ಮಂಡ್ಯ ರಮೇಶ್ ಮೇಲಿನ ಆರೋಪದ ಬಗ್ಗೆ ನಟ ಜಗ್ಗೇಶ್ ಬೇಸರ

By Bharath Kumar

ಮೈಸೂರಿನ ಮಸಾಜ್ ಪಾರ್ಲರ್ ನಲ್ಲಿ ತನ್ನ ಮೇಲೆ ಕನ್ನಡ ಖ್ಯಾತ ನಟರಾದ ಮಂಡ್ಯ ರಮೇಶ್ ಮತ್ತು ಸಾಧುಕೋಕಿಲಾ ಇಬ್ಬರು ದೌರ್ಜನ್ಯವೆಸೆಗಿದ್ದಾರೆ ಎಂದು ನೊಂದ ಯುವತಿ ಆರೋಪಿಸಿದ್ದಾಳೆ. ಇದು ಕನ್ನಡ ಚಿತ್ರರಂಗವನ್ನ ಬೆಚ್ಚಿ ಬೀಳಿಸಿದ್ದು, ಇದು ನಿಜವಾ ಅಥವಾ ಬರಿ ಆರೋಪವಾ ಎಂಬ ಅನುಮಾನ ಕಾಡುತ್ತಿದೆ.

ಈ ಪ್ರಕರಣದಲ್ಲಿ ನಟರಿಬ್ಬರ ಹೆಸರು ಅಂಟಿಕೊಂಡಿರುವುದು ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬೇಸರ ತರಿಸಿದೆ. ಯಾವುದೇ ಸಾಕ್ಷಿ, ಆಧಾರವಿಲ್ಲದೇ ಕಲಾವಿದರ ಮೇಲೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಅದು ಅವರ ಗೌರವಕ್ಕೆ ಧಕ್ಕೆ ತರುತ್ತೆ ಎಂದು ಇತರೆ ಕಲಾವಿದರು ಬೇಜಾರು ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯಿಸಿದ್ದು, ಮಂಡ್ಯ ರಮೇಶ್ ಅವರಿಗೆ ಧೈರ್ಯ ತುಂಬಿದ್ದಾರೆ. ಪೊಲೀಸರ ಪ್ರಮಾಣಿಕ ವಿಚಾರಣೆಯಿಂದ ಸತ್ಯ ಹೊರಬರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜಗ್ಗೇಶ್ ಏನಂದ್ರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಮಂಡ್ಯ ರಮೇಶ್ ಸಭ್ಯಸ್ಥ ಮನುಷ್ಯ

ಮಂಡ್ಯ ರಮೇಶ್ ಸಭ್ಯಸ್ಥ ಮನುಷ್ಯ

''Tvಯಲ್ಲಿ ಮಂಡ್ಯ ರಮೇಶ್ ರ ಬಗ್ಗೆ ಅಪಾದನೆ ಧಿಗ್ಭ್ರಾಂತಿಯಾಯಿತು. ನಾನು ಕಂಡಂತೆ ರಮೇಶ್ ಸಭ್ಯಸ್ಥ ಮನುಷ್ಯ. ಪಾಪ ತುಂಬ ಸಂಕಟವಾಯಿತು. ಮಾನ್ಯ ಪೊಲೀಸ್ ಇಲಾಖೆ ಪಾರದರ್ಶಕ ವಿಚಾರಣೆ ಮಾಡಿ ರಮೇಶರ ಗೌರವ ಉಳಿಸಬೇಕಾಗಿ ವಿನಂತಿ. ಒಂದು ದಿನವು ಕೆಟ್ಟ ಪದ ಪ್ರಯೋಗ ಆತನ ಬಾಯಲ್ಲಿ ಬರದ ಸಭ್ಯಸ್ಥ. ಇಂಥವನು ಹೆಣ್ಣನ್ನ ತುಷ್ಠವಾಗಿ ಕಂಡಿದ್ದಾನ?ಸುಳ್ಳು ತಪ್ಪು'' - ಜಗ್ಗೇಶ್, ನಟ

ಪ್ರಮಾಣಿಕ ವಿಚಾರಣೆಯಿಂದ ಸತ್ಯ ಹೊರಬರಬೇಕು

ಪ್ರಮಾಣಿಕ ವಿಚಾರಣೆಯಿಂದ ಸತ್ಯ ಹೊರಬರಬೇಕು

''ಇತ್ತೀಚಿಗೆ ಸುಳ್ಳು ಅಪಾದನೆ. ಕಾನೂನು ದುರ್ಬಳಕೆ ಕೆಲವರಿಂದ ಹೆಚ್ಚಾಗುತ್ತಿದೆ. ನಾನು ಯಾರ ಪರವು ಇಲ್ಲಾ. ಇಂಥ ಸಮಯದಲ್ಲಿ ಕಾನೂನು, ಪೊಲೀಸ್ ಇಲಾಖೆಯ ಪ್ರಾಮಾಣಿಕ ಯತ್ನದಿಂದ ಸತ್ಯ ಹೊರ ಬರಬೇಕು. ಪ್ರಕರಣ ಸುಳ್ಳಾದರೆ ಸಮಯ ಸಾಧಕರ ಮೇಲೆ ಕಠಿಣ ಕ್ರಮ ಅಗತ್ಯ. ಯಾರೆ ಆದರು ತಾರತಮ್ಯ ಬೇಡ. ಕಾನೂನು ಯಾರ ವೈಯಕ್ತಿಕ ಬಳಕೆ ಆಗಬಾರದು. ಇದು ಮರ್ಯಾದೆ ಪ್ರಶ್ನೆ'' - ಜಗ್ಗೇಶ್, ನಟ

ಮಂಡ್ಯ ರಮೇಶ್, ಸಾಧುಕೋಕಿಲ ಮೇಲೆ ಲೈಂಗಿಕ ಶೋಷಣೆ ಆರೋಪ!

ಬರಿ ಬಾಯಿ ಮಾತಿಗೆ ಮಹತ್ವ ಬೇಡ

ಬರಿ ಬಾಯಿ ಮಾತಿಗೆ ಮಹತ್ವ ಬೇಡ

''ಆಧುನಿಕ ಅವಿಷ್ಕಾರ cctv ಸುತ್ತಮುತ್ತ ಹಾಗೂ ಪಾರ್ಲರ್ ನಲ್ಲಿ ಇರುವುದು ಬಳಸಿ ತೀಕ್ಷ್ಣ ವಿಚಾರಣೆ ಮಾಡಿದರೆ ಭವಿಷ್ಯ ರಮೇಶರ ಮೇಲಿನ ಆಪಾದನೆಯಿಂದ ನಿವೃತ್ತಿ ಆಗಬಹುದು ಎಂದು ಆಶಾಭಾವನೆ. ಬರಿ ಬಾಯಿ ಮಾತಿನ ಅಪಾದನೆಗೆ ಮಹತ್ವ ಬೇಡ. ಆಗ ಬಹುತೇಕರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಧೈರ್ಯದಿಂದಿರಿ ರಮೇಶ್ ದೇವರಿದ್ದಾರೆ. ಸತ್ಯ ಹೊರ ಬರುತ್ತೆ'' - ಜಗ್ಗೇಶ್, ನಟ

ಆರೋಪ ತಳ್ಳಿ ಹಾಕಿದ ಮಂಡ್ಯ ರಮೇಶ್

ಆರೋಪ ತಳ್ಳಿ ಹಾಕಿದ ಮಂಡ್ಯ ರಮೇಶ್

''ನನಗೆ ಮತ್ತು ಈ ಘಟನೆಗೆ ಸಂಬಂಧ ಇಲ್ಲ. ನನ್ನ ಹೆಸರು ಈ ಪ್ರಕರಣಕ್ಕೆ ಯಾಕೆ ಕೇಳಿ ಬಂದಿದೆ ಎಂಬುದು ನನಗೆ ತಿಳಿದಿಲ್ಲ. ಒಬ್ಬರು ಯಾರ ಮೇಲೆ ಬೇಕಾದರು ಈ ರೀತಿ ಆರೋಪ ಮಾಡಬಹದು ಅಂದರೆ ಹೇಗೆ. ಆ ಹುಡುಗಿ ಯಾಕೆ ನನ್ನ ಹೆಸರು ತೆಗೆದುಕೊಂಡರು ಗೊತ್ತಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಪೂರವೇ ಇಲ್ಲ. ನನಗೆ ಮಸಾಜ್ ಮಾಡಿಸಿಕೊಳ್ಳುವ ಅಭ್ಯಾಸವೇ ನನಗೆ ಇಲ್ಲ'' - ಮಂಡ್ಯ ರಮೇಶ್, ನಟ

ಪಾರ್ಲರ್ ಉದ್ಘಾಟನೆ ಮಾಡಿದ್ದು ನಾನೇ, ಆದ್ರೆ....

ಪಾರ್ಲರ್ ಉದ್ಘಾಟನೆ ಮಾಡಿದ್ದು ನಾನೇ, ಆದ್ರೆ....

''ಆ ಮಸಾಜ್ ಸೆಂಟರ್ ಓಪನಿಂಗ್ ನಾನೇ ಮಾಡಿದ್ದೆ. ಅದರ ಮಾಲಿಕ ನನಗೆ ಗೊತ್ತು. ಆದರೆ ಈ ರೀತಿ ಚಟುವಟಿಕೆ ಅಲ್ಲಿ ನಡೆಯುತ್ತದೆ ಅಂತ ನನಗೆ ತಿಳಿದಿರಲಿಲ್ಲ. ನಾನು ಒಂದು ಬಾರಿ ಮಾತ್ರ ಅಲ್ಲಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬಂದಿದೆ. ನನಗೆ ಯಾರ ಮೇಲೆಯೂ ಅನುಮಾನ ಇಲ್ಲ. ಆ ಹುಡುಗಿ ಹೇಳಿರುವ ಆಪಾದನೆ ಸುಳ್ಳು. ಅದರ ಮಾಲಿಕ ರಾಜೇಶ್ ಮತ್ತು ಈ ಹುಡುಗಿಯ ಜಗಳದಲ್ಲಿ ನನ್ನ ಹೆಸರನ್ನು ಕೇಳಿರಬಹುದು. ಇದಕ್ಕೆ ನ್ಯಾಯಾಲಯ ಉತ್ತರ ಹೇಳಬೇಕು'' - - ಮಂಡ್ಯ ರಮೇಶ್, ನಟ

More from Filmibeat

English summary
Kannada actor jaggesh react about mandya ramesh and sadhu kokila controversy. Girl who was working in spa at Mysuru, alleged about sexual exploitation against actors Kannada film actors Mandya Ramesh and Sadhu Kokila.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X