ನವರಸ ನಾಯಕ 42 ಬಾರಿ ನೋಡಿದ ಏಕೈಕ ಚಿತ್ರ ಇದು
ಕನ್ನಡ ಸಿನಿಮಾರಂಗದ ನವರಸ ನಾಯಕ ಜಗ್ಗೇಶ್ ಕನ್ನಡ ಒಂದು ಸಿನಿಮಾವನ್ನ ಸುಮಾರು 42 ಬಾರಿ ನೋಡಿದ್ದಾರಂತೆ. ಅದಷ್ಟೇ ಅಲ್ಲದೆ ಮತ್ತೊಂದು ಚಿತ್ರವನ್ನು 29 ಸಲ ನೋಡಿದ್ದಾರಂತೆ. ಈ ವಿಚಾರವನ್ನು ಜಗ್ಗೇಶ್ ಅವರೇ ತಮ್ಮ ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಜಗ್ಗೇಶ್ ಈ ವಿಚಾರವನ್ನು ಈಗ ಚರ್ಚೆ ಮಾಡಲು ಕಾರಣವೂ ಇದೆ. ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಸಿನಿಮಾ ಹೊಸ ರೂಪದಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಇದೇ ಸಂದರ್ಭದಲ್ಲಿ ನವರಸ ನಾಯಕ ನಾನು 42 ಬಾರಿ ನೋಡಿದ ಏಕೈಕ 'ನಾಗರಹಾವು' ಚಿತ್ರ ಎನ್ನುವುದನ್ನು ಹೇಳಿಕೊಂಡಿದ್ದಾರೆ.
ಅದರ ಜೊತೆಯಲ್ಲಿ ಡಾ ರಾಜ್ ಕುಮಾರ್ ಅವರ 'ಮಯೂರ' ಸಿನಿಮಾವನ್ನು 29 ಬಾರಿ ನೋಡಿದ್ದೇನೆ ಎಂದಿದ್ದಾರೆ. "ನನ್ನ ಬಾಲ್ಯದಲ್ಲಿ ನಾನು 42 ಬಾರಿ ನೋಡಿದ ಚಿತ್ರ ಇದೊಂದೆ..ಬಿಟ್ಟರೆ ಮಯೂರ 29 ಬಾರಿ..ಮತ್ತೆ ನಾಗರ ಹಾವು ಚಿತ್ರ ವಿಷ್ಣುವರ್ಧನ ಮಯೂರ ರಾಜಣ್ಣ ಹುಟ್ಟಲಾರ.. ಬಂದರು ಪ್ರೀತಿಕೊಟ್ಟು ಹೋದರು ಮಹನೀಯರು" ಎಂದು ಫೋಟೋ ಮೂಲಕ ಟ್ವೀಟ್ ಮಾಡಿದ್ದಾರೆ.

'ನಾಗರಹಾವು' ಸಿನಿಮಾವನ್ನ ನಿರ್ಮಾಪಕ ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಈಗ ಅವರ ಎರಡನೇ ಪುತ್ರ, ರವಿಚಂದ್ರನ್ ಸಹೋದರ ಬಾಲಾಜಿ ಈ ಚಿತ್ರವನ್ನು ಮತ್ತೆ ರೀ ರಿಲೀಸ್ ಮಾಡುವ ಚಿಂತನೆ ನಡೆಸಿದ್ದಾರೆ. ಹೊಸ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ 'ನಾಗರಹಾವು' ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿತ್ರವನ್ನು ಮತ್ತೆ ಬಿಡುಗಡೆ ಮಾಡುವ ಪ್ಲಾನ್ ಮಾಡಿರುವ ಬಾಲಾಜಿ ಚಿತ್ರದ ಪ್ರಚಾರಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಬಳಸಿಕೊಳ್ಳಲಿದ್ದಾರಂತೆ.


Click it and Unblock the Notifications











