»   » ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸ್ಥಿತಿ ಕಂಡು ಮಿಡಿದ ನಟ ಜಗ್ಗೇಶ್

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸ್ಥಿತಿ ಕಂಡು ಮಿಡಿದ ನಟ ಜಗ್ಗೇಶ್

Posted By:
Subscribe to Filmibeat Kannada

ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಪರಿಸ್ಥಿತಿ ನೋಡಿ ಕನ್ನಡದ ಕೆಲ ನಟರು ಅವರ ಸಹಾಯಕ್ಕೆ ಕೈಚಾಚಿದ್ದಾರೆ. ಈಗ ನಟ ಜಗ್ಗೇಶ್ ಕೂಡ ಸದಾಶಿವ ಬ್ರಹ್ಮಾವರ್ ಸ್ಥಿತಿ ಕಂಡು ಮಿಡಿದಿದ್ದಾರೆ.

600ಕ್ಕೂ ಹೆಚ್ಚು ಸಿನಿಮಾ ಮಾಡಿದ ಒಬ್ಬ ಅದ್ಭುತ ಹಿರಿಯ ನಟ ಮನೆ ಬಿಟ್ಟು, ತುತ್ತು ಅನ್ನಕ್ಕಾಗಿ ಬೀದಿಯಲ್ಲಿ ಅಲೆದಾಟ ನಡೆಸಿದ್ದರು. ಬಳಿಕ ಇವರ ಕಷ್ಟ ತಿಳಿದ ನಟ ಸುದೀಪ್, ಶಿವಣ್ಣ ಈಗಾಗಲೇ ಹಿರಿಯ ನಟರಿಗೆ ಸ್ಪಂದಿಸುವ ಮನಸ್ಸು ಮಾಡಿದ್ದರು. ಈಗ ನಟ ಜಗ್ಗೇಶ್ ಕೂಡ ಅವರ ಕಣ್ಣೀರು ಒರೆಸುವುದಕ್ಕೆ ಮುಂದಾಗಿದ್ದಾರೆ.

ಬೀದಿಪಾಲಾಗಿದ್ದ ಹಿರಿಯ ನಟನಿಗೆ ಕಿಚ್ಚ ಸುದೀಪ್ ನೆರವು

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸ್ಥಿತಿ ಕಂಡ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರ ಬಗ್ಗೆ ಬರೆದುಕೊಂಡಿದ್ದಾರೆ. ಮುಂದೆ ಓದಿ....

ಜಗ್ಗೇಶ್ ಟ್ವೀಟ್

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಪರಿಸ್ಥಿತಿ ನೋಡಿ ನಟ ಜಗ್ಗೇಶ್ ''ದಯಮಾಡಿ ಅವರ ವಿಳಾಸ ಮಾಹಿತಿ ನೀಡಿ'' ಅಂತ ಟ್ವಿಟ್ಟರ್ ಖಾತೆಯ ಮೂಲಕ ಮನವಿ ಮಾಡಿದ್ದಾರೆ.

ಅನಾಥರಾಗಲು ಬಿಡುವುದಿಲ್ಲ

''ನಾವು ಮತ್ತು ನಮ್ಮ ಕಲಾವಿದರ ಸಂಘ ಅವರಿಗಾಗಿ ಇದ್ದೇವೆ. ಅವರನ್ನು ಅನಾಥರಾಗಲು ಬಿಡುವುದಿಲ್ಲ. ದುಃಖವಾಯಿತು..ಪಾಪಿ ದುನಿಯಾ.. ಯಾಕೆ ಬೇಕು ಇಂಥ ಬಂಧುಗಳು'' ಎಂದು ನಟ ಜಗ್ಗೇಶ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಬೈಲಹೊಂಗಲದಲ್ಲಿ ಪ್ರತ್ಯಕ್ಷವಾದ ಹಿರಿಯ ನಟ ಸದಾಶಿವ ಬ್ರಹ್ಮಾವರ್

'ಅಗ್ರಜ' ಚಿತ್ರದಲ್ಲಿ ನಟನೆ

'ಅಗ್ರಜ' ಸಿನಿಮಾ ಸೇರಿದಂತೆ ಜಗ್ಗೇಶ್ ನಟನೆಯ ಕೆಲ ಸಿನಿಮಾಗಳಲ್ಲಿ ಸದಾಶಿವ ಬ್ರಹ್ಮಾವರ್ ಅವರು ನಟಿಸಿದ್ದರು.

Dr Rajkumar Family help to senior Actor Sadashiva Brahmavar.

ಸುದೀಪ್ - ಶಿವಣ್ಣ

ಈಗಾಗಲೇ ನಟ ಸುದೀಪ್ ಸದಾಶಿವ ಬ್ರಹ್ಮಾವರ್ ಅವರ ನೆರವಿಗೆ ಬಂದಿದ್ದಾರೆ. ಜೊತೆಗೆ ನಟ ಶಿವಣ್ಣ ತಮ್ಮ ಆಪ್ತರ ಮೂಲಕ ಹಿರಿಯ ನಟರ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಸದಾಶಿವ ಬ್ರಹ್ಮಾವರ್ ಗೆ ನೆರವು ನೀಡಲು ಮುಂದಾದ ಡಾ.ರಾಜ್ ಕುಟುಂಬ

English summary
Kannada Actor Jaggesh is ready to help Sadashiva Brahmavar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada