ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ

By Harshitha

ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರಗಳು ವಿವಾದಗಳಿಲ್ಲದೇ ರಿಲೀಸ್ ಆದ ಉದಾಹರಣೆಯೇ ಇಲ್ಲ. ಇಲ್ಲಿವರೆಗೂ ಸದ್ದು ಗದ್ದಲವಿಲ್ಲದೇ 'ಉಪ್ಪಿ-2' ಚಿತ್ರದ ಶೂಟಿಂಗ್ ವರ್ಷದಿಂದ ಸರಾಗವಾಗಿ ಸಾಗಿತ್ತು.

ಮೊನ್ನೆಯಷ್ಟೇ 'ಉಪ್ಪಿ-2' ಚಿತ್ರದ ಆಡಿಯೋ ಅದ್ದೂರಿಯಾಗಿ ಬಿಡುಗಡೆ ಆಯ್ತು. ಅಲ್ಲಿಂದ ಸ್ಯಾಂಡಲ್ ವುಡ್ ನಲ್ಲಿ ಹೊಸ ಕಾಂಟ್ರವರ್ಸಿ ಕೂಡ ಶುರುವಾಯ್ತು.

'ಉಪ್ಪಿ-2' ಚಿತ್ರದಲ್ಲಿ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಅಂತ ಒಂದು ಹಾಡಿದೆ. ಅದರಲ್ಲಿ ಸ್ಯಾಂಡಲ್ ವುಡ್ ನ ಕೆಲ ಸ್ಟಾರ್ ಹೀರೋಗಳ ಕಾಲನ್ನ ಉಪ್ಪೇಂದ್ರ ಎಳೆದಿದ್ದಾರೆ. ಇದರಿಂದ ಬೇಸರಗೊಂಡ ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. [ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]

ಉಪೇಂದ್ರ ವಿರುದ್ಧ ಜಗ್ಗೇಶ್ ಟ್ವೀಟ್ ಮಾಡ್ತಿದ್ದಂತೆ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ತೊಡೆ ತಟ್ಟಿ ಯುದ್ಧಕ್ಕೆ ನಿಂತು ಬಿಟ್ಟಿದ್ದಾರೆ. ಟ್ವಿಟ್ಟರ್ ನಲ್ಲಿ ಜಗ್ಗೇಶ್ v/s ಉಪೇಂದ್ರ ಫ್ಯಾನ್ಸ್ ವಾರ್ ನಡೆಯುತ್ತಿದೆ. ಮುಂದೆ ಓದಿ....

ಉಪೇಂದ್ರ ವಿರುದ್ಧ ನಟ ಜಗ್ಗೇಶ್ ಅಸಮಾಧಾನ

ಉಪೇಂದ್ರ ವಿರುದ್ಧ ನಟ ಜಗ್ಗೇಶ್ ಅಸಮಾಧಾನ

'ಉಪ್ಪಿಗಿಂತ ರುಚಿ ಬೇರೆ ಇಲ್ಲ', 'ಎಲ್ಲವೂ ನನ್ನಿಂದ', 'ನಾನು', 'ಹಾಳೆಗಳ ಮೇಲೆ ಅಲ್ಲ, ಹಣೆಗಳ ಮೇಲೆ ಗೀಚಿದ್ದು ನಾನು', 'ಅಣ್ತಮ್ಮಂದಿರನ್ನ ಹಿಡ್ಕೊಂಡು ಬಂದೋನಲ್ಲ ನಾನು'...ಹೀಗನ್ನುವ ಸಾಲುಗಳು 'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಲ್ಲಿದೆ. ಅಸಲಿಗೆ, ಈ ಹಾಡನ್ನ ಖುದ್ದು ಉಪೇಂದ್ರ ಬರೆದು, ಹಾಡಿದ್ದಾರೆ. ಈ ಹಾಡಲ್ಲಿ ಹೆಸರು ಬಳಸದೆ ಕೆಲ ನಟರನ್ನ ಉಪೇಂದ್ರ ಆಡಿಕೊಂಡಿದ್ದಾರೆ. ಅದಕ್ಕೆ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್ ಮಾಡಿರುವ ಟ್ವೀಟ್ ನಲ್ಲೇನಿದೆ?

