For Quick Alerts
  ALLOW NOTIFICATIONS  
  For Daily Alerts

  ಕೇಂದ್ರ ಸಚಿವರಿಗೇ ಇಂಥಹಾ ಸ್ಥಿತಿ: ಜಗ್ಗೇಶ್ ಹಂಚಿಕೊಂಡ ಆಘಾತಕಾರಿ ವಿಡಿಯೋ

  |

  ಇತ್ತೀಚೆಗಷ್ಟೆ ಕೊರೊನಾ ದಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆದಿದೆ. ಅಂತ್ಯಕ್ರಿಯೆಯ ವಿಡಿಯೋ ನಟ, ರಾಜಕಾರಣಿ ಜಗ್ಗೇಶ್ ಹಂಚಿಕೊಂಡಿದ್ದು, ವಿಡಿಯೋ ನೋಡಿದವರು 'ಕೇಂದ್ರ ಸಚಿವರಿಗೆ ಇಂಥಹಾ ಸ್ಥಿತಿಯೇ' ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

  ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada

  ಕೇಂದ್ರ ಸಚಿವ ಸುರೇಶ್ ಅಂಗಡಿ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಸೋಂಕಿನಿಂದಾಗಿ ದೆಹಲಿಯಲ್ಲಿ ಮೃತಪಟ್ಟರು. ಕೊರೊನಾ ನಿಯಮಾವಳಿಗಳಿಗೆ ಅನುಸಾರವಾಗಿ ದೆಹಲಿಯಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು.

  'ಕಪ್ಪಾಗಿ ಹುಟ್ಟಿದ್ದು ಕರ್ಮನಾ' ಎಂದಿದ್ದೇಕೆ ವಿಜಯ್? ಜಗ್ಗೇಶ್-ವಿಜಿ ನಡುವೆ ನಡೆದ ಸಂಭಾಷಣೆ ಏನು?'ಕಪ್ಪಾಗಿ ಹುಟ್ಟಿದ್ದು ಕರ್ಮನಾ' ಎಂದಿದ್ದೇಕೆ ವಿಜಯ್? ಜಗ್ಗೇಶ್-ವಿಜಿ ನಡುವೆ ನಡೆದ ಸಂಭಾಷಣೆ ಏನು?

  ಅಂತ್ಯಕ್ರಿಯೆ ವೇಳೆ, ಸುರೇಶ್ ಅಂಗಡಿಯವರ ಶವಕ್ಕೆ ಹಗ್ಗಗಳನ್ನು ಕಟ್ಟಿ ಗುಂಡಿಗೆ ಇಳಿಬಿಡಲಾಗಿದೆ. ಹೀಗೆ ಇಳಿಬಿಡುವ ವೇಳೆ ಅಂಗಡಿ ಅವರ ಶವ ಗುಂಡಿಯೊಳಗೆ ತಲೆಕೆಳಗಾಗಿ ಬಿದ್ದುಹೋಗುತ್ತದೆ. ಯಾವ ಗೌರವಗಳಿಲ್ಲದೆ ಶವವನ್ನು ಗುಂಡಿಯೊಳಗೆ ಮಲಗಿಸಿ ಜೆಸಿಬಿಯಿಂದ ಮಣ್ಣು ಮುಚ್ಚಲಾಗುತ್ತದೆ.

  ಕೇಂದ್ರ ಸಚಿವರ ಶವವನ್ನು ಗುಂಡಿಗೆ ದೂಡಲಾಗಿದೆ

  ಕೇಂದ್ರ ಸಚಿವರ ಶವವನ್ನು ಗುಂಡಿಗೆ ದೂಡಲಾಗಿದೆ

  ಜಗ್ಗೇಶ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರಿಗೆ ಇಂಥಹಾ ಸ್ಥಿತಿಯಾದರೆ ಸಾಮಾನ್ಯರ ಪರಿಸ್ಥಿತಿ ಏನು ಎಂದು ಆತಂಕಪಡುವಂತಿದೆ ವಿಡಿಯೋ. ತುಸುವೂ ಗೌರವವಿಲ್ಲದೆ ಗುಂಡಿಗೆ ದೂಡಲಾಗುತ್ತದೆ ಸುರೇಶ್ ಅಂಗಡಿ ಅವರ ಶವವನ್ನು.

