ಪಾರ್ಟಿ ಕೊಟ್ಟು ಪಾರ್ಟ್ ಗಿಟ್ಟಿಸ್ತಿದ್ರಾ ರಮ್ಯಾ? ಜಗ್ಗೇಶ್ ಬಾಯಲ್ಲಿ 'ಪಲ್ಲಂಗ'ದ ಮಾತು! ಇದೇನಿದು?

By Harshitha

Recommended Video

ನರೇಂದ್ರ ಮೋದಿ ಬಗ್ಗೆ ರಮ್ಯಾ ಮಡಿದ ಕಾಮೆಂಟ್ ಗೆ ಜಗ್ಗೇಶ್ ಕೆಂಡಾಮಂಡಲ | Filmibeat Kannada

ಎಣ್ಣೆ-ಸೀಗೆಕಾಯಿ ಹೆಂಗೋ.. ಹಾವು-ಮುಂಗುಸಿ ಹೆಂಗೋ.. ನವರಸ ನಾಯಕ ಜಗ್ಗೇಶ್ ಹಾಗೂ ನಟಿ, ಮಾಜಿ ಸಂಸದೆ ರಮ್ಯಾ ಕೂಡ ಹಂಗೆ.!

'ನೀರ್ ದೋಸೆ' ಸೆಟ್ ನಿಂದ ನಟಿ ರಮ್ಯಾ ಹೊರಗೆ ಬಂದ್ಮೇಲೆ ಜಗ್ಗೇಶ್ ಹಾಗೂ ರಮ್ಯಾ ನಡುವೆ ಅಷ್ಟಕಷ್ಟೆ. ಇವರಿಬ್ಬರ ನಡುವೆ ಆಗಾಗ ಟ್ವಿಟ್ಟರ್ ವಾರ್ ನಡೆಯುತ್ತಲೇ ಇರುತ್ತೆ. ಪಾಕ್ ಬಗ್ಗೆ ರಮ್ಯಾ ಹೊಗಳಿದಾಗ, ಜಗ್ಗೇಶ್ ಛೀಮಾರಿ ಹಾಕಿದ್ದು ನಿಮಗೆ ನೆನಪಿರಬಹುದು. ಇದೀಗ ಮತ್ತೊಮ್ಮೆ ರಮ್ಯಾ ವಿರುದ್ಧ ಜಗ್ಗೇಶ್ ತಿರುಗಿ ಬಿದ್ದಿದ್ದಾರೆ.

''ಪ್ರಧಾನಿ ಮೋದಿ ನಶೆಯಲ್ಲಿದ್ದಾರೆ'' ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯೂ ಆಗಿರುವ ರಮ್ಯಾ ಮಾಡಿದ್ದ ಟ್ವೀಟ್ ಇದೀಗ ವಿವಾದದ ಕೇಂದ್ರ ಬಿಂದು ಆಗಿದೆ. ಇದೇ ಟ್ವೀಟ್ ನಿಂದಾಗಿ ಜಗ್ಗೇಶ್ ಕೂಡ ಕೆರಳಿದ್ದಾರೆ. ಪರಿಣಾಮ, ಜಗ್ಗೇಶ್ ಬಾಯಿಂದ 'ಪಲ್ಲಂಗ' ಹಾಗೂ 'ಪಾರ್ಟಿ' ಮಾತು ಬಂದಿದೆ. ಸಂಪೂರ್ಣ ವರದಿ ಇಲ್ಲಿದೆ. ಓದಿರಿ...

ರಮ್ಯಾ ಮಾಡಿದ ಟ್ವೀಟ್ ಏನು.?

ರಮ್ಯಾ ಮಾಡಿದ ಟ್ವೀಟ್ ಏನು.?

ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣದಲ್ಲಿ ''ರೈತರೇ ನಮ್ಮ ಪ್ರಮುಖ (TOP) ಆದ್ಯತೆ. TOP ಅಂದ್ರೆ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಹೇಳಿಕೆಯನ್ನ ಟೀಕಿಸಲು ಮುಂದಾದ ರಮ್ಯಾ ನೀವು ನಶೆಯಲ್ಲಿ (POT) ಇದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದರು. ಈಗ ಇದೇ ಟ್ವೀಟ್ ಕೋಲಾಹಲಕ್ಕೆ ನಾಂದಿ ಹಾಡಿದೆ.