ಜಗ್ಗೇಶ್ ಮಾಡಿರುವ ಟ್ವೀಟ್ ನಲ್ಲೇನಿದೆ?

''ಒಬ್ಬ ನಟ, ತನ್ನ ಸಹೋದ್ಯೋಗಿ ನಟರನ್ನ ಅಣಕ ಮಾಡಿ ಹಾಡಿದ ಹಾಡು, ರೋಗಗ್ರಸ್ತರ ಮನಸಿನಂತೆ ಇದೆ'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಸಾಲದಕ್ಕೆ ವೃತ್ತಿ ಬದುಕಿನ ಇತಿಹಾಸವನ್ನ ಕೆದಕಿ ಯಾರಿಂದಲೂ ತನಗೆ ಅವಕಾಶ ಸಿಕ್ಕಿಲ್ಲ ಅಂತ ತಮ್ಮ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಗರಂ ಆದ ಉಪೇಂದ್ರ ಅಭಿಮಾನಿಗಳು

ಗರಂ ಆದ ಉಪೇಂದ್ರ ಅಭಿಮಾನಿಗಳು

ಜಗ್ಗೇಶ್ ಟ್ವೀಟ್ ಮಾಡುತ್ತಿದ್ದಂತೆ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಗರಂ ಆಗ್ಬಿಟ್ಟರು. ಜಗ್ಗೇಶ್ ಅವರು 'ಸ್ಟಾರ್', ಪ್ರಸಿದ್ಧ ರಾಜಕಾರಣಿ ಅನ್ನೋದನ್ನೂ ನೋಡದೆ ಉಪೇಂದ್ರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಜಗ್ಗೇಶ್ ವಿರುದ್ಧ ಉಪ್ಪಿ ಫ್ಯಾನ್ಸ್ ಸಮರ

ಜಗ್ಗೇಶ್ ವಿರುದ್ಧ ಉಪ್ಪಿ ಫ್ಯಾನ್ಸ್ ಸಮರ

''ಉಪ್ಪಿ ಹೇಳಿರುವ ಮಾತು ಸತ್ಯವಾಗಿದೆ. ಉಳಿದ ನಟರೆಲ್ಲಾ ರೀಮೇಕ್ ಹೆಸರಲ್ಲಿ ತಂಗಳನ್ನ ನೀಡುತ್ತಿದ್ದಾರೆ. ಸ್ವಂತ ತಲೆ ಉಪಯೋಗಿಸುವ ಉಪ್ಪಿನೇ ಬೆಸ್ಟ್'' ಅಂತ ಉಪೇಂದ್ರ ಪರ ಅಭಿಮಾನಿಗಳು ಬ್ಯಾಟಿಂಗ್ ಮಾಡಿದ್ದಾರೆ.

'ಎದ್ದೇಳು ಮಂಜುನಾಥ' ಮತ್ತು 'ಜಿತೇಂದ್ರ' ಚಿತ್ರದಲ್ಲಿ ಮಾಡಿದ್ದೇನು?

'ಎದ್ದೇಳು ಮಂಜುನಾಥ' ಮತ್ತು 'ಜಿತೇಂದ್ರ' ಚಿತ್ರದಲ್ಲಿ ಮಾಡಿದ್ದೇನು?

ನಟ ಜಗ್ಗೇಶ್ ಅಭಿನಯದ 'ಜಿತೇಂದ್ರ' ಚಿತ್ರದ ಕೆಲ ಸೀನ್ ಗಳಲ್ಲಿ ಉಪೇಂದ್ರ ಅವರ ಹೇರ್ ಸ್ಟೈಲ್ ಮತ್ತು ಮಾತುಗಳ ಅಣಕ ಇತ್ತು. ಇನ್ನೂ 'ಎದ್ದೇಳು ಮಂಜುನಾಥ' ಚಿತ್ರದಲ್ಲೂ ಕೆಲವರ ಕಾಲನ್ನ ಎಳೆಯಲಾಗಿದೆ. ಜಗ್ಗೇಶ್ ಟ್ವೀಟ್ ಮಾಡಿದ ತಕ್ಷಣ ಅದನ್ನ ನೆನಪಿಸಿಕೊಂಡಿರುವ ಅಭಿಮಾನಿಗಳು ನವರಸ ನಾಯಕನಿಗೆ ಪ್ರಶ್ನೆ ಮಾಡಿದ್ದಾರೆ.

