ಸುಮಲತಾ ಅಂಬರೀಶ್ ಸ್ಪರ್ಧೆ ಬಗ್ಗೆ ಜಗ್ಗೇಶ್ ಹೇಳಿದ್ದಿಷ್ಟು
Recommended Video

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧೆ ಮಾಡ್ತಿದ್ದಾರೆ. ಈಗ ಸುಮಲತಾ ಅವರ ಮುಂದೆ ಎರಡು ಆಯ್ಕೆಯಿದ್ದು ಬಿಜೆಪಿ ಅಭ್ಯರ್ಥಿಯಾಗಿ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಬೇಕಿದೆ.
ಸುಮಲತಾ ಅವರು ತಮ್ಮ ನಿರ್ಧಾರವನ್ನ ಮಾರ್ಚ್ 18 ರಂದು ಅಧಿಕೃತವಾಗಿ ಘೋಷಿಸಲಿದ್ದಾರೆ. ಈ ನಡುವೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಹಾಗೂ ಮಾಜಿ ಶಾಸಕ ಜಗ್ಗೇಶ್, ಸುಮಲತಾ ಬಗ್ಗೆ ಮಾತನಾಡಿದ್ದಾರೆ.
''ರಾಜಕೀಯ ಹೊರತುಪಡಿಸಿ ನನ್ನ ಮತ್ತು ಅಂಬರೀಶ್ ಅವರದ್ದು 30 ವರ್ಷದ ಸ್ನೇಹ. ನಾವು ಯಾವತ್ತು ಅವರಿಗೆ ಒಳ್ಳೆಯದನ್ನೇ ಬಯಸುತ್ತೇವೆ. ಸುಮಲತಾ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ'' ಎಂದಿದ್ದಾರೆ.

''ನನ್ನ ಅಂತರಾತ್ಮ ಹೇಳುತ್ತಿದೆ, ಅಂಬರೀಶ್ ಅವರು ಮಾಡಿದ ಸಾಧನೆ ಮತ್ತು ಜನರ ಪ್ರೀತಿ ನಿಜವಾಗಲೂ ಸುಮಲತಾ ಅವರ ಕೈ ಹಿಡಿಯುತ್ತೆ'' ಎಂದು ಜಗ್ಗೇಶ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಲತಾ ಅವರ ಪರವಾಗಿ ದರ್ಶನ್, ಯಶ್ ಪ್ರಚಾರ ಮಾಡುವ ಸಾಧ್ಯತೆ ಇದ್ದು, ಚಿತ್ರರಂಗದಿಂದ ಇನ್ನು ಕೆಲವರು ಸುಮಲತಾ ಅವರ ಪರವಾಗಿ ಮಂಡ್ಯ ಅಖಾಡಕ್ಕೆ ಧುಮುಕಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











