ಅಪ್ಪು-ಸಂತೋಷ್ ಭೇಟಿ ಮಾಡಿದ ಜಗ್ಗೇಶ್: ಜೀವನಕ್ಕೊಂದು ಸಲಹೆ
ನವರಸ ನಾಯಕ ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನಲ್ಲಿ 'ರಾಘವೇಂದ್ರ ಸ್ಟೋರ್ಸ್' ಎನ್ನುವ ಚಿತ್ರ ಘೋಷಣೆಯಾಗಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ.
Recommended Video
ಜಗ್ಗೇಶ್, ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಫಿಲಂಸ್ ಒಟ್ಟಿಗೆ ಸಿನಿಮಾ ಮಾಡ್ತಿರುವುದು ಸಹಜವಾಗಿ ದೊಡ್ಡ ನಿರೀಕ್ಷೆ ಮೂಡಿಸಿದೆ. ಈ ಪ್ರಾಜೆಕ್ಟ್ ಅಧಿಕೃತವಾದ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಜಗ್ಗಣ್ಣ, ''ಆತ್ಮೀಯ ಯುವಮಿತ್ರರು ಆಕಸ್ಮಿಕ ಸಿಕ್ಕು ಮನಬಿಚ್ಚಿ ಮಾತಾಡಿ ನಕ್ಕು ಸಹಭೋಜನ ಮಾಡಿ ಪರಸ್ಪರ ಶುಭಹಾರೈಸಿದ ಕ್ಷಣ.. ಮೂರುದಿನದ ಬದುಕಿಗೆ ಒಂದು ದಿನವಾದರು ನಗಬೇಕು ಶ್ರೇಷ್ಠ ಬದುಕಿಗೆ...ಶುಭ ಮಧ್ಯಾಹ್ನ'' ಎಂದು ಪೋಸ್ಟ್ ಹಾಕಿದ್ದಾರೆ.

ಹೊಂಬಾಳೆ ಜೊತೆ ಜಗ್ಗೇಶ್ ಅವರ ಮೊದಲ ಸಿನಿಮಾ ಎನ್ನುವ ಕಾರಣಕ್ಕೂ ಇದು ಬಹಳ ವಿಶೇಷವಾಗಿದೆ. ಅದೇ ರೀತಿ ಪಕ್ಕಾ ಕಮರ್ಷಿಯಲ್ ಹಾಗೂ ಮಾಸ್ ಚಿತ್ರಗಳನ್ನು ಮಾಡಿ ಯಶಸ್ಸು ಕಂಡಿರುವ ಸಂತೋಷ್ ಆನಂದ್ ರಾಮ್ ಮೊದಲ ಸಲ ಸದಭಿರುಚಿಯ ಸ್ಕ್ರಿಪ್ಟ್‌ಗೆ ಕೈ ಹಾಕಿದ್ದಾರೆ. ಜಗ್ಗೇಶ್ ಅವರ ಜೊತೆ ಸೇರಿ ಒಂದೊಳ್ಳೆ ಮನರಂಜನೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಇನ್ನು ಜಗ್ಗೇಶ್ ಅವರ ಜೊತೆಗಿನ ಸಿನಿಮಾ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇನ್ನೊಂದು ಚಿತ್ರ ಮಾಡಲಿದ್ದಾರೆ. ಅದನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಈ ಪ್ರಾಜೆಕ್ಟ್ ಅಧಿಕೃತವಾಗಿದೆ. ಆದರೆ, ಈಗಿರುವ ಕಮಿಟ್‌ಮೆಂಟ್‌ಗಳನ್ನು ಮುಗಿಸಿ ಚಾಲನೆ ಕೊಡಲು ತೀರ್ಮಾನಿಸಿದ್ದಾರೆ. ಪ್ರಸ್ತುತ ಚೇತನ್ ಕುಮಾರ್ ಜೊತೆ ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.

