ಜಗ್ಗೇಶ್ ಮಂಜುನಾಥ ನೋಡಿ, ಮಸ್ತ್ ಮಜಾ ಮಾಡಿ

ನವರಸ ನಾಯಕ ಜಗ್ಗೇಶ್ ಅಭಿನಯದ 'ಮಂಜುನಾಥ, ಬಿಎ ಎಲ್ಎಲ್ ಬಿ' ಚಿತ್ರ ನಾಳೆ (14 ಸೆಪ್ಟೆಂಬರ್ 2012) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 'ಬಾಡಿಗಾರ್ಡ್' ಚಿತ್ರದ ನಂತರದ ಜಗ್ಗೇಶ್ ಭಾರಿ ನಿರೀಕ್ಷೆಯ ಚಿತ್ರವಾಗಿರುವ ಈ 'ಮಂಜುನಾಥ ಬಿಎಎಲ್ಎಲ್ ಬಿ, ಸ್ವತಃ ಜಗ್ಗೇಶ್ ಅವರಿಗೂ ಕೂಡ ನಿರೀಕ್ಷೆಯ ಚಿತ್ರ. ಏಕೆಂದರೆ, ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಚಿತ್ರ ಸೂಪರ್ ಹಿಟ್ ಆಗಿತ್ತು.

ಎದ್ದೇಳು ಮಂಜುನಾಥ ಚಿತ್ರವು ಅದ್ಯಾವ ಪರಿ ಜನಪ್ರಿಯವಾಗಿತ್ತು ಎಂದರೆ, ಚಿತ್ರ ಹಾಗೂ ಚಿತ್ರದ ಹಾಡುಗಳು ಎಲ್ಲರ ಚರ್ಚೆಯ ವಿಷಯವಾಗಿತ್ತು. ನಾಳೆ ಬಿಡುಗಡೆಯಾಗಲಿರುವ ಚಿತ್ರದ ಶೀರ್ಷಿಕೆಯಲ್ಲೂ ಮತ್ತೆ ಅದೇ 'ಮಂಜುನಾಥ' ಪದ ಕಾಣಿಸಕೊಂಡಿರುವುದು ಜಗ್ಗೇಶ್ ಅಭಿಮಾನಿಗಳು ಹಾಗೂ ಗಾಂಧಿನಗರ ಪಂಡಿತರ ಗಮನಸೆಳೆದಿದೆ. ಬಹಳಷ್ಟು ಜನರ ಅನಿಸಿಕೆ ಪ್ರಕಾರ, ಈ ಮಂಜುನಾಥ ಪದ ಜಗ್ಗೇಶ್ ಅವರಿಗೆ ಯಶಸ್ಸು ತಂದುಕೊಡಲಿರುವುದು ಖಂಡಿತ.

ಈ ಚಿತ್ರದಲ್ಲಿ ಜಗ್ಗೇಶ್ 'ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾಯರ್ ಪಾತ್ರವಾದರೂ ಜಗ್ಗೇಶ್ ಚಿತ್ರವೆಂದರೆ ಅದರಲ್ಲಿ ಕಾಮಿಡಿ ಇದ್ದೇ ಇರುತ್ತದೆ ಎಂಬುದು ಸಹಜ ಸಂಗತಿ. ಕಚಗುಳಿಯಿಡುವ ಹಾಸ್ಯದ ಜೊತೆಗೆ ಸೆಂಟಿಮೆಂಟ್, ಲವ್ ಹಾಗೂ ಸಮಾಜಕ್ಕೆ ಅಗತ್ಯವಿರುವ ಸಂದೇಶಗಳೂ ಚಿತ್ರದಲ್ಲಿವೆ. ಈ ಎಲ್ಲವನ್ನು ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಿಕ್ಸ್ ಮಾಡಿ ಹೀಗೊಂದು ಸದಭಿರುಚಿ ಚಿತ್ರ ನೀಡುತ್ತಿರುವುದಾಗಿ ಹೇಳಿದೆ ಚಿತ್ರತಂಡ.

ಅಂದಹಾಗೆ, ಈ 'ಮಂಜುನಾಥ, ಬಿಎ ಎಲ್ಎಲ್ ಬಿ' ಚಿತ್ರದ ಟ್ಯಾಗ್ ಲೈನ್ 'ಬನ್ನಿ ನಿಮಗೂ ಹಾಕಸ್ತೀನಿ...!' ಎಂದಿರುವುದು ವಿಶೇಷ. ಎ ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ಕಥೆ-ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವವರು ಎಸ್ ಮೋಹನ್. ಜಗ್ಗೇಶ್ ಅವರಿಗೆ ನಾಯಕಿಯಾಗಿ ರೀಮಾ ವೋರಾ ಅಭಿನಯಿಸಿದ್ದಾರೆ. ಉಳಿದ ತಾರಾಬಳಗದಲ್ಲಿ ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಗಿರಿಜಾ ಲೋಕೇಶ್, ಶಂಕರ್ ಪಾಟೀಲ್, ಚಿದಾನಂದ್ ಮುಂತಾದವರಿದ್ದಾರೆ.

'ಮಂಜುನಾಥ, ಬಿಎ ಎಲ್‌ಎಲ್‌ಬಿ' ಚಿತ್ರ ಮಲಯಾಳಂನ 'ಹಲೋ' ಚಿತ್ರದ ರೀಮೇಕ್. ವಿನಯ್ ಚಂದ್ರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಶೋಕ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸನತ್ ಸಂಕಲನ ಬಾಬುಖಾನ್ ಕಲಾ ನಿರ್ದೇಶನವಿರುವ 'ಮಂಜುನಾಥ, ಬಿಎ ಎಲ್ಎಲ್ ಬಿ' ಚಿತ್ರಕ್ಕೆ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆಯಿದೆ.

ಒಟ್ಟಿನಲ್ಲಿ ನಾಳೆ ಜಗ್ಗೇಶ್ ಅಭಿಮಾನಿಗಳಿಗೆ ಹಾಸ್ಯಚಿತ್ರದ ಹಬ್ಬದೂಟ ಕಾದಿದೆ. ಕರ್ನಾಟಕದಾದ್ಯಂತ ಸುಮಾರು 90ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ 'ಮಂಜುನಾಥ, ಬಿಎ ಎಲ್ಎಲ್ ಬಿ' ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿರುವುದಂತೂ ಹೌದು. ನಾಳೆ ಬಿಡುಗಡೆಯಾಗಲಿರುವ ಈ ಚಿತ್ರ ಜಗ್ಗೇಶ್ ಅಭಿಮಾನಿಗಳ ಜೊತೆ ಕನ್ನಡ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಬಹುದೇ ಎಂಬುದಷ್ಟೇ ಸದ್ಯಕ್ಕಿರುವ ಕುತೂಹಲ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada actor Jaggesh starer comedy film 'Manjunatha BA.., LLB', written and directed by actor-turned-director Mohan is releasing Tomorrow, on 14th Sept, 2012 all over Karnataka. The film is a remake of 2007 Malayalam hit 'Hallo'. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X