Don't Miss!
- News
ಅನಧಿಕೃತ ಕಟ್ಟಡಗಳಿಗೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಗೆ ಹೈಕೋರ್ಟ್ ಸೂಚನೆ
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ಕೆಂಪೇಗೌಡ' ಕೋಮಲ್ ಹಲ್ಲೆ ಪ್ರಕರಣದಲ್ಲಿ ಸುದೀಪ್ ಹೆಸರು: ಜಗ್ಗೇಶ್ ಕೆಂಡಾಮಂಡಲ!
ನಟ ಜಗ್ಗೇಶ್ ಸಹೋದರ ಕೋಮಲ್ ಕುಮಾರ್ ಹಲ್ಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಲ್ಲೇಶ್ವರಂ ಪೊಲೀಸರು ಹಲ್ಲೆ ಮಾಡಿರುವ ವಿಜಿ ಎಂಬುವವನನ್ನು ಬಂದಿಸಿ ವಿಚಾರಣೆ ಮಾಡುತ್ತಿದ್ದಾರೆ.
ಇತ್ತ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಅತ್ತ ಪ್ರಕರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಬಣ್ಣ ಕಟ್ಟುತ್ತಿದ್ದಾರೆ. ಕೋಮಲ್ ಹಲ್ಲೆಯ ಹಿಂದೆ ನಟ ಕಿಚ್ಚ ಸುದೀಪ್ ಇದ್ದಾರೆ ಎನ್ನುವ ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ. ಕಿಡಿಗೇಡಿಗಳು ಮಾಡುತ್ತಿರುವ ಈ ಕೆಲಸಗಳು ನಟ ಜಗ್ಗೇಶ್ ಗಮನಕ್ಕೂ ಬಂದಿದೆ.
ಕೋಮಲ್
ಮೇಲೆ
ಹಲ್ಲೆ
ಮಾಡಿದ
ವ್ಯಕ್ತಿ
ಯಾರು:
ಪೊಲೀಸರು
ಹೇಳಿದ್ದೇನು?
ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ನವರಸ ನಾಯಕ ಜಗ್ಗೇಶ್ ಧ್ವನಿ ಎತ್ತಿದ್ದಾರೆ.

'ಕೆಂಪೇಗೌಡ' ಲಿಂಕ್ ನೀಡಿದ ಕಿಡಿಗೇಡಿಗಳು
ಸುದೀಪ್ ಈ ಹಿಂದೆ 'ಕೆಂಪೇಗೌಡ' ಸಿನಿಮಾವನ್ನು ಮಾಡಿದ್ದರು. ಈಗ ಆ ಸಿನಿಮಾದ ಹೆಸರಿನಲ್ಲಿ ಬಂದ 'ಕೆಂಪೇಗೌಡ 2' ಚಿತ್ರದಲ್ಲಿ ಕೋಮಲ್ ನಟಿಸಿದ್ದಾರೆ. ಶಂಕರ್ ಗೌಡ ಈ ಎರಡು ಚಿತ್ರದ ನಿರ್ಮಾಪಕ. ಸುದೀಪ್ ಮತ್ತು ಶಂಕರ್ ಗೌಡ ಮುನಿಸಿನ ಕಾರಣ 'ಕೆಂಪೇಗೌಡ 2' ಟೈಟಲ್ ಸುದೀಪ್ ಪಾಲಾಗಲಿಲ್ಲ. ಈಗ ಅದೇ ಕೋಪದಿಂದ ಸುದೀಪ್ ಹೀಗೆ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ.

ಟ್ವಿಟ್ಟರ್ ನಲ್ಲಿ ಜಗ್ಗೇಶ್ ಪ್ರತಿಕ್ರಿಯೆ
ಈ ಪ್ರಕರಣಕ್ಕೆ ಸುದೀಪ್ ಹೆಸರು ತರುತ್ತಿರುವವರ ವಿರುದ್ಧ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಗುಡುಗಿದ್ದಾರೆ. ''ವೈಯಕ್ತಿಕ ಅನಿಸಿಕೆ ನಿರ್ಧಾರ ಮಾಡಿ ನನ್ನ ಕಲಾ ಬಂಧು ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ ಕ್ಷಮೆಯಿಲ್ಲಾ. ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ, ಕೆಡಿಸದಿರಿ ಮನಗಳ.'' ಎಂದು ಬರೆದುಕೊಂಡಿದ್ದಾರೆ.
ಹಾಡುಹಗಲೆ
'ಬೀದಿ
ಕಾಳಗ'ಕ್ಕಿಳಿದ
ನಟ
ಕೋಮಲ್