ಜಗ್ಗೇಶ್ ತಿರುಗೇಟು

ಜಗ್ಗೇಶ್ ತಿರುಗೇಟು

ರಮ್ಯಾ ಮಾಡಿದ ನಶೆ ಟ್ವೀಟ್ ಗೆ ಜಗ್ಗೇಶ್ ತಿರುಗೇಟು ನೀಡಿದ್ದಾರೆ. ''ಸ್ಟಾರ್ ಹೋಟೆಲ್ ನಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿ, ಪ್ರತಿ ಚಿತ್ರದ ಕ್ಯಾಚ್ ಗೆ ಅದೇ ಸ್ಟಾರ್ ಹೋಟೆಲ್ ನಲ್ಲಿ ಪಾರ್ಟಿ, ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್, ಆಮೇಲೆ ಮೆಟ್ಟಿಲು ಏರಲು ಹೆಡ್ ಆಫೀಸ್ ಕ್ಯಾಚ್ ಹಾಕಿದವರಿಗೆ ಮೋದಿ ಆದರೇನು? ಗಾಂಧಿ ಆದರೇನು? ಯಾರಿಗೆ ಬೇಕಾದರೂ ಹಂಗಿಸುತ್ತಾರೆ.! ಕಾರಣ, ಶ್ರಮವಿಲ್ಲದೆ ಪಲ್ಲಂಗ ಏರಿದವರಲ್ಲವೇ.?'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

'ಕಾಡುಪಾಪ' ಅಂತೆ ರಮ್ಯಾ.!

'ಕಾಡುಪಾಪ' ಅಂತೆ ರಮ್ಯಾ.!

''ದೊಡ್ಡವರ ಬಗ್ಗೆ ಮಾತಾಡಬೇಕಾದರೆ, ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಶ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಶೆ ಮಾಡಿ ನಿರ್ಣಯಿಸುತ್ತಾರೆ ಜನ. ವಿಶ್ವದ ಬಲಿಷ್ಟ ರಾಷ್ಟ್ರದ ನಾಯಕರೇ ಮೋದಿ ಅವರನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು.? ಈಕೆಯ ಸಾಧನೆ ಏನು.? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪದಂತೆ ಈಕೆ'' ಎಂದು ರಮ್ಯಾಗೆ ಛೀಮಾರಿ ಹಾಕಿದ್ದಾರೆ ಜಗ್ಗೇಶ್.

ಪಾರ್ಟು ಗಿಟ್ಟಿಸಲು ಪಾರ್ಟಿ ಕೊಡ್ತಿದ್ರಾ ರಮ್ಯಾ.?

ಪಾರ್ಟು ಗಿಟ್ಟಿಸಲು ಪಾರ್ಟಿ ಕೊಡ್ತಿದ್ರಾ ರಮ್ಯಾ.?

ಒಂದು ದಶಕದ ಕಾಲ ಸ್ಯಾಂಡಲ್ ವುಡ್ ಬೆಳ್ಳಿಪರದೆ ಮೇಲೆ 'ಕ್ವೀನ್' ಅಗಿ ಮಿಂಚಿದ ರಮ್ಯಾ, ಪಾರ್ಟು ಗಿಟ್ಟಿಸಿಕೊಳ್ಳಲು ಸ್ಟಾರ್ ಹೋಟೆಲ್ ನಲ್ಲಿ ಪಾರ್ಟಿ ಕೊಡ್ತಿದ್ರಾ.? ಎಂಬ ಅನುಮಾನ ಈಗ ಎಲ್ಲರಲ್ಲೂ ಮೂಡಿದೆ. ಅದು ಜಗ್ಗೇಶ್ ಮಾಡಿರುವ ಟ್ವೀಟ್ ನಿಂದಾಗಿ.!

ರಮ್ಯಾ ಪ್ರತಿಕ್ರಿಯೆ ನೀಡಿಲ್ಲ.!

ರಮ್ಯಾ ಪ್ರತಿಕ್ರಿಯೆ ನೀಡಿಲ್ಲ.!

ಜಗ್ಗೇಶ್ ಮಾಡಿರುವ ಈ ಟ್ವೀಟ್ ಗಳ ಬಗ್ಗೆ ರಮ್ಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Kannada Actor Jaggesh has taken his twitter account to criticize Ramya for her POT comment against PM Narendra Modi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X