ಹೊಟ್ಟೆ ಉರಿ ಯಾಕೆ?

ಹೊಟ್ಟೆ ಉರಿ ಯಾಕೆ?

ಇನ್ನೂ ಕೆಲವರು ಜಗ್ಗೇಶ್ ಅವರಿಗೆ ಉಪೇಂದ್ರ ಅವರ ಮೇಲೆ ಹೊಟ್ಟೆ ಉರಿ ಯಾಕೆ ಅಂತ ಡೈರೆಕ್ಟಾಗಿ ಕೇಳಿದ್ದಾರೆ.

'ಜಿತೇಂದ್ರ-2' ಬರುತ್ತಾ?

'ಜಿತೇಂದ್ರ-2' ಬರುತ್ತಾ?

'ಜಿತೇಂದ್ರ' ನಂತ್ರ 'ಜಿತೇಂದ್ರ-2' ಮಾಡುವ ಪ್ಲಾನ್ ಇದ್ಯಾ ಅಂತ ಅಭಿಮಾನಿಯೊಬ್ಬರು ಜಗ್ಗೇಶ್ ಗೆ ಟಾಂಗ್ ನೀಡಿದ್ದಾರೆ.

ಸತ್ಯವನ್ನ ಸಹಿಸಿಕೊಳ್ಳಲಿಲ್ವಾ ಅಭಿಮಾನಿಗಳು.?

ಸತ್ಯವನ್ನ ಸಹಿಸಿಕೊಳ್ಳಲಿಲ್ವಾ ಅಭಿಮಾನಿಗಳು.?

ಜಗ್ಗೇಶ್ ಮಾಡಿದ ಒಂದು ಟ್ವೀಟ್ ಗೆ ಹೀಗೆಲ್ಲಾ ಪ್ರತಿಕ್ರಿಯೆ ಕೊಟ್ಟ ಎಲ್ಲಾ ಉಪ್ಪಿ ಅಭಿಮಾನಿಗಳಿಗೆ ಹೊಸ ಗಾದೆ ಹೇಳುವ ಮೂಲಕ ಎಲ್ಲರಿಗೂ ತಿರುಗೇಟು ನೀಡಿದರು.

ಟ್ವಿಟ್ಟರ್ ನಲ್ಲಿ ವಾಕ್ಸಮರ.!

ಟ್ವಿಟ್ಟರ್ ನಲ್ಲಿ ವಾಕ್ಸಮರ.!

ಜಗ್ಗೇಶ್ ಮಾಡಿದ ಮತ್ತೊಂದು ಟ್ವೀಟ್ ಗೆ ಅಭಿಮಾನಿಗಳಿಂದ ಸಿಕ್ಕಿರುವ ರಿಯಾಕ್ಷನ್ ಇದು. ಅಟ್ಯಾಕ್ ಗೆ ಕೌಂಟರ್ ಅಟ್ಯಾಕ್ ಟ್ವಿಟ್ಟರ್ ನಲ್ಲಿ ನಡೆಯುತ್ತಲೇ ಇದೆ.

ನಿಯತ್ತು ಇಲ್ವಾ ನಿಮಗೆ?

ನಿಯತ್ತು ಇಲ್ವಾ ನಿಮಗೆ?

ಉಪೇಂದ್ರ ಅವರೇ ಜಗ್ಗೇಶ್ ಅವರನ್ನ ಹೀರೋ ಮಾಡಿದ್ದು ಅಂತ ಕೆಲ 'ಅಭಿಮಾನಿ'ಗಳು ಅಭಿಮಾನದ ಪರಾಕಾಷ್ಟೆ ಇಂದ ಮಾಡಿರುವ ಟ್ವೀಟ್ಸ್ ಇದು.

