twitter
    For Quick Alerts
    ALLOW NOTIFICATIONS  
    For Daily Alerts

    ಪ್ಯಾನ್ ಇಂಡಿಯಾ ವಿವಾದ: 'ಎಷ್ಟೆ ಬೆಳೆದರು ತಂದೆ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲಾ'

    |

    ಕನ್ನಡತನ ಉಳಿಯಬೇಕಾದರೆ, ಕನ್ನಡ ಚಿತ್ರರಂಗ ಉಳಿಯಬೇಕಾದರೆ ಕನ್ನಡ ಕಲಾವಿದರು, ತಂತ್ರಜ್ಞರು ಬೆಳೆಯಬೇಕು ಎಂದು ಹೇಳಿದ್ದ ನಟ ಜಗ್ಗೇಶ್, 'ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡೋಲ್ಲಾ. ಪ್ಯಾನ್ ಇಂಡಿಯಾದಿಂದ ನಮ್ಮ‌ ಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ‌ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ‌ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ' ಎಂದಿದ್ದರು.

    Recommended Video

    ಇವ್ರೆಲ್ಲಾ ದುಡ್ಡು ಬಂದ್ರೆ ತಾಯಿನ ಬೇಕಾದ್ರೂ ಮಾರಿ ಬಿಡ್ತಾರೆ | Jaggesh about Pan india

    ಜಗ್ಗೇಶ್ ಅವರ ಹೇಳಿಕೆಯನ್ನು ಒಂದು ವರ್ಗದ ಅಭಿಮಾನಿಗಳು ಖಂಡಿಸಿದ್ದಾರೆ. ಜಗ್ಗೇಶ್ ಅವರ ಈ ಹೇಳಿಕೆಯ ತಮ್ಮ ನೆಚ್ಚಿನ ನಟ ಕುರಿತಾಗಿಯೇ ಹೇಳಿದ್ದಾರೆ ಎಂದು ತಿಳಿದ ಸ್ಟಾರ್‌ ನಟನೊಬ್ಬನ ಅಭಿಮಾನಿಗಳು ನವರಸ ನಾಯಕನ ವಿರುದ್ಧ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಅವರ ವಿರುದ್ಧ ಟ್ರೋಲ್ ಮಾಡಲಾಗುತ್ತಿದೆ. ಈ ಬೆಳವಣಿಯ ಬಗ್ಗೆ ಜಗ್ಗೇಶ್ ಅಸಮಾಧಾನಗೊಂಡಿದ್ದಾರೆ. ಸರಣಿ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

    ಪ್ಯಾನ್ ಇಂಡಿಯಾ ವಿರೋಧಿಸಿದ್ದಕ್ಕೆ ನಟ ಜಗ್ಗೇಶ್ ವಿರುದ್ಧ ಟೀಕೆಪ್ಯಾನ್ ಇಂಡಿಯಾ ವಿರೋಧಿಸಿದ್ದಕ್ಕೆ ನಟ ಜಗ್ಗೇಶ್ ವಿರುದ್ಧ ಟೀಕೆ

    ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ?

    ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ?

    ಅಭಿಮಾನಿಯೊಬ್ಬನ ಕಾಮೆಂಟ್‌ಗೆ ಪ್ರತಿಕ್ರಿಯಿಸಿ ಜಗ್ಗೇಶ್ ''ಕನ್ನಡ ಚಿತ್ರರಂಗ, ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲಾ ಮಕ್ಕಳು ಎಷ್ಟೆ ಬೆಳೆದರು ತಂದೆಯ ಮುಂದೆ ಮಕ್ಕಳೆ ವಿನಃ ತಂದೆಯಾಗಲ್ಲಾ. ಶಿವಣ್ಣ, ಪುನೀತ್, ದರ್ಶನ್, ಗಣೇಶ್, ವಿಜಿ ಪ್ಯಾನ್ ಇಂಡಿಯಾ ನಂಬದೆ ಕನ್ನಡ ಕನ್ನಡಿಗರ ಸೀಮೆಯಲ್ಲೆ ಕನ್ನಡದ ಕಲಾವಿದ ತಂತ್ರಜ್ಞರ ಬೆಳಸಿ ತಾವು ಇದ್ದಾರೆ. offcorce ನಾನು ಇರುವೆ. ನಮಗೆ 100% ಕನ್ನಡ ಜನ ಸಾಕು'' ಎಂದಿದ್ದಾರೆ.

    ದೊಡ್ಡವರು ವಯಸ್ಸಿಗೆ ಬೆಲೆಯುಂಟೆ?

    ದೊಡ್ಡವರು ವಯಸ್ಸಿಗೆ ಬೆಲೆಯುಂಟೆ?

    ''ದೊಡ್ಡವರು ಚಿಕ್ಕವರು ಆಡುವ ತೊದಲು ನುಡಿ ತಪ್ಪಾದರು ಆನಂದಿಸಿ ಮುದ್ದಿಸುತ್ತಾರೆ ಕಾರಣ ಮಕ್ಕಳಿಗೆ ತಿಳುವಳಿಕೆ ಇಲ್ಲಾ ಎಂದು. ದೊಡ್ಡವರು ಸಣ್ಣವರ ಚೇಷ್ಟೆ ನೋಡಿ ಅವರಂತೆ ಆಡಿದರೆ ಅವರ ವಯಸ್ಸಿಗೆ ಬೆಲೆಯುಂಟೆ. ಅನ್ನ ದುಡಿಯುವ ಕಾಲ ಬಂದಾಗ ಜೀವನ ನರಕವಾದಾಗ ನಟನಟಿ ಬಿಟ್ಟು ಕಿಲೋಮಿಟರ್ ಬದುಕಲು ಓಡುತ್ತಾರೆ. ಊಟ free ಸಿಗುತ್ತಿದೆ let them enjoy'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ': ನಟ ಜಗ್ಗೇಶ್ ಅಸಮಾಧಾನ'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ': ನಟ ಜಗ್ಗೇಶ್ ಅಸಮಾಧಾನ

