32 ವರ್ಷದ ಹಿಂದಿನ ರಾಯರ ಫೋಟೋ ಕಥೆ ಬಿಚ್ಚಿಟ್ಟ ಜಗ್ಗೇಶ್

ಹಿರಿಯ ನಟ ಜಗ್ಗೇಶ್ ಅವರ ಜೀವನದಲ್ಲಿ ಪ್ರಮುಖ ಪಾತ್ರವಹಿಸಿರುವ ವಾಜಿದ್ ಸಾಜಿದ್ ಅವರನ್ನು ಸುಮಾರು 32 ವರ್ಷದ ನಂತರ ನಟ ಜಗ್ಗೇಶ್ ನೆನೆಪಿಸಿಕೊಂಡಿದ್ದಾರೆ.

ಈ ವಾಜಿದ್ ಸಾಜಿದ್ ಬೇರೆ ಯಾರೂ ಅಲ್ಲ. ಜಗ್ಗೇಶ್ ಅವರು ಬಹಳ ಇಷ್ಟ ಪಡುವ, ಆರಾಧಿಸುವ ರಾಯರ ಫೋಟೋವನ್ನು ಸುಮಾರು 32 ವರ್ಷದ ಹಿಂದೆ ಜಗ್ಗೇಶ್ ಅವರಿಗೆ ನೀಡಿದ ವ್ಯಕ್ತಿ. ಈ ಫೋಟೋ ಪಡೆದ ನಂತರ ಜಗ್ಗೇಶ್ ಅವರ ಜೀವನದಲ್ಲಿ ಅನೇಕ ಪವಾಡಗಳು ನಡೆದಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಹಿರಿಯ ನಟ ಜಗ್ಗೇಶ್ ಅವರ ಸಹೋದರ ಕೋಮಲ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

Jaggesh Remembered Wazid Sajid after 32 years

ಈ ವಿಚಾರ ತಿಳಿದು ಸಾಜಿದ್ ಅವರು ಟ್ವಿಟ್ಟರ್ ಮೂಲಕ ಜಗ್ಗೇಶ್ ಅವರನ್ನು ಯೋಗಕ್ಷೇಮ ವಿಚಾರಿಸಿದ್ದಾರೆ. 'ನಮಸ್ಕಾರ ಸರ್, ಇಂದಿನ ಪತ್ರಿಕೆಯಲ್ಲಿ ಕೋಮಲ್ ರವರಿಗೆ ಕೋವಿಡ್ ಆವರಿಸಿ ಈಗ ಚೇತರಿಸಿಕೊಳ್ಳುತ್ತಿರುವ ಸಮಾಚಾರ ತಮ್ಮ ಲೇಖನದ ಮೂಲಕ ತಿಳಿದು ಹೃದಯ ತುಂಬಿ ಬಂದಿತು, ಆ ದೇವರು ಅವರ ಆರೋಗ್ಯ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ವಾಜಿದ್ ಸಾಜಿದ್ ಟ್ವಿಟ್ಟರ್ ಮೂಲಕ ಜಗ್ಗೇಶ್ ಅವರನ್ನು ಕೇಳಿದ್ದರು.

ವಾಜಿದ್ ಅವರಿಗೆ ಪ್ರತಿಕ್ರಿಯಿಸಿದ ಜಗ್ಗೇಶ್ ''ಹೇಗಿದ್ದೀರ inshalla God bless...ನೀವು ರಚಿಸಿಕೊಟ್ಟ ರಾಯರ ಚಿತ್ರ 32 ವರ್ಷವಾಗಿ ಅದ್ಭುತ ಪವಾಡ ನಡೆಯುತ್ತಿದೆ ಅದರಲ್ಲಿ. ನನ್ನ 32 ವರ್ಷದ ಬೆಳವಣಿಗೆಯಲ್ಲಿ ಈ ಪೋಟೊ ಮೂಲಕ ಅನೇಕ ಪವಾಡ ಆಗಿದೆ ಅದರಲ್ಲಿ ಕೋಮಲ್ ಉದಾಹರಣೆಯು ಒಂದು...ಧನ್ಯವಾದ ಸಾಜಿದ್ ನಿಮ್ಮ ನೆನಪಿನ ಪ್ರೀತಿಗೆ. ಎಷ್ಟು ವಯಸ್ಸು ಈಗ ನಿಮಗೆ? 32ವರ್ಷದ ಹಿಂದೆ ಆದ ಭೇಟಿ'' ಎಂದು ಕೇಳಿದರು.

ಅದಕ್ಕೆ ಮತ್ತೆ ಉತ್ತರಿಸಿದ ವಾಜಿದ್ ''ಸರ್ ನನಗೆ ಈಗ 62ನೇ ವಯಸ್ಸು ನಡೆಯುತ್ತಿದೆ'' ಎಂದಿದ್ದಾರೆ.

ವಾಜಿದ್ ಅವರಿಗೆ ಮತ್ತೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ''Waw 6yrs ನನಗಿಂತ ಹಿಂದೆ. ಎಷ್ಟು ಜನ ಮಕ್ಕಳು? ಕುಟುಂಬದ ಎಲ್ಲರಿಗು ನನ್ನ ನಮಸ್ಕಾರ ತಿಳಿಸಿಬಿಡಿ..ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಧನ್ಯವಾದ ಸಹೋದರ....ಖುದಾಫೀಸ್'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕೋಮಲ್ ಆರೋಗ್ಯದ ಬಗ್ಗೆ ಮಾಹಿತಿ

ನಿರಂತರ ಸುತ್ತಾಟದಿಂದ ಆಯಾಸಗೊಂಡಿದ್ದ ಕೋಮಲ್ ಅವರ ಆರೋಗ್ಯ ವಿಪರೀತವಾಗಿ ಕೆಟ್ಟಿತ್ತು. ಇದೇ ವೇಳೆಯಲ್ಲಿ ನಟ ಕೋಮಲ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದರಿಂದ ಗಂಭೀರ ಸ್ಥಿತಿ ತಲುಪಿದ್ದ ಕೋಮಲ್ ಈಗ ಬದುಕಿಳಿದಿದ್ದಾರೆ ಎಂದು ಸ್ವತಃ ಜಗ್ಗೇಶ್ ತಿಳಿಸಿದ್ದರು.

More from Filmibeat

English summary
Jaggesh Remembered Wazid Sajid after 32 years, who gave Rayara photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X