ವರ್ಷಗಳ ನಂತರ ಸಹೋದರಿಯರ ಭೇಟಿ ಮಾಡಿದ ಜಗ್ಗೇಶ್
ನಟ ಜಗ್ಗೇಶ್ ವರ್ಷಗಳ ನಂತರ ತಮ್ಮ ಸಹೋದರಿಯರನ್ನು ಭೇಟಿ ಮಾಡಿದ್ದಾರೆ. ವಿದೇಶದಲ್ಲಿ ಇರುವ ಕಾರಣ ಹಾಗೂ ಕೆಲಸದ ಒತ್ತಡದಿಂದ ಸಹೋದರಿಯನ್ನು ಜಗ್ಗೇಶ್ ಭೇಟಿ ಮಾಡಲು ಆಗಿರಲಿಲ್ಲ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಹೋದರಿಯರ ಜೊತೆಗೆ ಕಳೆದ ಕ್ಷಣದ ಫೋಟೋವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ಜಗ್ಗೇಶ್ ರಿಗೆ ಇಬ್ಬರು ಅಕ್ಕಂದಿರು. ಹಿರಿಯ ಅಕ್ಕನ ಹೆಸರು ಮಹಾದೇವಿ ಅವರು ಅಮೇರಿಕಾಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದ ಅವರು ವರ್ಷಗಳ ನಂತರ ತಮ್ಮನನ್ನು ಭೇಟಿ ಮಾಡಿದ್ದಾರೆ.
ಹಿರಿಯ ಅಕ್ಕ ಮಹಾದೇವಿ, ಕಿರಿಯ ಅಕ್ಕ ಡಾ ವಿಜಯಲಕ್ಷ್ಮಿ ಹಾಗೂ ಜಗ್ಗೇಶ್ ಮೂವರು ಸೇರಿ ಫೋಟೋ ತೆಗೆದುಕೊಂಡಿದ್ದಾರೆ. ಮಹಾದೇವಿ 63 ವಿಜಯಲಕ್ಷ್ಮಿ 60 ಹಾಗೂ ಜಗ್ಗೇಶ್ ರಿಗೆ 57 ವರ್ಷ ವಯಸ್ಸಾಗಿದೆ. ಹೀಗಾಗಿ ನಂಜಮ್ಮನ ಮೂರು ಮಕ್ಕಳು ಮುದುಕರಾದೆವು ಎಂದು ತಮಾಷೆ ಮಾಡಿದ್ದಾರೆ.

''ಅಮೇರಿಕದಿಂದ ವಾಪಸ್ ಬಂದ ಹಿರಿಯ ಅಕ್ಕ ಮಹಾದೇವಿ, ಕಿರಿಯ ಅಕ್ಕ ಡಾ ವಿಜಯಲಕ್ಷ್ಮೀ ವರ್ಷವಾಗಿತ್ತು ನಾವು ಮೂವರು ಸೇರಿ!. ಇಂದು ಎಲ್ಲಾ ಕಾರ್ಯಕ್ಕೂ ವಿದಾಯ ಹೇಳಿ..ನಮ್ಮ ಬಾಲ್ಯದ ಜೀವನ ಅಪ್ಪ ಅಮ್ಮನ ನೆನೆದು ಭಾವುಕರಾದೆವು. ಹಿರಿಯಳಿಗೆ 63 ಕಿರಿಯಳಿಗೆ 60 ನನಗೆ 57ವರ್ಷ!. ನಂಜಮ್ಮನ ಮಕ್ಕಳು ಮುದುಕರಾದೆವು ಆದರು ನಮ್ಮ ಬಂಧನ ಬಾಲ್ಯದಂತೆಯೇ ಇದೆ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











