ಅನಂತ್ ನಿಧನ : ಬದುಕಿನ ಮೇಲೆ ನಂಬಿಕೆ ಕಳೆದುಕೊಂಡ ಜಗ್ಗೇಶ್
ಕೇಂದ್ರ ಸಚಿವ, ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕ ಅನಂತ್ ಕುಮಾರ್ ಇಂದು (ನವೆಂಬರ್ 12) ಬೆಳಗಿನ ಜಾವ ಕೊನೆಯುಸಿರೆಳೆದರು. ಅವರ ಅಗಲಿಕೆಗೆ ಅನೇಕ ರಾಜಕೀಯ ಹಾಗೂ ಸಿನಿಮಾ ಗಣ್ಯರು ಕಂಬನಿ ಮಿಡಿದಿದ್ದಾರೆ.
ನಟ ಹಾಗೂ ರಾಜ್ಯ ಬಿಜೆಪಿ ಪಕ್ಷದ ಮುಖಂಡ ಜಗ್ಗೇಶ್ ಸಹ ಅನಂತ್ ಕುಮಾರ್ ಅವರ ನಿಧನದ ನೋವನ್ನು ಹಂಚಿಕೊಂಡಿದ್ದಾರೆ. ಸಾವಿನ ಸುದ್ದಿ ಕೇಳಿದ ತಕ್ಷಣ ಅನಂತ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರದ ದರ್ಶನವನ್ನು ಜಗ್ಗೇಶ್ ಪಡೆದಿದ್ದಾರೆ. ತಮ್ಮ ಪಕ್ಷದ ಪ್ರಬಲ ನಾಯಕನನ್ನು ಕಳೆದುಕೊಂಡ ದುಃಖದಲ್ಲಿ ಅವರು ಇದ್ದಾರೆ.
''ಬದುಕಿನ ಮೇಲೆ ನಂಬಿಕೆಯೇ ಹೋಯ್ತು. ನಶ್ವರ ಜಗಕೆ ನಗುವೆ ಶಾಶ್ವತ. ಒಳಿತು ಮಾಡು ಮನುಜ ಇರೋದು ಮೂರು ದಿವಸ'' ಎಂದು ಜಗ್ಗೇಶ್ ಟ್ವೀಟ್ ಮಾಡಿ ಅನಂತ್ ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಮುಂದೆ ಓದಿ...

ಮೋದಿ ಅವರಿಗೆ ಪರಿಚಯ ಮಾಡಿಸಿದ್ದರು
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಗ್ಗೇಶ್ ಯಶವಂತಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ವೇದಿಕೆ ಮೇಲೆ ಅನಂತ್ ಕುಮಾರ್ ಅವರೇ ಮೋದಿ ಅವರಿಗೆ ಜಗ್ಗೇಶ್ ರನ್ನು ಪರಿಚಯ ಮಾಡಿಸಿದರಂತೆ.

ಜಗ್ಗೇಶ್ ಟ್ವೀಟ್
''ಅಂದು ನನ್ನ ಜೊತೆ ವೇದಿಕೆಯಲ್ಲಿ ಅನಂತ ಜೀ ಮೋದಿರವರಿಗೆ ನನ್ನ ಪರಿಚಯಿಸಿದ ಕ್ಷಣ..ಸಿಕ್ಕಾಗೆಲ್ಲ 'ಬೇವು ಬೆಲ್ಲ' ಚಿತ್ರದ 'ಜನುಮಾ ನೀಡುತ್ತಾಳೆ..' ಹಾಡುತ್ತಿದ್ದರು. ಅಪಾರ ಕನ್ನಡಪ್ರೇಮಿ. 5ತಿಂಗಳ ಹಿಂದೆ ಇಷ್ಟು ಆರೋಗ್ಯದ ಮನುಷ್ಯ ಕಾಲವಾದರು ಎಂದರೆ, ಬದುಕಿನ ಮೇಲೆ ನಂಬಿಕೆಯೇ ಹೋಯ್ತು. ನಶ್ವರ ಜಗಕೆ ನಗುವೆ ಶಾಶ್ವತ. ಒಳಿತು ಮಾಡು ಮನುಜ ಇರೋದು ಮೂರು ದಿವಸ'' ಎಂದು ಜಗ್ಗೇಶ್ ತಮ್ಮ ದುಃಖ ಹಂಚಿಕೊಂಡಿದ್ದಾರೆ.
ಅನಂತತಾನಂತವಾಗಿ.... ಅಗಲಿದ ನಾಯಕಗೆ ಗಣ್ಯರ ಅಶ್ರುತರ್ಪಣ
ಆತ್ಮಕ್ಕೆ ಶಾಂತಿ ಕೋರುವೆ
''ನಾನು ಕಂಡ ಅದ್ಭುತ ವ್ಯಕ್ತಿತ್ವ, ವಾಗ್ಮಿ ಸರಳ ಸಜ್ಜನ ನಾಯಕ ಶ್ರೀ ಅನಂತ ಕುಮಾರ್ ರವರು. ಕಾಲನತೆಕ್ಕೆಗೆ ಇಷ್ಟು ಬೇಗ ಆಲಂಗಿಸಿದರು. ನಂಬಲಾಗಲಿಲ್ಲಾ! ಅವರ ಆತ್ಮಕ್ಕೆ ಶಾಂತಿ ಕೋರುವೆ. ಹರಿ ಓಂ..'' ಎಂದು ಸಂತಾಪ ಸೂಚಿಸಿದ್ದಾರೆ.

ಇಂದು ವಿಷಾದದ ದಿನ
''ವೇದಿಕೆಗಳಲ್ಲಿ ಮೋದಿ ಅವರ ಭಾಷಣವನ್ನು ಕನ್ನಡಕ್ಕೆ ಅವರು ಅನುವಾದ ಮಾಡುತ್ತಿದ್ದರು. ಅದನ್ನು ನೆನಪಿಸಿಕೊಂಡರೆ ನೋವಾಗುತ್ತದೆ. ಐದು ತಿಂಗಳಿನಲ್ಲಿ ಅವರನ್ನು ಕಳೆದುಕೊಳ್ಳುತ್ತೇವೆ ಎಂದುಕೊಂಡಿರಲಿಲ್ಲ. ಲಕ್ಷಾಂತರ ಜನ ಕಾರ್ಯಕರ್ತರಿಗೆ ಇಂದು ವಿಷಾದದ ದಿನ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ.''
ಶ್ರದ್ಧಾಂಜಲಿ:ರಾಜ್ಯ ನಾಯಕರ ಮನದಲ್ಲಿ 'ಅನಂತ'ಭಾವ

ಇಂದು ಬೆಳಗಿನ ಜಾವ ನಿಧನ
ಅಂದಹಾಗೆ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12ರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಕಡೆಯ ಹಂತದಲ್ಲಿ ಲಂಡನ್ ಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ.


Click it and Unblock the Notifications











