ಟ್ವಿಟ್ಟರ್‌ನಲ್ಲಿ ಸಹಾಯಕ್ಕಾಗಿ ಅಂಗಲಾಚಿದ ವ್ಯಕ್ತಿಯ ಕಷ್ಟಕ್ಕೆ ಮಿಡಿದ ಜಗ್ಗೇಶ್
ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯೊಬ್ಬರಿಗೆ ಹಿರಿಯ ನಟ ಜಗ್ಗೇಶ್ ಸ್ಪಂದಿಸಿರುವ ಘಟನೆ ನಡೆದಿದೆ. ಬಿಸಿನೆಸ್ ನಷ್ಟ ಆಗಿದೆ, ಮನೆ ಬಾಡಿಗೆ ಕಟ್ಟಬೇಕು, ಹೆಂಡತಿ-ಮಕ್ಕಳು ಇದ್ದಾರೆ ಎಂದು ಪರಿಪರಿಯಾಗಿ ಬೇಡಿಕೊಂಡಿರುವ ವ್ಯಕ್ತಿಗೆ ಹಣದ ವ್ಯವಸ್ಥೆ ಮಾಡುವ ಮೂಲಕ ಜಗ್ಗೇಶ್ ನೆರವಾಗಿದ್ದಾರೆ.
Recommended Video
ಜಗ್ಗೇಶ್ ಅವರ ಬಳಿ ಸಹಾಯ ಕೇಳುವ ಮೊದಲು ನಾಲ್ಕೈದು ಗಣ್ಯ ವ್ಯಕ್ತಿಗಳ ಹತ್ತಿರ ನೆರವು ಕೇಳಿದೆ. ಆದರೆ, ಅವರು ಕನಿಷ್ಠ ಉತ್ತರ ಸಹ ಕೊಡಲಿಲ್ಲ. ಜಗ್ಗೇಶ್ ಅವರು ತಮ್ಮ ಕಷ್ಟಕ್ಕೆ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ್ದಾರೆ ಎಂದು ಆ ವ್ಯಕ್ತಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಅಣ್ಣಾ ನನ್ನ ಹೆಸರು ಅಬ್ದುಲ್ ರೆಹಮಾನ್
''ಜಗ್ಗೇಶ್ ಅಣ್ಣರವರಿಗೆ ನನ್ನ ನಮಸ್ಕಾರಗಳು, ಅಣ್ಣ ನನ್ನ ಹೆಸರು ಅಬ್ದುಲ್ ರೆಹಮಾನ್ ಅಂತ 54 ವರ್ಷ. ನನಗೆ ಪತ್ನಿ ಹಾಗೂ 4 ವರುಷದ ರಿದ ಫಾತಿಮಾ ಎಂಬ ಚಿಕ್ಕ ಮಗಳು ಇದ್ದಾಳೆ. ಅಣ್ಣ ನಾನು ತಮ್ಮಲ್ಲಿ ಸಹಾಯ ಬೇಡಿ ಈ ಟ್ವಿಟ್ಟರ್ ಲ್ಲಿ ಕೇಳ್ತಾ ಇದ್ದೀನಿ, ಸುಮಾರು 2 ತಿಂಗಳಿಂದ ನನಗೆ ಕೆಲಸ ಇಲ್ಲ. ಅಂದ್ರೆ ಚಿಕ್ಕ ಪುಟ್ಟ ಬ್ಯುಸಿನೆಸ್ ಮಾಡ್ತಾ ಇದ್ದೆ, ಎಲ್ಲ ಲಾಸ್ ಆಗಿ ಏನು ಮಾಡೋಕೆ ಆಗ್ತಾ ಇಲ್ಲ. 2 ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ ಅಣ್ಣ. ಓನರ್ ಮನೆಯಿಂದ ಆಚೆಗೆ ಕಳಿಸ್ತೀವಿ. 15ನೇ ತಾರೀಕು ನಮಗೆ ಬಾಡಿಗೆ ಹಣ ಬೇಕು, ಇಲ್ಲವಾದರೆ ಯಾವ ಮನೆ ಸಾಮಾನು ಕೊಡಲ್ಲ ಮನೆಯಿಂದ ಆಚೆ ಹೋಗ್ಬೇಕು ಅಂತ ಹೇಳ್ತಾ ಇದ್ದಾರೆ. ಅಣ್ಣ ಈ ಟೈಂಲ್ಲಿ ನನ್ನ ಚಿಕ್ಕ ಕಂದನ್ನನ್ನು ಕರೆದು ಕೊಂಡು ಎಲ್ಲಿಗೆ ಹೋಗೋದು. ಆದ್ದರಿಂದ ದಯಮಾಡಿ ಹಣ ಸಹಾಯ ಮಾಡಿ ಅಣ್ಣ ಲಾಕ್‌ಡೌನ್ ಮುಗಿದ ಮೇಲೆ ಯಾವುದಾದರೂ ಕೆಲಸ ಮಾಡಿ ತಮ್ಮ ಹಣ ವಾಪಸ್ಸು ಮಾಡ್ತೀನಿ ಅಣ್ಣ. ಪ್ಲೀಸ್ ಸಹಾಯ ಮಾಡಿ ಅಣ್ಣ ನನ್ನ ಮೊಬೈಲ್ ನಂ 95910.....ಪ್ಲೀಸ್ ಅಣ್ಣ ಸಹಾಯ ಮಾಡಿ'' ಎಂದು ವಿನಂತಿಸಿದ್ದರು.

