For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಅದೇನೋ ಹಾಕಸ್ತಾರಂತೆ ಹೋಗಿ ನೋಡಿ

  By Rajendra
  |

  "ಬನ್ನಿ ನಿಮಗೂ ಹಾಕಸ್ತೀನಿ" ಅಂತಿದ್ದಾರೆ ನವರಸ ನಾಯಕ ಜಗ್ಗೇಶ್. 'ಎದ್ದೇಳು ಮಂಜುನಾಥ' ಚಿತ್ರದ ಬಳಿಕ ಅವರು ಮತ್ತೊಮ್ಮೆ ಮಂಜುನಾಥನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ಬಿಎ, ಎಲ್ಎಲ್ ಬಿ ಪದವೀಧರ.

  ಅಂದಹಾಗೆ "ಬನ್ನಿ ನಿಮಗೂ ಹಾಕಸ್ತೀನಿ" ಎಂಬುದು ಮಂಜುನಾಥ ಬಿಎ, ಎಲ್ಎಲ್ ಬಿ ಚಿತ್ರದ ಅಡಿಬರಹ. ಅಲ್ಲಿ ಒಂದು ನಶೆಯೇರಿಸುವ ಬಾಟಲಿ ಚಿತ್ರವೂ ಇದೆ. ಟೈಟಲ್ ನಲ್ಲೇ ಇಷ್ಟೆಲ್ಲಾ ಇದೆ ಅಂದಮೇಲೆ ಚಿತ್ರದಲ್ಲಿ ಖಂಡಿತ ಕಿಕ್ ಇದ್ದೇ ಇರುತ್ತದೆ ಬಿಡಿ.

  ಚಿತ್ರದ ಡೈಲಾಗ್ ಗಳು ಅಳತೆ ಮೀರಿರುವುದಕ್ಕೋ ಏನೋ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಎಸ್ ಮೋಹನ್ ನಿರ್ದೇಶನದ ಈ ಚಿತ್ರವನ್ನು ಎ ಸುರೇಶ್ ನಿರ್ಮಿಸಿದ್ದಾರೆ. ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಹೆಣೆದಿದ್ದಾರೆ.

  ಜಗ್ಗೇಶ್ ಚಿತ್ರ ತೆರೆಕಂಡು ಸರಿಸುಮಾರು ಒಂದು ವರ್ಷವೇ ಕಳೆದುಹೋಗಿದೆ. ಇದೇ ಶುಕ್ರವಾರ (ಸೆ.14) ಅವರ ಬಹುನಿರೀಕ್ಷಿತ 'ಮಂಜುನಾಥ ಬಿಎ,ಎಲ್ಎಲ್ ಬಿ' ಚಿತ್ರ ಬಿಡುಗಡೆಯಾಗುತ್ತಿದೆ. ಗೌರಿ ಗಣೇಶ ಹಬ್ಬದ ಕಡುಬಿನ ಜೊತೆಗೆ ಜಗ್ಗೇಶ್ ಹಾಸ್ಯ ರಸಾಯನವನ್ನೂ ಸವಿಯಬಹುದು.

  ರೀಮಾವೋರಾ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಗಿರಿಜಾ ಲೋಕೇಶ್, ಶಂಕರ್ ಪಾಟೀಲ್, ಚಿದಾನಂದ್ ಮುಂತಾದವರಿದ್ದಾರೆ. ಅಂದಹಾಗೆ 'ಮಂಜುನಾಥ, ಬಿಎ ಎಲ್‌ಎಲ್‌ಬಿ' ಚಿತ್ರ ಮಲಯಾಳಂನ 'ಹಲೋ' ಚಿತ್ರದ ರೀಮೇಕ್.

  ವಿನಯ್ ಚಂದ್ರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಶೋಕ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸನತ್ ಸಂಕಲನ ಬಾಬುಖಾನ್ ಕಲಾ ನಿರ್ದೇಶನವಿರುವ 'ಮಂಜುನಾಥ, ಬಿ.ಎ.ಎಲ್.ಎಲ್.ಬಿ' ಚಿತ್ರಕ್ಕೆ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆಯಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada actor Jaggesh starer comedy film Manjunatha BA, LLB, written and directed by actor-turned-director Mohan is releasing on 14th Sept, 2012 all over Karnataka. The film is a remake of 2007 Malayalam hit Hallo which starred Mohanlal and Parvati Melton.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X