For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ಬಳಿ 200 ರೂ ಕೇಳ್ದೆ, 500 ಕೊಟ್ರು: ಆಗಿನ ಚಿತ್ರರಂಗ ಬೇರೆ- ಜಗ್ಗೇಶ್

  |

  ಈಶ್ವರಿ ಸಂಸ್ಥೆ ಅಂದ್ರೆ ನವರಸ ನಾಯಕ ಜಗ್ಗೇಶ್ ಅವರಿಗೂ ಬಹಳ ಅಭಿಮಾನ. ಏಕಂದ್ರೆ, ವೀರಾಸ್ವಾಮಿ ಅವರ ಈ ಸಂಸ್ಥೆಯಲ್ಲಿ ಬಂದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕಷ್ಟದಲ್ಲಿದ್ದಾಗ ಈ ಸಂಸ್ಥೆ ಅವಕಾಶ ಕೊಟ್ಟಿದೆ. ಇನ್ನು ರವಿಚಂದ್ರನ್ ಜೊತೆಯೂ ಜಗ್ಗೇಶ್‌ಗೆ ಆತ್ಮೀಯ ಒಡನಾಟ ಇದೆ. ರವಿಚಂದ್ರನ್ ಜೊತೆ ರಣಧೀರ, ಯುದ್ಧಕಾಂಡ ಅಂತಹ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಆಮೇಲೆ ಜಗ್ಗೇಶ್ ಹೀರೋ ಆಗಿದ್ದು ಎಲ್ಲವೂ ಆಸಕ್ತಿಕರ ವಿಷಯಗಳು.

  ಈಗ 'ರಂಗನಾಯಕ' ಸಿನಿಮಾ ಸೆಟ್‌ನಲ್ಲಿ ರವಿಚಂದ್ರನ್ ಅವರನ್ನು ನೆನಪಿಸಿಕೊಂಡಿದ್ದಾರೆ ಜಗ್ಗೇಶ್. 'ಮಠ' ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ರಂಗನಾಯಕ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಇಂದು ಸೆಟ್‌ನಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಗ್ಗೇಶ್, 'ಕೊರೊನಾ ವೈರಸ್‌ನಿಂದ ಚಿತ್ರರಂಗದ ಬಹಳ ಕಷ್ಟ ನೋಡಿದೆ, ಕಾರ್ಮಿಕರು, ತಂತ್ರಜ್ಞರ ಪರಿಸ್ಥಿತಿ ನೆನೆದು ತುಂಬಾ ದಿನ ಕಣ್ಣೀರು ಹಾಕಿದ್ದೆ' ಎಂದು ಬೇಸರದ ಮಾತುಗಳನ್ನಾಡಿದರು.

  ಬಲಗಾಲಿಟ್ಟು ರಂಗ ಪ್ರವೇಶಿಸಿದ 'ರಂಗನಾಯಕ' ಜಗ್ಗೇಶ್ಬಲಗಾಲಿಟ್ಟು ರಂಗ ಪ್ರವೇಶಿಸಿದ 'ರಂಗನಾಯಕ' ಜಗ್ಗೇಶ್

  ''ನಾನೊಬ್ಬ ಹಿರಿಯ ಕಲಾವಿದನಾಗಿ ಕಾರ್ಮಿಕರು, ತಂತ್ರಜ್ಞರು ಕಷ್ಟದ ಪರಿಸ್ಥಿತಿ ಕಣ್ಣೀರು ಹಾಕಿದ್ದೆ. ನಾವೆಲ್ಲ ಬಹಳ ಭಾವನಾತ್ಮಕವಾಗಿ ಬೆಳೆದವರು. ಒಬ್ಬರಿಗೆ ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಮುಂದೆ ಬಂದವರು. ಈಗ ಯಾಂತ್ರಿಕ ಬದುಕಿನಲ್ಲಿ ಅದೆಲ್ಲ ಇಲ್ಲದಂತಾಗಿದೆ. ತಮ್ಮ ಪಾಡು ಅಂತ ಜೀವಿಸುವಂತಾಗಿದೆ'' ಎಂದು ಬೇಸರ ವ್ಯಕ್ತಪಡಿಸಿದರು

  ''ಆಗ ಚಿತ್ರದ ಸೆಟ್‌ನಲ್ಲಿ ಕೆಲಸ ಮಾಡುವಾಗ ಒಬ್ಬ ಹೀರೋ ಇನ್ನೊಬ್ಬ ಹೀರೋ ಯೋಗಕ್ಷೇಮ ವಿಚಾರಿಸುತ್ತಿದ್ದರು. ಮನೆಯಲ್ಲಿ ಹೇಗಿದ್ದಾರೆ, ಎಲ್ಲವೂ ಆರಾಮಾಗಿದ್ಯಾ ಎಂದು ಕೇಳುತ್ತಿದ್ದರು. ಇಲ್ಲ ರೇಷನ್‌ಗಿಲ್ಲ, ನಿರ್ಮಾಪಕರು ಇನ್ನು ಪೇಮೆಂಟ್ ಮಾಡಿಲ್ಲ ಅಂತ ಅಂದ್ರೆ ಹೇಳಿ ಕೊಡಿಸೋರು. ಅದರಲ್ಲೂ ಪ್ರಭಾಕರ್, ಅಂಬರೀಶ್ ಅವರನ್ನು ಈ ಸಮಯದಲ್ಲಿ ನೆನೆಪಿಸಿಕೊಳ್ಳುವುದಕ್ಕೆ ಇಷ್ಟ ಪಡ್ತೀನಿ'' ಅಂದರು.