10 ಸಾವಿರ ಹಣ ವ್ಯವಸ್ಥೆ ಮಾಡಿದ ನಟ
ಅಬ್ದುಲ್ ರೆಹಮಾನ್ ತಮ್ಮ ಮನೆಯ ಪರಿಸ್ಥಿತಿ ಹಾಗೂ ತನಗೆ ಎದುರಾಗಿರುವ ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿದ ನಂತರ, ಜಗ್ಗೇಶ್ ಅವರು 10 ಸಾವಿರ ರೂಪಾಯಿ ಆತನಿಗೆ ತಲುಪಿಸಿದ್ದಾರೆ. ವ್ಯಕ್ತಿ ಕೇಳಿಕೊಂಡ ಕೆಲವೇ ಗಂಟೆಗಳಲ್ಲಿ ಹಣ ಬಂದು ತಲುಪಿಸಲಾಗಿದೆ. ಹಣ ತಲುಪಿರುವ ಬಗ್ಗೆ ಖುದ್ದು ಅದೇ ವ್ಯಕ್ತಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ನಿಮ್ಮ ಸಹಾಯಕ್ಕೆ ಸದಾ ಚಿರಋಣಿ
ಶ್ರೀ ಜಗ್ಗೇಶ್ ಅಣ್ಣ ಅವರಿಗೆ ಹೃದಯ ಪೂರ್ವಕ ವಂದನೆಗಳು. ಅಣ್ಣಾ ತಾವು ನನಗೆ ಸಹಾಯ ಮಾಡಿದ ಹಣ 10,000 ರೂಪಾಯಿ ಬಂದು ನನ್ನ ಕೈ ಸೇರಿತು. ನಾವುಗಳು ನಿಮಗೆ ಸದಾ ಚಿರ ಋಣಿಗಳು. ಸಹಾಯ ಮಾಡಿದ ತಮಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ. ತಮಗೆ ಸಹಾಯ ಮಾಡುವ ತಾಯಿ ಹೃದಯ ಹೊಂದಿರುವ ಮನಸ್ಸು ನಿಮ್ಮದು. ಆ ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೂರು ಕಾಲ ಬಾಳೋ ಆಯಸ್ಸು, ಆರೋಗ್ಯ, ಐಶ್ವರ್ಯ, ನೀಡಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ'' ಎಂದು ಧನ್ಯವಾದ ಅರ್ಪಿಸಿದ್ದಾರೆ.

ಹಣ ಇದ್ದವರಿಗೆ ಕೊಡುವ ಮನಸ್ಸಿಲ್ಲ
''ಹಣ ಇದ್ದವರಿಗೆ ಕೊಡೋ ಮನಸ್ಸೇ ಇರಲ್ಲ. ಇದಕ್ಕೆ ಮುಂಚೆ ಅಂದ್ರೆ ನಿಮಗೆ ಟ್ವೀಟ್ ಮಾಡೋ ಮುಂಚೆ ಒಂದು 4 ರಿಂದ 5 ದೊಡ್ಡ ವ್ಯಕ್ತಿಗಳಿಗೆ ನನ್ನ ಅಳಲನ್ನು ತೋಡಿಕೊಂಡು ಕೇಳಿಕೊಂಡಿದ್ದೆ. ಆದರೆ ಕನಿಷ್ಠ ಉತ್ತರ ಕೂಡ ಬರಲಿಲ್ಲ, ತಾವು ನಿಜವಾಗಲು ದೇವರೇ ಯಾಕೆ ಅಂದರೆ ಆ ದೇವರು ಬಂದು ಸಹಾಯ ಮಾಡೋಕೆ ಆಗಲ್ವಲ್ಲ. ಅದಕ್ಕೆ ನಿಮ್ಮಂತ ಧೀಮಂತ ಸಹೃದಯ ವ್ಯಕ್ತಿಗಳನ್ನು ಸೃಷ್ಟಿ ಮಾಡಿದ್ದಾನೆ. ನಿಮ್ಮ ಬಗ್ಗೆ ಎಷ್ಟು ಹೇಳಿದ್ರುನು ಕಡಿಮೆನೆ ಅಣ್ಣ. ನಮಸ್ಕಾರಗಳು ನಿಮ್ಮ ಅಬ್ದುಲ್'' ಎಂದು ಅಬ್ದುಲ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











