Don't Miss!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾತಿ ವಿಷ ಬೀಜ ಬಿತ್ತುವವರಿಗೆ ಜಗ್ಗೇಶ್ ಎಚ್ಚರಿಕೆ
Recommended Video
ಕಲೆ ಎನ್ನುವುದು ಜಾತಿ ಧರ್ಮಗಳನ್ನು ಮೀರಿದ್ದು. ಆದರೆ, ಕೆಲವು ದಿನಗಳಿಂದ 'ಜಾತಿ' ಕನ್ನಡ ಚಿತ್ರರಂಗದಲ್ಲಿ ಚರ್ಚೆಯ ವಸ್ತುವಾಗಿದೆ.
ನಟ ಸುದೀಪ್ ಹಾಗೂ ದರ್ಶನ್ ಇಬ್ಬರೂ ಮದಕರಿ ನಾಯಕರ ಬಗ್ಗೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇವುಗಳಲ್ಲಿ ದರ್ಶನ್ ಮದಕರಿ ನಾಯಕರ ಪಾತ್ರ ಮಾಡಬಾರದು ಎಂದು ಕೆಲವು ಜಾತಿವಾದಿಗಳು ಒತ್ತಾಯ ಮಾಡುತ್ತಿದ್ದಾರೆ.
'ಮದಕರಿ' ವಿವಾದದ ಬಗ್ಗೆ ಮನಿಸಿಕೊಂಡೆ ಮಾತನಾಡಿದ ಮುನಿರತ್ನ!
ಈ ಬಗ್ಗೆ ಇದೀಗ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಶಾರದೆಯ ಕಲಾ ದೇಗುಲ ಚಿತ್ರರಂಗ, ಜಾತಿ ರಹಿತ ಪುಣ್ಯ ಧಾಮ! ಕಲೆಗೆ ಜಾತಿಯಿಲ್ಲ! ವಿಶ್ವದಲ್ಲೇ ಜಾತಿ ಇಲ್ಲದೆ ಒಂದೇ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷ ಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತ ಬುದ್ಧಿ! ಎಚ್ಚರವಾಗಿರಿ ಕಲಾ ಬಂಧುಗಳೆ..!!'' ಎಂದು ಟ್ವೀಟ್ ಮಾಡಿದ್ದಾರೆ.
ಶಾರದೆಯ ಕಲಾದೇಗುಲ ಚಿತ್ರರಂಗ ಜಾತಿ ರಹಿತ ಪುಣ್ಯಧಾಮ!
— ನವರಸನಾಯಕ ಜಗ್ಗೇಶ್ (@Jaggesh2) October 9, 2018
ಕಲೆಗೆ ಜಾತಿಯಿಲ್ಲ!ವಿಶ್ವದಲ್ಲೆ ಜಾತಿಇಲ್ಲದೆ ಒಂದೆತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆಮಡಿಲು!ಇಂಥಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ!ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ!
ವಿನಾಶಕಾಲಕ್ಕೆ ವಿಪರೀತಬುದ್ಧಿ!
ಎಚ್ಚರವಾಗಿರಿ ಕಲಾಬಂಧುಗಳೆ..!! pic.twitter.com/cYjlEvsksD
ದರ್ಶನ್-ಸುದೀಪ್ ಗೂ ಮುಂಚೆ 'ಮದಕರಿ ನಾಯಕ'ನಾಗಿ ಮಿಂಚಿದ್ದ ದಿಗ್ಗಜರು
ಜೊತೆಗೆ ನಿರ್ಮಾಪಕ ಮುನಿರತ್ನ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ''ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ. ಈಗ ಸಿನಿಮಾಗೆ ಜಾತಿ ತರುವುದು ಬೇಡ. ಕಲೆಯನ್ನ ಕಲೆಯಾಗಿ ನೋಡಬೇಕು. ಕಲೆಗೆ ಜಾತಿ ಇಲ್ಲ. ಜಾತಿಯನ್ನು ಬಿಂಬಿಸೋದು ತಪ್ಪು.'' ಎಂದು ಜಾತಿವಾದಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.