'ತನ್ನ ಶ್ರಮವನ್ನ ಗಾಳಿಗೆ ತೂರಿಬಿಟ್ಟ ದುನಿಯಾ ವಿಜಿ' - ಜಗ್ಗೇಶ್ ಬೇಸರ

ದುನಿಯಾ ವಿಜಯ್ ಓರ್ವ ಕಲಾವಿದ. ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಸ್ಟಾರ್ ನಟ. ಈ ನಟನನ್ನ ಇಷ್ಟ ಪಡುವ ಹಾಗೂ ಫಾಲೋ ಮಾಡುವ ಸಾವಿರಾರು ಮಂದಿ ಅಭಿಮಾನಿಗಳು ಇದ್ದಾರೆ. ಇಂತಹ ಅಭಿಮಾನಿಗಳು ವಿಜಿ ಅವರ ಮೇಲೆ ಅನುಮಾನ ಪಡುವಂತಹ ಘಟನೆ ನಡೆದುಹೋಗಿದೆ.

ಹೌದು, ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡ ಎಂಬುವವರ ಮೇಲೆ ವಿಜಿ ಮತ್ತು ಸ್ನೇಹಿತರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪಾನಿಪೂರಿ ಕಿಟ್ಟಿ ಹೈಗ್ರೌಂಡ್ಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನ ಅನ್ವಯ ಪೊಲೀಸರು ದುನಿಯಾ ವಿಜಯ್ ಮತ್ತು ಸ್ನೇಹಿತರನ್ನ ಬಂಧಿಸಿದ್ದಾರೆ. ಈ ಘಟನೆ ಈಗ ವಿಜಿ ಅವರ ಅಭಿಮಾನಿ ಬಳಗದಲ್ಲಿ ಹಾಗೂ ಚಿತ್ರರಂಗದಲ್ಲಿ ಭಾರಿ ಬೇಸರಕ್ಕೆ ಕಾರಣವಾಗಿದೆ. ಅದರಲ್ಲೂ ಹಿರಿಯ ನಟ ಜಗ್ಗೇಶ್ ಅವರು ಈ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಈ ಪ್ರಕರಣದ ಬಗ್ಗೆ ಏನಂದ್ರು.? ಮುಂದೆ ಓದಿ.....

ತನ್ನ ಶ್ರಮವನ್ನ ಗಾಳಿಗೆ ತೂರಿಬಿಟ್ಟ

ತನ್ನ ಶ್ರಮವನ್ನ ಗಾಳಿಗೆ ತೂರಿಬಿಟ್ಟ

''ಕ್ರೂರನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಿಂದ ರಾಮಾಯಣ ರಚಿಸಿ ಮಹನೀಯನಾದ..ಶಾರದೆಯ ಒಲುಮೆಯಿಂದ ಸಾಮಾನ್ಯ ಅಸಮಾನ್ಯನಾದ #ದುನಿಯಾವಿಜಿ ಇಂದಿನ ಘಟನೆಯಿಂದ ತನ್ನ ಶ್ರಮವನ್ನು ಗಾಳಿಗೆ ತೂರಿಬಿಟ್ಟ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕಲಾವಿದ ಮಾರ್ಗದರ್ಶಕನಾಗಬೇಕು

ಕಲಾವಿದ ಮಾರ್ಗದರ್ಶಕನಾಗಬೇಕು

''ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು! ಇಲ್ಲದಿದ್ದರೆ ನಮ್ಮ ಬೆವರಿಗು ಜನರ ಚಪ್ಪಾಳೆಗು ಅಪಮಾನ ಮಾಡಿದಂತೆ. ನಶ್ವರ ಜಗಕ್ಕೆ ಗುಣವೆ ಶ್ರೀಮಂತಿಕೆ.'' ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್ ಭವನದಲ್ಲಿ ಘಟನೆ

ಅಂಬೇಡ್ಕರ್ ಭವನದಲ್ಲಿ ಘಟನೆ

ಬೆಂಗಳೂರಿನ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್​ ಕಾಂಪಿಟೇಷನ್​ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ತಂಡ ಹಾಗೂ ​ಟ್ರೈನರ್​ ಮಾರುತಿ ಗೌಡ ನಡುವೆ ಜಗಳ ಶುರುವಾಗಿದೆ. ಬಳಿಕ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್​ ಹಾಗೂ ಮಣಿಪ್ರಸಾದ್​ ಕಿಡ್ನಾಪ್​ ಮಾಡಿದ್ದಾರೆ. ಕಾರಿನಲ್ಲಿ ಕರೆದೊಯ್ದಿದ್ದು, ಹಲ್ಲೆ ಮಾಡಿದ್ದಾರೆ ಎಂದು ಪಾನಿಪುರಿ ಕಿಟ್ಟಿ ಆರೋಪ ಮಾಡಿದ್ದರು.

ವಿಜಿಗೂ ಕಿಟ್ಟಿಗೂ ಏನ್ ಸಂಬಂಧ

ವಿಜಿಗೂ ಕಿಟ್ಟಿಗೂ ಏನ್ ಸಂಬಂಧ

ಅಂದ್ಹಾಗೆ, ನಟ ದುನಿಯಾ ವಿಜಯ್ ಮತ್ತು ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಇಬ್ಬರು ಸ್ನೇಹಿತರು. ಪಾನಿಪೂರಿ ಕಿಟ್ಟಿ ಈ ಹಿಂದೆ ವಿಜಿಗೆ ಪರ್ಸನಲ್ ಟ್ರೈನರ್ ಆಗಿದ್ದರು. ಆದ್ರೆ, ಕೆಲ ತಿಂಗಳುಗಳಿಂದ ಮತ್ತು ವಿಜಿ ದೂರವಾಗಿದ್ದರು. ಪ್ರಸಾದ್ ಎಂಬುವರು ವಿಜಿ ಹೊಸ ಟ್ರೈನರ್ ಆಗಿದ್ದರು. ಆದ್ರೀಗ, ಪ್ರಸಾದ್ ಎಂಬುವರ ಕುಮ್ಮಕ್ಕಿನಿಂದಲೇ ಕಿಟ್ಟಿ ಅವರ ಅಣ್ಣನ ಮಗನ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

More from Filmibeat

English summary
Kannada actor Duniya Vijay was arrested by Bengaluru police early on Sunday morning for allegedly assaulting and kidnapping a gym trainer. now, jaggesh has tweeted about duniya Vijay incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X