ಮಗನ ಚಿತ್ರದ ಬಗ್ಗೆ ಜಗ್ಗೇಶ್ ಮೆಚ್ಚುಗೆ
''ಕಾಗೆ ಮೊಟ್ಟೆ' ಚಿತ್ರದ ಟ್ರೈಲರ್ ಈಗಾಗಲೇ ಇಷ್ಟವಾಗಿದೆ. ಚಿತ್ರ ಇದೇ ಅಕ್ಟೋಬರ್ 1ಕ್ಕೆ ಬಿಡುಗಡೆಯಾಗಲಿದ್ದು ಖಂಡಿತವಾಗಿಯೂ ಪ್ರೇಕ್ಷಕರು ಕಾಗೆ ಮೊಟ್ಟೆ ಚಿತ್ರವನ್ನು ಕೂಡ ಇಷ್ಟ ಪಡಲಿದ್ದಾರೆ' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದರು. ಅದಕ್ಕೆ ಜಗ್ಗೇಶ್ ಅವರ ಪ್ರತಿಕ್ರಿಯಿಸಿ 'ಗುರುರಾಜನ ಪ್ರತಿಭೆ ನೋಡಿ ಮೂಕವಿಸ್ಮಿತನಾದೆ' ಎಂದಿದ್ದಾರೆ.
''It's raw subject. ಗುರುರಾಜ ಈ ಚಿತ್ರದಲ್ಲಿ ಒಳ್ಳೆಯ ಹುಡುಗನ ಬದುಕು #slumrowdy ಆಗಿ ಪರಿವರ್ತನೆ ಆಗುವ ಪಾತ್ರ. ಗುರುರಾಜನ ಪ್ರತಿಭೆ ನೋಡಿ ಮೂಕವಿಸ್ಮಿತನಾದೆ..ಕೊರೋನ ಇಂದ ಬಿಡುಗಡೆ ತಡವಾಯಿತು. ಆದರು ನನ್ನ ನಂಬಿಕೆ ಗುರುರಾಜ ಪ್ರೇಕ್ಷಕನ ಮನ ಗೆಲ್ಲುತ್ತಾನೆ ಎಂದು. ತಮಿಳು ಚಿತ್ರತಂಡ ಈ ಚಿತ್ರಕಥೆಗಾಗಿ ಬೇಡಿಕೆ ಇಟ್ಟಿದ್ದಾರೆ. Good luck'' ಎಂದು ಜಗ್ಗೇಶ್ ಶುಭಕೋರಿದರು.

ಚಂದ್ರಹಾಸ ನಿರ್ದೇಶನದ ಕಾಗೆ ಮೊಟ್ಟೆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದು ಮೂವರು ಹುಡುಗರ ಕಥೆಯಾಗಿದ್ದು, ಗುರುರಾಜ್ ಜೊತೆ ಹೇಮಂತ್ ಹಾಗೂ ಕೆ ಮಾದೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತನುಜಾ ಚಿತ್ರದ ನಾಯಕಿ.
ಹೊಂಬಾಳೆ ಫಿಲಂಸ್
ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿಸಿರುವ ಹೊಂಬಾಳೆ ಫಿಲಂಸ್, ಏಪ್ರಿಲ್ 2022ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಲಾರ್ ಚಿತ್ರ ಬರ್ತಿದೆ. ಇದು 7ನೇ ಚಿತ್ರ. ಎಂಟನೇ ಸಿನಿಮಾ ಶ್ರೀಮುರಳಿ ಜೊತೆ 'ಬಘೀರಾ'. ಒಂಬತ್ತನೇ ಚಿತ್ರ ಪುನೀತ್ ರಾಜ್ ಕುಮಾರ್ ಮತ್ತು ಲೂಸಿಯಾ ಪವನ್ ಕುಮಾರ್ ಜೋಡಿಯ 'ದ್ವಿತ್ವ'. ಹತ್ತನೇ ಚಿತ್ರ ರಕ್ಷಿತ್ ಶೆಟ್ಟಿ ನಿರ್ದೇಶನದ 'ರಿಚರ್ಡ್ ಆಂಟೋನಿ'. ಹನ್ನೊಂದನೇ ಚಿತ್ರ ರಿಷಬ್ ಶೆಟ್ಟಿಯ 'ಕಾಂತಾರ'.


Click it and Unblock the Notifications