  ಹಣ-ಅಧಿಕಾರ ಎಷ್ಟಿದ್ದರೇನು: ಜಗ್ಗೇಶ್

  ಹಣ-ಅಧಿಕಾರ ಎಷ್ಟಿದ್ದರೇನು: ಜಗ್ಗೇಶ್

  ವಿಡಿಯೋ ಹಂಚಿಕೊಂಡಿರುವ ಜಗ್ಗೇಶ್, ಬಹುನೋವಿನಿಂದ ಕೆಲವು ಸಾಲುಗಳನ್ನು ಬರೆದಿದ್ದಾರೆ. 'ಸತ್ತಾಗ ಬಂಧು-ಮಿತ್ರರು ನೋಡದಂತೆ ಮುಖಮುಚ್ಚಿ, ಕಸದ ಗುಂಡಿಗೆ ಬಿಸಾಕುವ ಸ್ಥಿತಿ ಬಂದಮೇಲೆ, ಹಣ-ಅಧಿಕಾರ ಎಷ್ಟಿದ್ದರೇನು' ಎಂದಿದ್ದಾರೆ ನಟ ಜಗ್ಗೇಶ್.

  'ನಾನ್ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತ, ಆದ್ರೆ ನಿಮ್ಮ ಅಭಿಮಾನಿ' ಎಂದ ವ್ಯಕ್ತಿಗೆ ಜಗ್ಗೇಶ್ ಏನಂದ್ರು?'ನಾನ್ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತ, ಆದ್ರೆ ನಿಮ್ಮ ಅಭಿಮಾನಿ' ಎಂದ ವ್ಯಕ್ತಿಗೆ ಜಗ್ಗೇಶ್ ಏನಂದ್ರು?

  ಹಣ, ಅಧಿಕಾರ ನಾನು ನನ್ನದು ಮಮಕಾರ ಏಕೆ: ಜಗ್ಗೇಶ್ ಪ್ರಶ್ನೆ

  ಹಣ, ಅಧಿಕಾರ ನಾನು ನನ್ನದು ಮಮಕಾರ ಏಕೆ: ಜಗ್ಗೇಶ್ ಪ್ರಶ್ನೆ

  ಕೊರೊನಾ ಆರ್ಭಟ, ಅದರಿಂದ ಸಾಮಾನ್ಯ ಜನರ ನೋವು, ಧನನಷ್ಟ ನೆಮ್ಮದಿಹಾಳು, ಮಾನಸಿಕ ಒತ್ತಡ ಇವುಗಳನ್ನು ತಕ್ಕಮಟ್ಟಿಗೆ ತಡೆಯಬಹುದು, ಆದರೆ ಸತ್ತಾಗ ಬಂಧುಮಿತ್ರನು ನೋಡಲಾಗದೆ , ಮುಖಮುಚ್ಚಿ, ಯಾರೊ ಅನಾಮಿಕರು ಸತ್ತವರನ್ನು ಕಸದಂತೆ ಗುಂಡಿಯಲ್ಲಿ ಹೀಗೆ ಬಿಸಾಕುವ ಸ್ಥಿತಿ ಬಂದಮೇಲೆ, ಯಾವ ಪುರುಷಾರ್ಥಕ್ಕೆ ಹಣ ಅಧಿಕಾರ ನಾನು ನನ್ನದು ಮಮಕಾರ? ಎಂದು ಪ್ರಶ್ನಿಸಿದ್ದಾರೆ ಜಗ್ಗೇಶ್.

  ವಿಡಿಯೋ ಮೂಲಕ ಅಂತ್ಯಕ್ರಿಯೆ ನೋಡಿದ ಕುಟುಂಬದವರು

  ವಿಡಿಯೋ ಮೂಲಕ ಅಂತ್ಯಕ್ರಿಯೆ ನೋಡಿದ ಕುಟುಂಬದವರು

  ಸುರೇಶ್ ಅಂಗಡಿ ಅವರು, ಸೆಪ್ಟೆಂಬರ್ 23 ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ಆಯಿತು. ಸುರೇಶ್ ಅಂಗಡಿ ಅವರ ತಾಯಿ ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿಲ್ಲ. ವಿಡಿಯೋ ಮೂಲಕ ಮಗನ ಅಂತ್ಯಕ್ರಿಯೆ ನೋಡಿ ಕಣ್ಣೀರು ಹಾಕಿದರು.

  'ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು''ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು'

  English summary
  Actor, politician Jaggesh shared Suresh Angadi's funeral video. In which body of Suresh Angadi dropped into a pit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X