'ಕಾಲಾ' ಚಿತ್ರ ನೋಡದೆ ಪ್ರತಿಭಟನೆ ಮಾಡಿ : ಜಗ್ಗೇಶ್
ಸಾಕಷ್ಟು ದಿನಗಳಿಂದ ವಿವಾದದ ಸೃಷ್ಟಿಯಲ್ಲಿ ಸಿಲುಕಿರುವ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾದ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರಜನಿಕಾಂತ್ ಅವರ ಹೇಳಿಕೆಯಿಂದ ನನಗೂ ನೋವಾಗಿದೆ. ನಾನಂತು ಅವರ ಕಾಲಾ ಚಿತ್ರವನ್ನು ನೋಡುವುದಿಲ್ಲ.
ಚಿತ್ರವನ್ನ ನೋಡದಂತೆಯೂ ಪ್ರತಿಭಟನೆ ಮಾಡುವುದು ಸೂಕ್ತ. ಕನ್ನಡ ಜನರು ಅಂತಹ ಒಂದು ಪ್ರತಿಭಟನೆಯನ್ನು ಮಾಡಬಹುದು.ಆದ್ರೆ ಚಿತ್ರ ಬಿಡುಗಡೆ ವಿಚಾರದಲ್ಲಿ ಈ ಸಮಯ ಇಬ್ಬರಿಗೂ ಸಂದಗ್ದ ಪರಿಸ್ಥಿತಿ ತಂದಿದೆ. ಚಿತ್ರ ಬಿಡುಗಡೆ ಮಾಡಿದ್ರು ಕಷ್ಟ ಮಾಡದೆ ಇದ್ರೂ ಕಷ್ಟ. ಮುಖ್ಯಮಂತ್ರಿಗಳು ಚಿತ್ರ ಬಿಡುಗಡೆ ಬೇಡ ಎಂದಿದ್ದಾರೆ.

ಕನ್ನಡದಲ್ಲೇ ಮಾತನಾಡಿದ ರಜನಿ : 'ಕಾಲಾ' ಬಿಡುಗಡೆಗೆ ಮನವಿ
ಈ ನಿರ್ಧಾರ ಜನರಿಗೆ ಬಿಟ್ಟದ್ದು. ಆದ್ರೆ ರಜನಿಕಾಂತ್ ರಾಜಕೀಯಕ್ಕಾಗಿ ಕಾವೇರಿ ಬಗ್ಗೆ ಮಾತನಾಡೋದು ಸರಿಯಲ್ಲ. ನಾನು ಅವರನ್ನ ರಾಜ್‌ಕುಮಾರ್ ರಂತೆ ಗೌರವಿಸಿದ್ದೆ. ಆದ್ರೆ ಅವರ ಈ ಹೇಳಿಕೆಯ ನಂತರ ಟ್ವಿಟರ್ ನಲ್ಲೂ ಅವರನ್ನ ಅನ್‌ಫಾಲೋ ಮಾಡಿದ್ದೀನಿ. ಒಂದು ಮನೆಯಲ್ಲಿರುವ 5 ಮಂದಿಯೇ ಒಂದೆ ರೀತಿ ಇರೋಲ್ಲ.
ಅಂದ ಮೇಲೆ ಎಲ್ಲರು ನಮ್ಮಂತೇಯೆ ಯೋಚನೆ ಮಾಡಬೇಕು ಅನ್ನೋದು ಸರಿಯಲ್ಲ.
ಕಾಲ ಚಿತ್ರವನ್ನ ನಾನಂತು ನೋಡೋಲ್ಲ. ನನ್ನ ಅಭಿಮಾನಿಗಳಿಗು ನನ್ನ ಗುಣವೇ ಇರಲಿದೆ. ಎಂದು ನವರಸ ನಾಯಕ ಜಗ್ಗೇಶ್ ಮೈಸೂರಿನಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.


Click it and Unblock the Notifications











