»   » ಸುದೀಪ್ ಸಾಧನೆ ಕಂಡು ಜಗ್ಗೇಶ್ ಹೇಳಿದ್ದೇನು?

ಸುದೀಪ್ ಸಾಧನೆ ಕಂಡು ಜಗ್ಗೇಶ್ ಹೇಳಿದ್ದೇನು?

Posted By:
Subscribe to Filmibeat Kannada

ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟ ಜಗ್ಗೇಶ್ ತಮಗೆ ಅನಿಸಿದ್ದನ್ನ ಥಟ್ ಅಂತ ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳ ಮುಂದೆ ಆಗಾಗ ಬರುತ್ತಲೇ ಇರುತ್ತಾರೆ.

ತಪ್ಪನ್ನ ತಪ್ಪು ಅಂತ ಹೇಳುವ ಜಗ್ಗೇಶ್ ನೇರವಂತಿಕೆ ಅನೇಕರಿಗೆ ಇಷ್ಟವಾಗದೇ ಇರಬಹುದು. ಆದ್ರೆ, ಯಾವುದೇ ಜಂಬ, ಅಹಂಕಾರವಿಲ್ಲದೇ ಇತರರ ಸಾಧನೆಯನ್ನೂ ಹೊಗಳುವ ಜಗ್ಗೇಶ್ ಅವರ ಸ್ವಚ್ಛಂದ ಮನೋಭಾವ ಕೆಲವರಿಗಂತೂ ತುಂಬಾ ಇಷ್ಟ.

ಇದಕ್ಕೆ ಉತ್ತಮ ನಿದರ್ಶನ ಇಲ್ಲಿದೆ ನೋಡಿ. ಕೆಲ ಹೊತ್ತಿನ ಹಿಂದೆಯಷ್ಟೆ ಜಗ್ಗೇಶ್, ಕಿಚ್ಚ ಸುದೀಪ್ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ.

Jaggesh praises Kiccha Sudeep on Twitter

''ಉತ್ತರ ಭಾರತೀಯ ನಟರ ಸಾಧನೆ ಮಾತ್ರ ಕಾಣುತ್ತಿದ್ದ ನಮಗೆ ಕನ್ನಡದ ನಟ ಸುದೀಪನ ಸಾಧನೆ ನೋಡಿ ಶಹಭಾಸ್ ಕನ್ನಡಿಗ ಅನ್ನಲೇಬೇಕು'' ಅಂತ ಸುದೀಪ್ ಅವರ ಸಾಧನೆಯನ್ನ ನಟ ಜಗ್ಗೇಶ್ ಕೊಂಡಾಡಿದ್ದಾರೆ.

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರ ಪೈಕಿ ಕಿಚ್ಚ ಸುದೀಪ್ ಕೂಡ ಒಬ್ಬರು. 'ಬಿಗ್ ಬಾಸ್' ಕಾರ್ಯಕ್ರಮ ಜನಪ್ರಿಯವಾಗುವುದರ ಹಿಂದೆ ಸುದೀಪ್ ಪಾತ್ರ ಬಹಳ ಮುಖ್ಯವಾದದ್ದು.

Jaggesh praises Kiccha Sudeep on Twitter

'ಬಿಗ್ ಬಾಸ್' ಕಾರ್ಯಕ್ರಮದ ಮುಂದಿನ 5 ಸೀಸನ್ ಗಳನ್ನ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ಅದಕ್ಕಾಗಿ ಕಲರ್ಸ್ ಕನ್ನಡ ವಾಹಿನಿ 20 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ನೀಡಿದೆ ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ['ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?]

'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿದ ಟ್ವೀಟ್ ನ ಉಲ್ಲೇಖಿಸಿ ಜಗ್ಗೇಶ್ ಅವರು ಸುದೀಪ್ ರಿಗೆ ಭೇಷ್ ಅಂದಿದ್ದಾರೆ. ಹೀಗೆ, ಜಗ್ಗೇಶ್ ಹಾದಿಯಲ್ಲೇ ಒಬ್ಬರನ್ನ ಇನ್ನೊಬ್ಬರು ಕಾಲೆಳೆಯುವುದು ಬಿಟ್ಟು, ಬೆನ್ನು ತಟ್ಟುವುದಕ್ಕೆ ಶುರುಮಾಡಿದರೆ, ಬಹುಶಃ ಸ್ಯಾಂಡಲ್ ವುಡ್ ನಲ್ಲಿ ವಿವಾದಗಳೆನ್ನುವುದೇ ಇರುವುದಿಲ್ಲ.!

English summary
Kannada Actor Jaggesh has taken his twitter account to praise Kiccha Sudeep's popularity and achievement in Kannada Film Industry. Take a look at Jaggesh's tweet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada