'ಪ್ರೀಮಿಯರ್ ಪದ್ಮಿನಿ' ಕಥೆ ಕದ್ದ ಆರೋಪದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ

ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಿತ್ತು. ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಳ್ಳೆಯ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ಯಶಸ್ಸು ಆಯ್ತು ಎಂದು ಸಂಭ್ರಮಿಸುತ್ತಿರುವಾಗಲೇ ಚಿತ್ರದ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಚಿತ್ರದಲ್ಲಿ ಬರುವ ನಂಜುಂಡಿ ಪಾತ್ರವನ್ನ ಬರಹಗಾರ ವಸುಧೇಂದ್ರ ಬರೆದಿರುವ ವರ್ಣಮಯ ಎಂಬ ಪುಸ್ತುಕದಲ್ಲಿರುವ ನಂಜುಂಡಿ ಎಂಬ ಪ್ರಬಂಧ ಪಾತ್ರವಾಗಿದೆಯಂತೆ. ಈ ಪಾತ್ರವನ್ನ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.

ಈ ಬಗ್ಗೆ ಅನುಮತಿಯೂ ಪಡೆದಿಲ್ಲ, ಕ್ರೆಡಿಟ್ ಕೊಡಲಿಲ್ಲ ಎಂಬ ಆರೋಪ ಮಾಡಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು ನಿರಾಕರಿಸಿದ್ದು, ಸ್ಫೂರ್ತಿಯಾಗಿ ಎರಡ್ಮೂರು ದೃಶ್ಯ ಬಳಸಿಬರಹುದು ಅಷ್ಟೇ. ಕೃತಿಚೌರ್ಯ ಆರೋಪ ಮಾಡುವುದು ಸರಿಯಲ್ಲ ಎಂದಿದ್ದರು.

Jaggesh react about Premier Padmini story controversy

ಈ ಬಗ್ಗೆ ನಟ ಜಗ್ಗೇಶ್ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು. ಆದ್ರೆ, ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ಏನೇನೂ ಮಾತನಾಡಿರಲಿಲ್ಲ. ಇದೀಗ, ಅಭಿಮಾನಿಯೊಬ್ಬರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಜಗ್ಗಣ್ಣ ಪರೋಕ್ಷವಾಗಿ ಕೃತಿಚೌರ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

''ಗೆಲುವಿಗೆ ನೂರಾರು ಪಿತಾಮಹರು..!
ಸೋಲು ಅನಾಥ ಕೂಸು..!
ಇದ್ದಾಗ ನೂರಾರು ನೆಂಟರು.!
ಇಲ್ಲದಾಗ ಶಟ್ಟರ ಅಂಗಡಿ ಬಾಗಿಲು ಬಂದ್.!
ಬದುಕು ಒಂದು ಯುದ್ಧ ಭೂಮಿ
ಯುದ್ಧ ಮಾಡಿಗೆಲ್ಲು.!
ಗೆದ್ದರೆ ಹೂವಿನ ಹಾರ..!
ಬಿದ್ದರೆ ಬೆನ್ನಮೇಲೆ ಅಪಮಾನದ ಭಾರ..!
ನಗುತ ನಗಿಸುತ್ತ ಎಲ್ಲಾ ನೋಡಿ ಮುಗುಳು
ನಗೆ ಬೀರಿ ಬದುಕಬೇಕು..!
ಅದೆ ಶ್ರೇಷ್ಟ ಬದುಕು..!'' ಎಂದಿದ್ದಾರೆ.

ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್, ಮಧುಬಾಲ, ಸುಧಾರಾಣಿ, ಹಿತಾ ಚಂದ್ರಶೇಖರ್, ಪ್ರಮೋದ್ ಪಂಜು, ವಿವೇಕ್ ಸಿಂಹ, ದತ್ತಣ್ಣ ಸೇರಿದಂತೆ ಹಲವರು ನಟಿಸಿದ್ದರು.

More from Filmibeat

English summary
Kannada actor Jaggesh has taken his twitter account to react about Premier Padmini story controversy. Writer Vasudhendra Chanda accused for stealing story to 'Premier Padmini' movie from his prabanda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X