ಸುದೀಪ್ ಕೂಡ ನನ್ನ ಹೆಮ್ಮೆಯ ತಮ್ಮ
ಈ ಘಟನೆಗೂ ಮತ್ತು ನಟ ಸುದೀಪ್ ರಿಗೆ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಅನಗತ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಹೆಸರನ್ನು ತರಬಾರದು ಎಂದು ಜಗ್ಗೇಶ್ ವಿನಂತಿ ಮಾಡಿದ್ದಾರೆ. ''ಸುದೀಪ್ ನನ್ನ ಒಡ ಹುಟ್ಟದಿದ್ದರು, ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು.'' ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರರಂಗ ದಿಂದ ಹಲ್ಲೆ ಆಗಿದ್ಯಾ?
ಈ ಘಟನೆಯ ಬಗ್ಗೆ ಮಾತನಾಡುವ ಸಮಯದಲ್ಲಿ ಜಗ್ಗೇಶ್ ಚಿತ್ರರಂಗದಿಂದ ಈ ಹಲ್ಲೆ ಆಗಿದ್ದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ''ನಮಗೂ ಎಲ್ಲ ರೀತಿಯ ಪಟ್ಟುಗಳು ಗೊತ್ತಿವೆ. ನಾನು ಚಿತ್ರರಂಗವನ್ನು 38 ವರ್ಷಗಳಿಂದ ನೋಡಿದ್ದೇನೆ'' ಎಂದು ಹೇಳಿದ್ದಾರೆ. ಜಗ್ಗೇಶ್ ಮಾತುಗಳನ್ನು ಕೇಳಿದರೆ, ಅವರಿಗೂ ಚಿತ್ರರಂಗದ ಕೆಲವರ ಮೇಲೆ ಅನುಮಾನ ಇರುವುದು ತಿಳಿಯುತ್ತಿದೆ.
ಹಲ್ಲೆ
ಆದ
ಬಗ್ಗೆ
ಅಸಲಿ
ಕಾರಣ
ಬಿಚ್ಚಿಟ್ಟ
ನಟ
ಕೋಮಲ್

ಯಾರ ಮೇಲೆಯೂ ಅನುಮಾನ ಇಲ್ಲ ಎಂದ ಕೋಮಲ್
ಈ ಘಟನೆಯ ಬಗ್ಗೆ ಸ್ವಷ್ಟನೆ ನೀಡಿರುವ ಕೋಮಲ್ "ಕಾರಿನಲ್ಲಿ ಮಗಳನ್ನು ಟ್ಯೂಷನ್ ಗೆ ಬಿಡಲು ಬಂದಿದ್ದೆ. ಕಾರಿನಲ್ಲಿ ಹೋಗುತ್ತಿರುವಾಗ ಹಿಂದೆಯಿಂದ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾರು ಟಚ್ ಮಾಡುತ್ತಲೆ, ಕೆಟ್ಟ ಪದಗಳಿಂದ ಬೈಯುತ್ತ ಬಂದ. ನಂತರ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಹಲ್ಲೆ ಮಾಡಿದ. ಬೇರೆ ಯಾರ ಮೇಲೂ ಅನುಮಾನ ಇಲ್ಲ.'' ಎಂದು ಕೋಮಲ್ ಹೇಳಿದ್ದಾರೆ.

ಹಲ್ಲೆ ಮಾಡಿದ ವ್ಯಕ್ತಿ ಯಾರು?
ಕೋಮಲ್ ಹಲ್ಲೆ ಘಟನೆಯ ಬಗ್ಗೆ ಮಾತನಾಡಿರುವ ಡಿಸಿಪಿ ಶಶಿಕುಮಾರ್ ಹಲ್ಲೆ ಮಾಡಿರುವ ವ್ಯಕ್ತಿ ವಿಜಿ ಎಂದು ತಿಳಿಸಿದ್ದಾರೆ. ''ಈತ ಶ್ರೀರಾಮ್ ಪುರದ ನಿವಾಸಿಯಾಗಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನ ಮೇಲೆ ಸದ್ಯ 307 ಕೇಸ್ ಅನ್ನು ದಾಖಲು ಮಾಡಲಾಗಿದೆ.'' ಎಂದು ಹೇಳಿದ್ದಾರೆ. ಕುಡಿದ ಮತ್ತಿನಲ್ಲಿ ಇದ್ದ ವಿಜಿ ಉದ್ದೇಶಪೂರ್ವಕವಾಗಿಯೇ ಈ ಹಲ್ಲೆ ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ತೋರುತ್ತಿದ್ದು, ತನಿಖೆಯ ಬಳಿಕ ಪೂರ್ಣ ಸತ್ಯ ಬಹಿರಂಗ ಆಗಲಿದೆ.