twitter
    For Quick Alerts
    ALLOW NOTIFICATIONS  
    For Daily Alerts

    'ಬಂಗಾರದ ಮನುಷ್ಯ' ಸಿನಿಮಾದ ನೋಡಿದ ಕಥೆ ಹೇಳಿದ ಜಗ್ಗೇಶ್

    |

    'ಬಂಗಾರದ ಮನುಷ್ಯ' ಸಿನಿಮಾ ನೋಡಿ ಅದೆಷ್ಟೋ ಯುವಕರು ನಗರ ಬಿಟ್ಟು ಹಳ್ಳಿಗೆ ಹಿಂತಿರುಗಿ ಕೃಷಿಯಲ್ಲಿ ತೊಡಗಿಕೊಂಡರು ಎಂಬ ವಿಷಯವನ್ನು ಹಿರಿಯರು ಈಗಲೂ ಉದಾಹರಣೆಯಾಗಿ ಕೊಡ್ತಾರೆ. ಸಿನಿಮಾ ಜನರ ಬದುಕನ್ನು ಬದಲಿಸಬಲ್ಲದು ಎನ್ನುವುದಕ್ಕೆ ಬಂಗಾರದ ಮನುಷ್ಯ ಸಿನಿಮಾ ಉತ್ತಮ ನಿದರ್ಶನ.

    ಕನ್ನಡ ಚಿತ್ರರಂಗದಲ್ಲಿ ಬಂಗಾರದ ಮನುಷ್ಯ ಸಿನಿಮಾಗೆ ವಿಶೇಷ ಸ್ಥಾನವಿದೆ. ರೈತ, ಕೃಷಿ, ಮಣ್ಣಿನ ಮಹತ್ವ ಸಾರಿದ ಯಶಸ್ವಿ ಸಿನಿಮಾ. ಡಾ ರಾಜ್ ಕುಮಾರ್ ನಾಯಕರಾಗಿ ನಟಿಸಿದ್ದ ಅದ್ಭುತ ಚಿತ್ರ. ನಿರ್ದೇಶಕ ಸಿದ್ದಲಿಂಗಯ್ಯ ಅವರ ಸಾರಥ್ಯದಲ್ಲಿ ಮೂಡಿ ಬಂದಿದ್ದ ಈ ಚಿತ್ರ ಭಾರತೀಯ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಅಂದರೆ ತಪ್ಪಾಗಲಾರದು.

    'ಯಾರು ಇಲ್ಲದಿದ್ದಾಗ ಅಣ್ಣನಂತೆ ಭುಜಕೊಟ್ಟರು, ಕರುಣಾಮಯಿ': ಪ್ರಭಣ್ಣನ ಸ್ಮರಿಸಿದ ಜಗ್ಗೇಶ್'ಯಾರು ಇಲ್ಲದಿದ್ದಾಗ ಅಣ್ಣನಂತೆ ಭುಜಕೊಟ್ಟರು, ಕರುಣಾಮಯಿ': ಪ್ರಭಣ್ಣನ ಸ್ಮರಿಸಿದ ಜಗ್ಗೇಶ್

    ಈ ಸಿನಿಮಾ ಬಿಡುಗಡೆಯಾಗಿ 49 ವರ್ಷ ಮುಗಿದು ಸ್ವರ್ಣ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 1972ರ ಮಾರ್ಚ್ 31 ರಂದು ಬಂಗಾರದ ಮನುಷ್ಯ ಸಿನಿಮಾ ತೆರೆಕಂಡಿತ್ತು. ಟಿಕೆ ರಾಮರಾವ್ ಅವರ ಬಂಗಾರದ ಮನುಷ್ಯ ಕಾದಂಬರಿ ಆಧರಿಸಿ ತಯಾರಿಸಿದ್ದ ಚಿತ್ರ ಇದು.

    Jaggesh Remembered About Bangarada Manushya Movie

    ಈ ಚಿತ್ರದ ನೋಡಿದ ನೆನೆಪನ್ನು ಹಿರಿಯ ನಟ ಜಗ್ಗೇಶ್ ಮೆಲುಕು ಹಾಕಿದ್ದಾರೆ. ಸ್ವರ್ಣ ವರ್ಷಕ್ಕೆ ಪ್ರವೇಶ ಮಾಡಿದ ಬಂಗಾರದ ಮನುಷ್ಯ ಚಿತ್ರವನ್ನು ಮೊದಲ ಸಲ ನೋಡಿದ ಅನುಭವವನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ.

    ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ, ಹೆಚ್ಚು ಸಿನಿಮಾ ನೋಡಬೇಡಿ: ಜಗ್ಗೇಶ್ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ, ಹೆಚ್ಚು ಸಿನಿಮಾ ನೋಡಬೇಡಿ: ಜಗ್ಗೇಶ್

    ''ಬೆಂಗಳೂರಿನ ಕರಗ ಹಾಗು ಈ ಚಿತ್ರ ನೋಡಲು ಅಂದು ಜಟಕಗಾಡಿಯಲ್ಲಿ ಅಪ್ಪ ಅಮ್ಮ ಅಕ್ಕಂದಿರು ತಮ್ಮ ರಾಮಣ್ಣ ಚಿಕ್ಕಮ್ಮ ಕರಗನೋಡಿ, ನಂತರ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಈ ಚಿತ್ರ ನೋಡಿ ನನ್ನ ಶಾಲೆ ಹಿಮಾಂಶು ಜೋತಿ ಕಲಾ ಪೀಠದಲ್ಲಿ ಸಹ ಪಾಟಿಗಳಿಗೆ ಕಥೆ ಹೇಳಿ ಸಂಭ್ರಮಿಸಿದ್ದೆ. ಇಂದು ಅಪ್ಪ ಅಮ್ಮ ಚಿಕ್ಕಮ್ಮ ಇಲ್ಲಾ. ಆದರೆ ಅವರ ಮಮತೆ ಪ್ರೀತಿ. ಚಿತ್ರ ನೆನಪಾಯಿತು'' ಎಂದು ಟ್ವೀಟ್ ಮಾಡಿದ್ದಾರೆ.

    Jaggesh Remembered About Bangarada Manushya Movie

    Recommended Video

    Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada

    ರಾಜ್ ಕುಮಾರ್ ಜೊತೆ ಆರತಿ, ಭಾರತಿ, ಶ್ರೀನಾಥ್, ಆದವಾನಿ ಲಕ್ಷ್ಮಿ ದೇವಿ, ಲೋಕನಾಥ್, ಬಾಲಕೃಷ್ಣ, ವಜ್ರಮುಣಿ, ದ್ವಾರಕೀಶ್, ಎಂಪಿ ಶಂಕರ್ ಸೇರಿದಂತೆ ಹಲವರು ಕಲಾವಿದರು ನಟಿಸಿದ್ದರು. ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು.

    English summary
    Kannada senior Actor Jaggesh Remembered About Bangarada Manushya Movie.
    Wednesday, March 31, 2021, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X