀಜಿ ಪ್ರಸನ್ನನಾಥ ಸ್ವಾಮೀಜಿ ಆಗಮಿಸಿ ಶುಭಹಾರೈಸಿದರು.

  ನಟ ಜಗ್ಗೇಶ್ ಅವರ ಎರಡು ಕೋರಿಕೆ ನೆರವೇರಿಸಿದ್ದರು ಸಿದ್ದಗಂಗಾ ಶ್ರೀ

  ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದ ಜಗ್ಗೇಶ್ ನಿಂತಲ್ಲೇ ಒಂದು ಕ್ಷಣ ಕಣ್ಣೀರಿಟ್ಟು ಭಾವುಕರಾದರು. ಇನ್ನು ಜಗ್ಗೇಶ್ ಅವರ ಈ ಮಹತ್ವದ ಕೆಲಸದ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್ ಶ್ಲಾಘನೆ ವ್ಯಕ್ತಪಡಿಸಿದರು.

  ಕಳೆದ ಒಂದು ವರ್ಷದಿಂದ ನಟ ಜಗ್ಗೇಶ್ ತಮ್ಮ ಊರಿಗೆ ಹೋದಾಗ ದೇವಸ್ಥಾನ ಕಂಡು ನೂತನ ದೇವಸ್ಥಾನ ಕಟ್ಟಿಸುವ ಸಂಕಲ್ಪ ಮಾಡಿಕೊಂಡಿದ್ದರು. ಪುರೋಹಿತರನ್ನು ಸಂಪರ್ಕಿಸಿ ದೇವಸ್ಥಾನ ಕಟ್ಟುವ ಕಾರ್ಯದಲ್ಲಿ ತಲ್ಲೀನರಾದರು. ಜ್ಯೋತಿಷಿಗಳ ಮಾರ್ಗದರ್ಶನದಂತೆ, ಕಾಶಿ ಪಟ್ಟಣಕ್ಕೆ ಹೋಗಿ ಬಂದು ಹಾಗೂ ಒಂದು ರಾತ್ರಿ ಚಾಂಡಾಲ ವೃತ್ತಿಯನ್ನ ಮಾಡೋ ಸಲುವಾಗಿ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗಿನ ಜಾವ ನಾಲ್ಕೂವರೆ ವರೆಗೂ 11 ಶವಸಂಸ್ಕಾರ ಗಳ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

  'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್

  ನಂತರ ವಿಭೂತಿ ಬೆಳೆದು ಗಂಗಾ ಸ್ನಾನ ಮಾಡಿ ಕಾಶಿಗೆ ಹೋಗಿ ಶಿವನ ಪ್ರಾರ್ಥನೆ ಮತ್ತು ರುದ್ರಾಭಿಷೇಕ ಮುಗಿಸಿ ಕಾಲಭೈರವೇಶ್ವರನ ಮುಂದೆ ನಿಂತು ಪ್ರಾರ್ಥನೆ ಮಾಡಿದ ಬಳಿಕ ಇವರ ಕಾಲಿಗೆ ಒಂದು ಬಳೆ ಹಾಕಿಸಿಕೊಂಡಿದ್ದಾರೆ.

  ಹೀಗೆ, ಕಳೆದ ಒಂದು ವರ್ಷದಿಂದ ಕಾಲಭೈರವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಾಡಿದ್ದ ವ್ರತವನ್ನ ಮುಗಿಸಿ ದೇವರ ಎದುರು ಮಂಡಿಯೂರಿದ್ದಾರೆ. ಒಟ್ಟಾರೆ, ರಾಜಕೀಯ, ಸಿನಿಮಾದಲ್ಲಿ ನಟನೆಯ ಜೊತೆಗೂ ತಮ್ಮ ಹುಟ್ಟೂರಿನ ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡಿ ಆಧ್ಯಾತ್ಮದ ಕಡೆ‌ ಹೆಚ್ಚು ಒಲವು ತೋರುತ್ತಿದ್ದಾರೆ.

  Read more about: jaggesh ಜಗ್ಗೇಶ್
  English summary
  Actor Jaggesh has renovated Kalabhairava temple of his native place turuvekere anagodu village.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X