    ಅನ್ಯರ ಮೇಲೆ ಒಲವು ಇಲ್ಲಾ

    ಅನ್ಯರ ಮೇಲೆ ಒಲವು ಇಲ್ಲಾ

    ''ಯಾಕಂದ್ರೆ ನಮ್ಮನ್ನ ಹುಟ್ಟಿಸಿದ್ದು ಹಳ್ಳಿಯಲ್ಲಿ ಕೂಲಿ ಮಾಡಿ ಸಗಣಿ ತಟ್ಟಿ ಹಾಲು ಮಾರಿ ಮಮತೆಯ ರಕ್ತ ಬಸಿದು ಕನ್ನಡ ಕಲಿಸಿದ ತಂದೆ ತಾಯಿ ವಿನಹ ಅನ್ಯರಲ್ಲಾ. ಹಾಗಾಗಿ ನಮಗೆ ಸಿಂಹಾಸನದ ಮೇಲೆ ಕೂರಲು ಗೊತ್ತು ಗೋಣಿಚೀಲ ಹಾಸಿ ಮಲಗಲು ಗೊತ್ತು ಅದಕ್ಕೆ ಕನ್ನಡಿಗರು ನಮ್ಮನ್ನ ಹೃದಯದಲ್ಲಿ ಸಿಂಹಾಸನ ಹಾಕಿ ಕೂರಿಸಿದ್ದಾರೆ. ಅನ್ಯರ ಮೇಲೆ ಒಲವು ಇಲ್ಲಾ. ಬೇಕು ಇಲ್ಲಾ'' ಎಂದು ಜಗ್ಗೇಶ್ ತಿರುಗೇಟು ನೀಡಿದ್ದಾರೆ.

     40 ವರ್ಷ ಇಂಥ 40 ಸಾವಿರ ಜನರ ಜೈಸಿ ಬಂದವ ನಾನು

    40 ವರ್ಷ ಇಂಥ 40 ಸಾವಿರ ಜನರ ಜೈಸಿ ಬಂದವ ನಾನು

    ''ಸಹೋದರ ಈ ಮಕ್ಕಳ ಬಗ್ಗೆ ಎಳ್ಳಷ್ಟು ನನಗೆ ಬೇಜಾರಿಲ್ಲಾ ಕಾರಣ ನನಗೆ 34/28ವರ್ಷದ ಮಕ್ಕಳಿದ್ದಾರೆ. ನನಗೆ ಇಂದಿನ ಉದ್ವೇಗ ಹತಾಶೆ ಸಿಟ್ಟು ಜಿಗುಪ್ಸೆಯ ಮನೋಭಾವ ಸಮುದಾಯದ ಬಗ್ಗೆ ಅರಿವಿದೆ ಅನುಕಂಪವಿದೆ. ಮಾತು ಅಕ್ಷರ ಅರಿವಾಗದೆ ತಮ್ಮ ಮೂಗಿನ ನೇರಕ್ಕೆ ಅರ್ಥಮಾಡಿಕೊಳ್ಳುವ ಆತುರಗುಣಕ್ಕೆ ಬೇಜಾರು. 40 ವರ್ಷ ಇಂಥ 40 ಸಾವಿರ ಜನರ ಜೈಸಿ ಬಂದವ ನಾನು.'' ಎಂದು ಟ್ವೀಟ್ ಮಾಡಿದ್ದಾರೆ.

     ಎಲ್ಲರ ತಂದೆ ತಾಯಿ ಬಕೆಟ್ ಹಿಡಿದೆ ಬೆಳೆಸಿರುತ್ತಾರೆ

    ಎಲ್ಲರ ತಂದೆ ತಾಯಿ ಬಕೆಟ್ ಹಿಡಿದೆ ಬೆಳೆಸಿರುತ್ತಾರೆ

    ''ಎಲ್ಲರ ತಂದೆ ತಾಯಿ ಬಕೆಟ್ ಹಿಡಿದೆ ಅವರ ಮಕ್ಕಳ ಬೆಳೆಸಿರುತ್ತಾರೆ ಪಾಪ ಯವ್ವನದ ಪೊರೆ ಬಂದಾಗ ಬಿಟ್ಟಿ ಅನ್ನತಿನ್ನುವಾಗ ಬಕೆಟ್ ಅರಿವಾಗದು. ತನ್ನ ಸ್ವಂತ ಅನ್ನ ಗಿಟ್ಟಿಸುವಾಗ ಅವರ ಅಪ್ಪ ಅಮ್ಮ ಹಿಡಿದ ಬಕೆಟ್ ಇವರ ಕೈ ಸೇರುವುದು. ಆಗ ಬಕೆಟ್ ಬೆಲೆ ಅರಿವಾಗುವುದು. ಬೆಳಿಗ್ಗೆ ಎದ್ದಾಗ ಹಾಗಾದರೆ ಇವರು ಬಕೆಟ್ ಬಳಸದೆ ತೊಳೆಯಲು ಮಕ್ಕಳಂತೆ ಅಮ್ಮನ ಕರೆಯಬಹುದಾ'' ಎಂದು ಟಾಂಗ್ ನೀಡಿದ್ದಾರೆ.

    English summary
    Kannada actor Jaggesh has very disappointed about fans reaction after his statement on Pan india movie. earlier, Jaggesh has opposed Pan India concept.
    Thursday, November 26, 2020, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X