  'ರಂಗನಾಯಕ'ನಿಗೆ ಸಿಕ್ಕ ನಾಯಕಿ: ಯಾರು ಈ ರಚಿತಾ ಮಹಾಲಕ್ಷ್ಮಿ?'ರಂಗನಾಯಕ'ನಿಗೆ ಸಿಕ್ಕ ನಾಯಕಿ: ಯಾರು ಈ ರಚಿತಾ ಮಹಾಲಕ್ಷ್ಮಿ?

  ''ಗಣೇಶ ಹಬ್ಬ ಬಂತು. ಮನೆಯಲ್ಲಿ ಹೆಂಡತಿ ಬಳಿ ಕೇಳಿದೆ. ಏನೇ ದುಡ್ಡಿದ್ಯಾ ಅಂತ. 200 ರೂಪಾಯಿ ಇದೆ ಅಂದ್ರು. ಸರಿ ಇರು ರವಿಚಂದ್ರನ್ ಅವರನ್ನು ಕೇಳ್ತೀನಿ ಅಂತ ಹೋದೆ. ಸೆಟ್‌ ಹತ್ತರ ಬಾಗಿಲು ಬಳಿ ನಿಂತಿದ್ದೆ, ಬರಬೇಕಾದ್ರೆ ನನ್ನ ನೋಡಿ 'ಏನೋ ಅಂದ್ರು'. 'ಸರ್ ನಾಳೆ ಹಬ್ಬ, 200 ರೂಪಾಯಿ ಬೇಕಿತ್ತು' ಅಂತ ಕೇಳಿದೆ. 'ಹೇ ಬಾಬು, ಇವನಿಗೆ 500 ರೂಪಾಯಿ ಕೊಟ್ಟು ಕಳಿಸೋ'' ಅಂದಿದ್ದರು. ''ಆಗ ಯಾರಿಗಾದರೂ ಸಮಸ್ಯೆ, ಕಷ್ಟ ಅಂದ್ರೆ ಸಹಾಯ ಮಾಡೋರು, ಸ್ಪಂದಿಸುತ್ತಿದ್ದರು. ಜೊತೆಯಲ್ಲಿರೋರು, ಜೊತೆ ಬರೋರು. ಜೊತೆಯಲ್ಲಿ ನಿಲ್ಲೋರು. ಅಂತಹ ದಿನಗಳನ್ನು ನೋಡಿ ಬಂದವನು ನಾನು. ಈಗ ಎಲ್ಲರೂ ಯಾಂತ್ರಿಕವಾಗಿ ಇದ್ದಾರೆ. ಅವರವರು ಬದುಕು ನೋಡ್ಕೊಂಡು ಹೋಗ್ತಿರ್ತಾರೆ.'' ಎಂದು ಹೇಳಿದರು.

  Jaggesh Remembered the incident Ravichandran Gave Rs 500 when he asked for Rs 200

  'ರಂಗನಾಯಕ' ಸಿನಿಮಾ ಕುರಿತು

  ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ರಂಗನಾಯಕ ಚಿತ್ರದೊಂದಿಗೆ ಈ ಸೂಪರ್ ಹಿಟ್ ಕಾಂಬಿನೇಷನ್ ಒಂದಾಗಿದೆ. ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ತಮಿಳು ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯದ ಜೊತೆಗೆ ನಿರ್ದೇಶನ ಮಾಡ್ತಿರುವ ಗುರು ಪ್ರಸಾದ್ ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ರಂಗನಾಯಕ ಅಧಿಕೃತವಾಗಿ ಮುಹೂರ್ತ ಮಾಡಿಕೊಂಡಿತ್ತು. ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ಸಿನಿಮಾ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದ ಸ್ವಲ್ಪ ತಡವಾಗಿದೆ. ಇಂದಿನ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಗುರುಪ್ರಸಾದ್, ಜಗ್ಗೇಶ್, ರಚಿತಾ ಮಹಾಲಕ್ಷ್ಮಿ, ಅನೂಪ್ ಸೀಳಿನ್ ಪಾಲ್ಗೊಂಡಿದ್ದರು.

  English summary
  Kannada actor Jaggesh Remembered the incident Ravichandran Gave Rs 500 when he asked for Rs 200.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X