For Quick Alerts
  ALLOW NOTIFICATIONS  
  For Daily Alerts

  'ಯಾರು ಇಲ್ಲದಿದ್ದಾಗ ಅಣ್ಣನಂತೆ ಭುಜಕೊಟ್ಟರು, ಕರುಣಾಮಯಿ': ಪ್ರಭಣ್ಣನ ಸ್ಮರಿಸಿದ ಜಗ್ಗೇಶ್

  |

  ''ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು. ಅವರ ಮರಣಯಾತ್ರೆವರೆಗು ಜೊತೆ ಇದ್ದೆ. ಕರುಣಾಮಯಿ ಪ್ರಭಣ್ಣ'' ಎಂದು ಹಿರಿಯ ನಟ ಜಗ್ಗೇಶ್ ಅವರು ಟೈಗರ್ ಪ್ರಭಾಕರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

  ಅಣ್ಣಂನಂತಿದ್ದ ಟೈಗರ್ ಪ್ರಭಾಕರ್ ನೆನಪಿಸಿಕೊಂಡ ಜಗ್ಗಣ್ಣ | Jaggesh | Tiger Prabhakar | Filmibeat Kannada

  ಕನ್ನಡದ ಚಿತ್ರರಂಗದ ಖ್ಯಾತ ಕಲಾವಿದ. ಭಾರತೀಯ ಚಿತ್ರರಂಗದ ಖ್ಯಾತ ಖಳನಟ. ಆಕ್ಷನ್ ಎಂಬ ಪದಕ್ಕೆ ಪರ್ಯಾಯ ಹೆಸರು ಪ್ರಭಾಕರ್. ಸಣ್ಣ ಪುಟ್ಟ ಪಾತ್ರಗಳ ಮೂಲಕ ಜರ್ನಿ ಆರಂಭಿಸಿದ ಪ್ರಭಾಕರ್ ನಂತರ ಪ್ರಮುಖ ಖಳನಾಯಕನಾಗಿ, ಆಮೇಲೆ ಹೀರೋ ಆಗಿ ಮಿಂಚಿದ ಪ್ರತಿಭೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಪ್ರಭಾಕರ್ ಈಗ ನೆನಪು ಮಾತ್ರ. ಇಂದು ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಜನುಮದಿನದ ಪ್ರಯುಕ್ತ ಗೆಳೆಯ, ಸಹೋದರನಂತಿದ್ದ ಪ್ರಭಾಕರ್ ಅವರನ್ನು ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ. ಮುಂದೆ ಓದಿ...

  ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ, ಹೆಚ್ಚು ಸಿನಿಮಾ ನೋಡಬೇಡಿ: ಜಗ್ಗೇಶ್

  ಅಣ್ಣನಂತೆ ಭುಜಕೊಟ್ಟರು

  ಅಣ್ಣನಂತೆ ಭುಜಕೊಟ್ಟರು

  ''ಪ್ರಭಣ್ಣ ನನ್ನ ಸ್ನೇಹ ಆದದ್ದು 1987 ಚಿತ್ರ ಅಗ್ನಿಪರ್ವ. ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು. ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು. ಎಷ್ಟೋ ದಿನಗಳು ನಾವಿಬ್ಬರೆ ಗುಂಡುಪಾರ್ಟಿ ಸಹಪಾಟಿಗಳು. ಅವರ ಮರಣಯಾತ್ರೆವರೆಗು ಜೊತೆ ಇದ್ದೆ. ಅವರು ನನ್ನ ಕರೆಯುತ್ತದ್ದ ಶೈಲಿ ರಾಜಣ್ಣೆ ಅದ್ಭುತ'' ಎಂದು ನಟ ಜಗ್ಗೇಶ್ ನೆನಪು ಮೆಲುಕು ಹಾಕಿದ್ದಾರೆ.

  ಕರುಣಾಮಯಿ ಪ್ರಭಣ್ಣ

  ಕರುಣಾಮಯಿ ಪ್ರಭಣ್ಣ

  'ನಾವಿಬ್ಬರು ನಟಿಸಿದ ಚಿತ್ರ ಅರ್ಜುನ ಅಭಿಮನ್ಯು 1995 ಸಮಯದಲ್ಲಿ ಅಮ್ಮ ತೀರಿಕೊಂಡಳು. ಜಗವೆ ಶೂನ್ಯವಾಗಿ ದುಃಖಿಸುವಾಗ 2ಕೈ ನನ್ನ ತಬ್ಬಿ ಅಳುತ್ತ 'ರಾಜಣ್ಣೆ ನೀನು ನನ್ನಂತೆ ಅಮ್ಮನ ಕಳೆದುಕೊಂಡೆಯಾ' ಎಂದಾಗ ನನ್ನ ದುಃಖದ ಕಟ್ಟೆಯೋಡೆದು ಹುಚ್ಚನಂತೆ ಅತ್ತುಬಿಟ್ಟೆ. ಅಂಥ ಕರುಣಾಮಯಿ ಪ್ರಭಣ್ಣ ನಿಮಗೆ ಹುಟ್ಟುಹಬ್ಬದ ಶುಭಾಶಯ. ನಿಮ್ಮ ಪ್ರೀತಿ ಅವಿಸ್ಮರಣೀಯ' ಎಂದು ಜಗ್ಗೇಶ್ ಶುಭಕೋರಿದ್ದಾರೆ.

  ಕಾಂಗ್ರೆಸ್ ಸೇರಿ ಎಲ್ಲವನ್ನೂ ಕಳೆದುಕೊಂಡೆ: ನಿವೇಶನ ಮಾರಿದ ಕತೆ ಹೇಳಿದ ಜಗ್ಗೇಶ್

  ಪ್ರಭಾಕರ್ ನಿರ್ದೇಶನದಲ್ಲಿ ಜಗ್ಗೇಶ್!

  ಪ್ರಭಾಕರ್ ನಿರ್ದೇಶನದಲ್ಲಿ ಜಗ್ಗೇಶ್!

  'ಅರ್ಜುನ ಅಭಿಮನ್ಯು' ಸಿನಿಮಾದಲ್ಲಿ ಜಗ್ಗೇಶ್ ಮತ್ತು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಸ್ವತಃ ಪ್ರಭಾಕರ್ ಅವರೇ ನಿರ್ದೇಶಿಸಿದ್ದರು. ಭಾರತಿ, ಪಾಯಲ್ ಮಲ್ಹೋತ್ರಾ, ವಜ್ರಮುನಿ, ಸುಂದರ್ ರಾಜ್, ಅವಿನಾಶ್ ಸೇರಿದಂತೆ ಹಲವು ನಟಿಸಿದ್ದರು.

  ಅಪ್ಪನ ಹುಟ್ಟುಹಬ್ಬಕ್ಕೆ ಶುಭಕೋರಿದ ಮರಿ ಟೈಗರ್

  ಅಪ್ಪನ ಹುಟ್ಟುಹಬ್ಬಕ್ಕೆ ಶುಭಕೋರಿದ ಮರಿ ಟೈಗರ್

  ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ದರ್ಶನ್ ಜೊತೆ ರಾಬರ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವೈಯಕ್ತಿಕವಾಗಿ ವಿನೋದ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ತಂದೆಯ ಹುಟ್ಟುಹಬ್ಬಕ್ಕೆ ಹಳೆ ಫೋಟೋವೊಂದನ್ನು ಹಂಚಿಕೊಂಡು ಶುಭಕೋರಿದ್ದಾರೆ.

  English summary
  Kannada actor Jaggesh Remembers Tiger Prabhakar on his birth anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X