ಇತಿಹಾಸ ಕೆದಕಿದ ಜಗ್ಗೇಶ್

ಇತಿಹಾಸ ಕೆದಕಿದ ಜಗ್ಗೇಶ್

ಅಭಿಮಾನಿಗಳು ಕೆದಕಿದ ನಿಯತ್ತಿನ ಪ್ರಶ್ನೆಗೆ ತಮ್ಮ ಇತಿಹಾಸವನ್ನ ಹೇಳುವ ಮೂಲಕ ಜಗ್ಗೇಶ್ ಉತ್ತರ ನೀಡಿದ್ದಾರೆ. 'ತರ್ಲೆ ನನ್ ಮಗ' ಚಿತ್ರ ಮಾಡುವ ಮುನ್ನವೇ ಜಗ್ಗೇಶ್ 69 ಚಿತ್ರಗಳಲ್ಲಿ ನಟಿಸಿದ್ದರು. ಅಂದ್ಮೇಲೆ ಉಪೇಂದ್ರ ಅವರಿಂದ ಅವಕಾಶ ಸಿಗುವುದಕ್ಕೆ ಹೇಗೆ ಸಾಧ್ಯ ಅನ್ನೋದು ಅವರ ವಾದ.

ಇತಿಹಾಸ ತಿಳಿದಿರಬೇಕು.!

ಇತಿಹಾಸ ತಿಳಿದಿರಬೇಕು.!

ಹಿಂದು ಮುಂದು ಗೊತ್ತಿಲ್ಲದೇ ಬಾಯಿಗೆ ಬಂದ್ಹಂಗೆ ಮಾತಾಡುವ ಕೆಲವರಿಗೆ ಜಗ್ಗೇಶ್ ಬಿಸಿ ಮುಟ್ಟಿಸಿರುವ ಪರಿ ಇದು.

61 ಫಾಲೋವರ್ಸ್ ನ ಬ್ಲಾಕ್ ಮಾಡಿದ ಜಗ್ಗೇಶ್.!

61 ಫಾಲೋವರ್ಸ್ ನ ಬ್ಲಾಕ್ ಮಾಡಿದ ಜಗ್ಗೇಶ್.!

ಅಭಿಮಾನಿಗಳ ಅತಿರೇಕದಿಂದ ಕಿರಿಕಿರಿಗೊಂಡ ಜಗ್ಗೇಶ್, ಟ್ವಿಟ್ಟರ್ ನಲ್ಲಿನ ತಮ್ಮ 61 ಫಾಲೋವರ್ಸ್ ನ ಬ್ಲಾಕ್ ಮಾಡಿದ್ದಾರೆ. ಅದರ ಕುರಿತು ಅವರು ಟ್ವೀಟ್ ನಲ್ಲಿ ಹೇಳಿಕೊಂಡಿರುವುದು ಹೀಗೆ.

ಅಭಿಮಾನಿ ಮಾತಿಗೆ ಮಣಿದ ಜಗ್ಗೇಶ್.!

ಅಭಿಮಾನಿ ಮಾತಿಗೆ ಮಣಿದ ಜಗ್ಗೇಶ್.!

ಜಗ್ಗೇಶ್ ಮತ್ತು ಉಪೇಂದ್ರ ಅಭಿಮಾನಿಗಳು ನಡುವೆ ನಡೆಯುತ್ತಿದ್ದ ವಾಕ್ಸಮರವನ್ನ ನೋಡುತ್ತಿದ್ದ ಜಗ್ಗೇಶ್ ಅಭಿಮಾನಿಯೊಬ್ಬರು 'ಉಪ್ಪಿ ಅಭಿಮಾನಿಗಳ ಟ್ವೀಟ್ ಗಳನ್ನ ನಿರ್ಲಕ್ಷಿಸುವಂತೆ' ಮನವಿ ಮಾಡಿಕೊಂಡರು. ಅದಕ್ಕೆ ಬೆಲೆಕೊಟ್ಟ ಜಗ್ಗೇಶ್ ಬೇರಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

More from Filmibeat

English summary
Kannada Actor Jaggesh had taken his twitter account to react on 'No excuse me' song from Kannada Actor Upendra directorial 'Uppi-2'. This has created a storm in Twitter, where Upendra fans are battling against Jaggesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X