ಶ್ರುತಿ ಹರಿಹರನ್ ಮಾಡಿದ್ದು ತಪ್ಪು ಎಂದ ಜಗ್ಗೇಶ್
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪಕ್ಕೆ ಸಂಬಂಧಪಟ್ಟಂತೆ ನವರಸ ನಾಯಕ ಜಗ್ಗೇಶ್ ಮಾತನಾಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಜಗ್ಗೇಶ್ ಅವರು ಶ್ರುತಿ ಮತ್ತು ಅರ್ಜುನ್ ನಡುವಿನ ಮೀಟೂ ಫೈಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ವಿಷ್ಯದಲ್ಲಿ ಶ್ರುತಿ ತಪ್ಪು ಮಾಡಿದ್ದಾರೆ ಎಂದಿದ್ದಾರೆ.
''ಅರ್ಜುನ್ ಸರ್ಜಾ ಮಹಾನ್ ಸಾದ್ವಿ, ಸುಸಂಸ್ಕೃತ ವ್ಯಕ್ತಿ. ಏಕವಚನದಲ್ಲಿ ಮಾತನಾಡುವ ವ್ಯಕ್ತಿ ಅವರಲ್ಲ. ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್ ಬಿಟ್ರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್ ಮ್ಯಾನ್'' ಎಂದು ಅಭಿಪ್ರಾಯ ಪಟ್ಟರು.

'ಶ್ರುತಿ ಹರಿಹರನ್ ತಕ್ಷಣ ಪ್ರತಿಕ್ರಿಯೆ ಮಾಡಬೇಕಿತ್ತು. ಅರ್ಜುನ್ ಸರ್ಜಾ ವಿಷ್ಯದಲ್ಲಿ ಶ್ರುತಿ ತಪ್ಪು ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ 35 ವರ್ಷದ ಸಿನಿಮಾ ಕೃಷಿಯನ್ನ ಶ್ರುತಿ ಒಂದೇ ಒಂದು ದಿನದಲ್ಲಿ ಹಾಳುಮಾಡಿದ್ದಾರೆ. ಇದು ಅರ್ಜುನ್ ಅವರನ್ನ ಕೊಲೆ ಮಾಡಿದ ಹಾಗೆ'' ಎಂದು ಹೇಳಿದ್ದಾರೆ.
ಈ ಮೂಲಕ ಅರ್ಜುನ್ ಸರ್ಜಾ ಪರವಾಗಿ ಜಗ್ಗೇಶ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಿರಿಯ ನಟಿಯರಾದ ಬಿ ಸರೋಜಾದೇವಿ, ಸುಧಾರಾಣಿ, ತಾರ, ಖುಷ್ಬೂ ಹಾಗೂ ನಟಿ ಹರ್ಷಿಕಾ ಪೂಣಚ್ಛ ಕೂಡ ಸರ್ಜಾ ಪರ ಬೆಂಬಲ ಸೂಚಿಸಿದ್ದಾರೆ.


Click it and Unblock the Notifications











