ದಸರಾ ಮುಗಿಸಿಕೊಂಡು ಬರ್ತಾರಂತೆ ಹೊಸ ಜಗ್ಗೇಶ್
Recommended Video

'ನೀರ್ದೋಸೆ', 'ಮೇಲುಕೋಟೆ ಮಂಜ' ಸಿನಿಮಾ ನಂತರ ನವರಸ ನಾಯಕ ಜಗ್ಗೇಶ್ ಅವರ ಚಿತ್ರಕ್ಕಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿ. ಜಗ್ಗೇಶ್ ಅಭಿನಯದ '8 ಎಂಎಂ' ಸಿನಿಮಾ ರಿಲೀಸ್ ದಿನಾಂಕ ಬಹಿರಂಗವಾಗಿದೆ.
ಆರಂಭದಿಂದಲೂ ಭಾರಿ ಕುತೂಹಲ ಮೂಡಿಸಿರುವ ಈ ಸಿನಿಮಾ ದಸರಾ ಹಬ್ಬ ಮುಗಿದ ತಕ್ಷಣ ಚಿತ್ರಮಂದಿರಕ್ಕೆ ಪ್ರವೇಶ ಮಾಡ್ತಿದೆ. ನವರಾತ್ರಿ ಉತ್ಸವ ಮುಗಿಸಿದ ಪ್ರೇಕ್ಷಕರಿಗೆ ಮನರಂಜನೆ ನೀಡಿಲು '8ಎಂಎಂ' ಸಿನಿಮಾ ಸಿದ್ಧವಾಗಿದೆ. ಹೌದು, '8ಎಂಎಂ' ಸಿನಿಮಾ ಅಕ್ಟೋಬರ್ 26 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

'8ಎಂಎಂ' ಸಿನಿಮಾ ಜಗ್ಗೇಶ್ ಅವರ ವೃತ್ತಿ ಜೀವನದಲ್ಲಿ ಹೊಸ ಅಧ್ಯಾಯವಾಗಲಿದೆ ಎಂಬ ನಿರೀಕ್ಷೆ ಇದೆ. ಹಾಗಾಗಿ, ಜಗ್ಗೇಶ್ ಅವರಿಗೂ ಕೂಡ ಈ ಸಿನಿಮಾದ ಮೇಲೆ ಹೆಚ್ಚು ನಂಬಿಕೆ. ಸ್ವತಃ ಜಗ್ಗೇಶ್ ಅವರೇ ಹೇಳುವಾಗೆ ಇದು ಸಂಪೂರ್ಣವಾಗಿ ಹೊಸ ರೀತಿಯ ಸಿನಿಮಾ. ಈ ಹಿಂದೆ ಜಗ್ಗೇಶ್ ಅವರನ್ನ ನೋಡಿರದ ಪಾತ್ರದಲ್ಲಿ ನೋಡುವ ಅವಕಾಶ ಇದಾಗಿದೆ.
ಈ ಬಗ್ಗೆ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದು, ''ನಿಮ್ಮ 35ವರ್ಷಗಳ ಪ್ರೀತಿ ಅಭಿಮಾನದಿಂದ ಬೆಳೆದವ ನಾನು. ನಿಮ್ಮಗಳನ್ನು ವಿಭಿನ್ನವಾಗಿ ರಂಜಿಸಲು ಯತ್ನಿಸಿದ #8mm ಚಿತ್ರ ಅಕ್ಟೋಬರ್ 26ಕ್ಕೆ ನಿಮ್ಮಮುಂದೆ..ನನ್ನ ಯಾವ ಹಳೆ ಛಾಯೇ ನಿರೀಕ್ಷಿಸದೆ ಈ ಚಿತ್ರ ವೀಕ್ಷಿಸಿ ನಿಮಗೆ ನನ್ನ ಹೊಸ ಪ್ರಯತ್ನ ಖುಷಿ ನೀಡುತ್ತದೆ..ಹರಸಿ ಹಾರೈಸಿ..'' ಎಂದು ಮನವಿ ಮಾಡಿದ್ದಾರೆ.
ಅಂದ್ಹಾಗೆ, ಜಗ್ಗೇಶ್, ವಸಿಷ್ಠ ಮಯೂರಿ, ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್ ಮುಖ್ಯಭೂಮಿಕೆಯಲ್ಲಿರೋ ಈ ಸಿನಿಮಾವನ್ನ ಹರಿಕೃಷ್ಣ ಎಸ್ ನಿರ್ದೇಶನ ಮಾಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಸಿದ್ದಾರೆ.


Click it and Unblock the Notifications











