'ಕಂಡೋರ ಕಾಲು ಎಳೆದು ಮೇಲೆ ಬರಬೇಕು ಅನ್ನುವವರು ಕಾಲು ಕೆಳಗೆ ಇರುತ್ತಾರೆ'

ಹಿರಿಯ ನಟ ಜಗ್ಗೇಶ್ ಅವರು ದರ್ಶನ್ ಹುಡುಗರ ಕುರಿತು ಹೀಯಾಳಿಸಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಆಡಿಯೋ ಕೇಳಿದ ಬಳಿಕ ಕೆಲವು ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅವರ ವಿರುದ್ಧ ಕೆಂಡಕಾರಿದರು. ಇನ್ನು ಕೆಲವು ಅಭಿಮಾನಿಗಳು ಜಗ್ಗೇಶ್ ಅವರ ಪರವಾಗಿಯೇ ನಿಂತರು.

Recommended Video

ಮನೆಬಾಗಿಲಿಗೆ ಬಂದು ಅವಳೇ ಉತ್ತರಿಸುತ್ತಾಳೆ ಎಂದ ಜಗ್ಗೇಶ್ | Filmibeat Kannada

ದರ್ಶನ್ ಮತ್ತು ಜಗ್ಗೇಶ್ ಅವರ ನಡುವಿನ ಬಾಂಧವ್ಯ, ಸ್ನೇಹವನ್ನು ಸಹಿಸಲಾಗದವರು ಇಂತಹ ಅಪಪ್ರಚಾರ ಮಾಡ್ತಿದ್ದಾರೆ ಎಂದು ನವರಸ ನಾಯಕನಿಗೆ ಧೈರ್ಯ ತುಂಬಿದರು. ಈ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಜಗ್ಗೇಶ್ ''ಪ್ರಚಾರಕ್ಕಾಗಿ ಈ ಚಿಕ್ಕ ಹುಡುಗರ ಆಟ ಇದು'' ಎಂದು ಚಾಟಿ ಬೀಸಿದ್ದರು. ಈ ಬೆಳವಣಿಗೆ ಕುರಿತು ಜಗ್ಗೇಶ್ ತೀವ್ರ ಅಸಮಾಧಾನಗೊಂಡಿದ್ದಾರೆ. ಮುಂದೆ ಓದಿ...

ಇನ್ಮುಂದೆ ಯಾರ್ ಹತ್ರಾನು ಮಾತಾಡಲ್ಲ

ಇನ್ಮುಂದೆ ಯಾರ್ ಹತ್ರಾನು ಮಾತಾಡಲ್ಲ

''0.1% ಜನರ ಬಳಿ ಮಾತಾಡುತ್ತಿದ್ದೆ. ಇನ್ನುಮುಂದೆ ಅದು ಬಂದ್! ಪ್ರೀತಿಸಲು ಜನರಿದ್ದಾರೆ, ಕೆಲಸ ಮಾಡಲು ಉಧ್ಯಮವಿದೆ, 4 ತಲೆಮಾರು ತಿನ್ನಲು ಅನ್ನವಿದೆ, "ಕಂಡೋರ ಕಾಲು ಎಳೆದು ಮೇಲೆ ಬರಬೇಕು ಅನ್ನುವವರು ಕಾಲು ಕೆಳಗೆ ಇರುತ್ತಾರೆ ವಿನಹ ಸಣ್ಣ ಸಾಧನೆಯು ಮಾಡಲಾಗದು"

ನಮ್ಮ ಮನಸ್ಸಿನಂತೆ ನಮ್ಮ ಜೀವನ! ಯಧ್ಭಾವತಧ್ಭವತಿ!'' ಎಂದು ಅಭಿಮಾನಿಯೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ತಾಯಿ ನೋಡಿಕೊಳ್ಳುತ್ತಾಳೆ....

ತಾಯಿ ನೋಡಿಕೊಳ್ಳುತ್ತಾಳೆ....

''ನೀವು ಹೇಳಿದ ದಕ್ಷಿಣ ಕಾಳಿಯ ಮೂಲಮಂತ್ರದಿಂದ ಆರಾಧಿಸಿ ದಿನ ಆರಂಭಿಸುವವ ನಾನು...ನನಗೆ ಕೇಡು ಬಯಸಿದವರ ಮನೆಬಾಗಿಲಲ್ಲಿ ನಿಂತು ಉತ್ತರಿಸುತ್ತಾಳೆ ನನ್ನ ತಾಯಿ!. ಅವಳಿರಬೇಕಾದರೆ ಅಂಜಿಕೆಯ ಭಯವೇಕೆ ಸಹೋದರ!'' ಎಂದು ಬೇಸರ ಹೊರಹಾಕಿದ್ದಾರೆ.

ಚಿತ್ರ ಪ್ರಚಾರಕ್ಕೆ ಮಾಡುವ ಹುನ್ನಾರ

ಚಿತ್ರ ಪ್ರಚಾರಕ್ಕೆ ಮಾಡುವ ಹುನ್ನಾರ

''ಚಿತ್ರ ಪ್ರಚಾರಕ್ಕೆ fakenews spread ಮಾಡುವ ಹುನ್ನಾರ! ಒಬ್ಬ ಚಿಕ್ಕಹುಡುಗನದು ಈ ಆಟ!

ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗು ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗಗೆಲ್ಲಿ ನನ್ನ ವಿನಂತಿ!'' ಎಂದು ಆಡಿಯೋ ಬಗ್ಗೆ ನಿನ್ನೆ ಸ್ಪಷ್ಟನೆ ನೀಡಿದ್ದರು.

ದರ್ಶನ್ ಹುಡುಗರ ಬಗ್ಗೆ ಜಗ್ಗೇಶ್ ಏನ್ ಹೇಳಿದ್ದರು?

ದರ್ಶನ್ ಹುಡುಗರ ಬಗ್ಗೆ ಜಗ್ಗೇಶ್ ಏನ್ ಹೇಳಿದ್ದರು?

ಆಡಿಯೋದಲ್ಲಿ ನಿರ್ಮಾಪಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆ ಕೊಟ್ಟಿರುವ ಜಗ್ಗೇಶ್, ಮಾತಿನ ಮಧ್ಯೆ 'ದರ್ಶನ್ ಹುಡುಗರ ಥರಾ ತಲೆ ಮಾಂಸ ಕಳಿಸಿ, ನೂರು ಕುರಿ ಕಳಿಸಿ ಅನ್ನೋರು ನನ್ನ ಬಳಿ ಇಲ್ಲ'' ಎಂದಿದ್ದರು.

More from Filmibeat

English summary
Audio Clip Controversy: Kannada actor Jaggesh React To Fans On Audio Clip About Darshan Followers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X