'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್

ತುಮಕೂರಿನ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ವಾಮಿಜಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಠಕ್ಕೆ ತೆರಳಿದ್ದಾರೆ.

ಅನೇಕ ದಿನಗಳಿಂದ ಶ್ರೀಗಳಿಗೆ ಚಿಕಿತ್ಸೆ ನಡೆಯುತ್ತಿದೆ. ಅವರ ಸಾವಿರಾರೂ ಭಕ್ತಾದಿಗಳು ಆರೋಗ್ಯ ಸ್ಥಿತಿ ಸುಧಾರಿಸಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಂಡಿದ್ದಾರೆ.

ಸಿದ್ದಗಂಗಾ LIVE: ತೀರಾ ಗಂಭೀರ ಸ್ಥಿತಿಯಲ್ಲಿ ಶ್ರೀಗಳ ಆರೋಗ್ಯ

ದೇವರು, ಭಕ್ತಿ, ಪೂಜೆ ಈ ರೀತಿ ವಿಷಯಗಳಲ್ಲಿ ಜಗ್ಗೇಶ್ ಅವರಿಗೆ ಹೆಚ್ಚು ಒಲವು. ಹೀಗಿರುವಾಗ, ಅವರಿಗೆ ಮಂತ್ರಾಲಯದ ರಾಯರ ಮಠ ಬಿಟ್ಟರೆ ತುಂಬ ಇಷ್ಟ ಆಗುವುದು ಸಿದ್ದಗಂಗಾ ಮಠವಂತೆ. ಆ ಮಠದಿಂದ ಶ್ರೀಗಳಿಗೆ ಹೇಳಿ ಒಂದು ವಸ್ತುವನ್ನು ಕಿತ್ತುಕೊಂಡು ಬಂದಿದ್ದರಂತೆ. ಈ ಎಲ್ಲ ವಿಷಯಗಳ ಬಗ್ಗೆ ಕೆಲ ದಿನಗಳ ಹಿಂದೆ ಜಗ್ಗೇಶ್ ಮಾತನಾಡಿದ್ದಾರೆ. ಮುಂದೆ ಓದಿ..

ತುಂಬ ಇಷ್ಟ ಪಡುವ ಮಠ

ತುಂಬ ಇಷ್ಟ ಪಡುವ ಮಠ

''ನಾನು ರಾಯರ ಮಠ ಬಿಟ್ಟರೆ ತುಂಬ ಇಷ್ಟ ಪಡುವ ಮಠ ಸಿದ್ದಗಂಗಾ ಮಠ. ಆ ಕಾಲದಿಂದ ಕೂಡ ನಮ್ಮ ತಾಯಿ ಮಠಕ್ಕೆ ನಡೆದುಕೊಳ್ಳುತ್ತಿದ್ದರು. ನಾನು ಒಮ್ಮೆ ಪ್ರಪಂಚದಲ್ಲಿ ಯಾರು ಹೆಚ್ಚು ವರ್ಷ ಬದುಕಿದ್ದಾರೆ ಎಂಬ ಲಿಸ್ಟ್ ನೋಡುವಾಗ ಎಲ್ಲ ಗ್ರಹಗಳನ್ನು ಪೂರ್ಣ ಮಾಡಿದಾಗ 120 ವರ್ಷ ಆಗುತ್ತದೆ ಎಂಬ ವಿಷಯ ತಿಳಿಯಿತು. ಅದೇ ರೀತಿ ಶ್ರೀಗಳು ಸಹ ಅದನ್ನು ಪೂರ್ಣ ಮಾಡಬೇಕು ಎಂಬ ಆಸೆ ಇದೆ.'' - ಜಗ್ಗೇಶ್, ನಟ

ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಲಂಡನ್ ಕನ್ನಡಿಗರ ಪ್ರಾರ್ಥನೆ

ಕೋಟ್ಯಾಂತರ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ

ಕೋಟ್ಯಾಂತರ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ

''ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಶ್ರೀಗಳು ನಮ್ಮ ಜೊತೆಗೆ ಯಾವಾಗಲೂ ಇರಲಿ ಎನ್ನುವುದು ನನ್ನ ಆಸೆ. ನಡೆದಾಡುವ ದೇವರು, ದಾಸೋಹಿಗಳು ಅವರು. ಎಷ್ಟೋ ಕೋಟ್ಯಾಂತರ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ. ಎಷ್ಟೋ ವರ್ಷಗಳ ಕಾಲ ಶಿವಪೂಜೆ ಮಾಡಿದ್ದಾರೆ. ಅವರು ಮಾಡಿರುವ ಪೂಜೆ ನೆನೆಸಿಕೊಂಡರೆ ಖುಷಿ ಆಗುತ್ತದೆ.'' - ಜಗ್ಗೇಶ್, ನಟ

ಅವರ ಪಾದುಕೆಯನ್ನು ಕಿತ್ತುಕೊಂಡು ಬಂದೆ

ಅವರ ಪಾದುಕೆಯನ್ನು ಕಿತ್ತುಕೊಂಡು ಬಂದೆ

''ನಾನು ನನ್ನ ಹೆಂಡತಿ ಅವರ ಬಳಿ ಕೂತು ಮಾತಾಡಿ ನಿಮ್ಮ ಬಳಿ ನನಗೆ ಒಂದೇ ಒಂದು ವಸ್ತು ಬೇಕು... ನೀವು ಅದನ್ನು ಕೊಡಲೇ ಬೇಕು ಎಂದು ಪ್ರಾರ್ಥನೆ ಮಾಡಿದೆ. ಆಗ ಅವರು ನನಗೆ ನೀಡಿದ್ದ ಅವರ ಪಾದುಕೆ. ಅವರ ಪಾದುಕೆಯನ್ನು ನಾನು ಕಿತ್ತುಕೊಂಡು ಬಂದೆ. ನನಗೆ ಅವರನ್ನು ನೋಡಿದರೆ ಅಷ್ಟು ಪ್ರೀತಿ ಇದೆ.'' - ಜಗ್ಗೇಶ್, ನಟ

ಅವರ ಜೊತೆಗೆ ಶಿವ ಇರುತ್ತಾನೆ

''ಅವರ ಪಾದುಕೆಯನ್ನು ನಮ್ಮ ದೇವರ ಮನೆಯಲ್ಲಿ ಇಟ್ಟಿ ಪೂಜೆ ಮಾಡುತ್ತಿದ್ದೇವೆ. ಅವರು ಯಾವಾಗಲೂ ಇರುತ್ತಾರೆ. ಅವರ ಕಲಿಸಿದ ವಿದ್ಯೆ ಇರುತ್ತದೆ. ಸುಮಾರು ಕಾರ್ಯಕ್ರಮಗಳಲ್ಲಿ ಅವರ ಜೊತೆಗೆ ಭಾಗವಹಿಸಿದ್ದೇನೆ. ಅವರ ಜೊತೆಗೆ ಶಿವ ಯಾವಾಗಲೂ ಇರುತ್ತಾನೆ. ಅವರು ಯಾವಾಗಲೂ ಆನಂದವಾಗಿ ಇರಲಿ.'' - ಜಗ್ಗೇಶ್, ನಟ

More from Filmibeat

English summary
Kannada actor Jaggesh prays for fast recovery of Siddaganga Swamiji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X