ಜಾತಿ ವಿಷ ಬೀಜ ಬಿತ್ತುವವರಿಗೆ ಜಗ್ಗೇಶ್ ಎಚ್ಚರಿಕೆ
Recommended Video

ಕಲೆ ಎನ್ನುವುದು ಜಾತಿ ಧರ್ಮಗಳನ್ನು ಮೀರಿದ್ದು. ಆದರೆ, ಕೆಲವು ದಿನಗಳಿಂದ 'ಜಾತಿ' ಕನ್ನಡ ಚಿತ್ರರಂಗದಲ್ಲಿ ಚರ್ಚೆಯ ವಸ್ತುವಾಗಿದೆ.
ನಟ ಸುದೀಪ್ ಹಾಗೂ ದರ್ಶನ್ ಇಬ್ಬರೂ ಮದಕರಿ ನಾಯಕರ ಬಗ್ಗೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇವುಗಳಲ್ಲಿ ದರ್ಶನ್ ಮದಕರಿ ನಾಯಕರ ಪಾತ್ರ ಮಾಡಬಾರದು ಎಂದು ಕೆಲವು ಜಾತಿವಾದಿಗಳು ಒತ್ತಾಯ ಮಾಡುತ್ತಿದ್ದಾರೆ.

ಈ ಬಗ್ಗೆ ಇದೀಗ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಶಾರದೆಯ ಕಲಾ ದೇಗುಲ ಚಿತ್ರರಂಗ, ಜಾತಿ ರಹಿತ ಪುಣ್ಯ ಧಾಮ! ಕಲೆಗೆ ಜಾತಿಯಿಲ್ಲ! ವಿಶ್ವದಲ್ಲೇ ಜಾತಿ ಇಲ್ಲದೆ ಒಂದೇ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷ ಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತ ಬುದ್ಧಿ! ಎಚ್ಚರವಾಗಿರಿ ಕಲಾ ಬಂಧುಗಳೆ..!!'' ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ ನಿರ್ಮಾಪಕ ಮುನಿರತ್ನ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ''ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ. ಈಗ ಸಿನಿಮಾಗೆ ಜಾತಿ ತರುವುದು ಬೇಡ. ಕಲೆಯನ್ನ ಕಲೆಯಾಗಿ ನೋಡಬೇಕು. ಕಲೆಗೆ ಜಾತಿ ಇಲ್ಲ. ಜಾತಿಯನ್ನು ಬಿಂಬಿಸೋದು ತಪ್ಪು.'' ಎಂದು ಜಾತಿವಾದಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.


Click it and Unblock the Notifications











