twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಬರದಂತೆ ಮೊದಲೇ ಔಷಧ ತೆಗೆದುಕೊಂಡಿದ್ದಾರೆ ಜಗ್ಗೇಶ್!

    |

    ಕೊರೊನಾ ವೈರಸ್ ದೇಶದಾದ್ಯಂತ ಪಸರಿಸಿದೆ. ಕರ್ನಾಟಕದಲ್ಲಂತೂ ವೈರಸ್ ತೀವ್ರ ಸ್ವರೂಪದಲ್ಲಿ ಏರಿಕೆಯಾಗುತ್ತಿದೆ.

    Recommended Video

    ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

    ಕೊರೊನಾ ಕ್ಕೆ ಮದ್ದು ಕಂಡುಹಿಡಿಯಲು ವಿಜ್ಞಾನಿಗಳು ಪ್ರತಿದಿನ ಶ್ರಮಿಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ನಿರ್ದಿಷ್ಟ ಔಷಧ ಕಂಡುಹಿಡಿಯಲಾಗಿಲ್ಲ.

    ಆದರೆ ಕೊರೊನಾ ಔಷಧ ತಯಾರಿಸಿದ್ದೇವೆ ಎಂದು ಕೆಲವರು ಹೇಳಿದರಾದರೂ ಅದೂ ಸಾಮಾಜಿಕ ಜಾಲತಾಣ ಬಿಟ್ಟು ನಿಜ ರೋಗಿಗಳ ಮೇಲೆ ಪ್ರಯೋಗವಾಗಿ ಯಶಸ್ಸು ಗಳಿಸಲಿಲ್ಲ.

    ಆದರೆ ಪ್ರಸ್ತುತ ಆಯುರ್ವೇದ ಔಷಧಿಯನ್ನು ಸರ್ಕಾರವೇ ವಿತರಿಸಲು ನಿಶ್ಚಯಿಸಿದೆ. ಆಯುರ್ವೇದ ವೈದ್ಯ ಗಿರಿಧರ ಕರ್ಜೆ ಅವರು ತಯಾರಿಸಿರುವ ಆಯುರ್ವೇಧ ಔ‍ಷಧವನ್ನು ಸಚಿವರೇ ವಿತರಿಸಲು ನಿಶ್ಚಯಿಸಿದ್ದಾರೆ. ಇದನ್ನು ನಟ, ರಾಜಕಾರಣಿ ಜಗ್ಗೇಶ್ ಮೊದಲಿಗೇ ಪಡೆದುಕೊಂಡಿದ್ದರಂತೆ!

    ತಿಂಗಳಿಂದಲೂ ಔಷಧ ಸೇವಿಸುತ್ತಿದ್ದಾರೆ ಜಗ್ಗೇಶ್

    ತಿಂಗಳಿಂದಲೂ ಔಷಧ ಸೇವಿಸುತ್ತಿದ್ದಾರೆ ಜಗ್ಗೇಶ್

    ಹೌದು, ನಟ, ರಾಜಕಾರಣಿ ಜಗ್ಗೇಶ್ ಅವರು ಇಂದು ಟ್ವೀಟ್ ಮಾಡಿರುವಂತೆ, ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರು ಜಗ್ಗೇಶ್ ಅವರಿಗೆ ಈ ಹಿಂದೆಯೇ ಕೊರೊನಾ ಗೆ ಆಯುರ್ವೇಧ ಔಷಧ ನೀಡಿದ್ದರಂತೆ, ಕಳೆದ ಒಂದು ತಿಂಗಳಿಂದಲೂ ಆ ಔಷಧವನ್ನು ಅವರು ತೆಗೆದುಕೊಳ್ಳುತ್ತಿದ್ದಾರಂತೆ.

    ಟ್ವಿಟ್ಟರ್‌ನಲ್ಲಿ ಜಗ್ಗೇಶ್ ಮನವಿ

    ಟ್ವಿಟ್ಟರ್‌ನಲ್ಲಿ ಜಗ್ಗೇಶ್ ಮನವಿ

    ಜಗ್ಗೇಶ್ ಅವರು ಮನವಿ ಮಾಡಿರುವಂತೆ, ಡಾ.ಗಿರಿಧರ ಕಜೆ ಅವರ ಔಷಧವನ್ನು ಎಲ್ಲರೂ ನಂಬಿಕೆಯಿಂದ ತೆಗೆದುಕೊಳ್ಳಿ, ನಾನೂ ಸಹ ಕಳೆದ ಒಂದು ತಿಂಗಳಿಂದಲೂ ತೆಗೆದುಕೊಳ್ಳುತ್ತಿದ್ದೇನೆ ಎಂದು ಜಗ್ಗೇಶ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

    ಕೊರೊನಾಕ್ಕೆ ಕಜೆ ಅವರ ಔಷಧ

    ಕೊರೊನಾಕ್ಕೆ ಕಜೆ ಅವರ ಔಷಧ

    ಆಯುರ್ವೇದ ವೈದ್ಯ ಕಜೆ ಅವರು ಕೊರೊನಾ ಕ್ಕೆ ಔಷಧವನ್ನು ಕಂಡುಹಿಡಿದಿದ್ದೇನೆಂದು ಈ ಹಿಂದೆಯೂ ಹೇಳಿದ್ದರು. ಕೆಲವರ ಮೇಲೆ ಪ್ರಯೋಗ ಸಹ ಆಗಿತ್ತು. ಆದರೆ ಇದರ ಬಳಕೆ, ಹಾಗೂ ಇದರ ಪರಿಣಾಮದ ಬಗ್ಗೆ ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದರು.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಯೋಗ, ಯಶಸ್ವಿ

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಯೋಗ, ಯಶಸ್ವಿ

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲವರ ಮೇಲೆ ಕಜೆ ಅವರ ಔಷಧವನ್ನು ಪರೀಕ್ಷಿಸಿ ನೋಡಲಾಗಿತ್ತು, ಆಗ ಆ ಔಷಧ ಸಫಲವಾಯಿತು ಎಂದು ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದರು. ಆದರೆ ಕೆಲವು ಅಧಿಕಾರಿಗಳು ಇದನ್ನು ಒಪ್ಪಲಿಲ್ಲವಾದ್ದರಿಂದ ಔಷಧ ಪ್ರಯೋಗ ಮುಂದುವರೆಯಲಿಲ್ಲ.

    ಸಚಿವರೇ ಆಯುರ್ವೇದ ಟಿಕ್ ಕೊಡುತ್ತಿದ್ದಾರೆ

    ಸಚಿವರೇ ಆಯುರ್ವೇದ ಟಿಕ್ ಕೊಡುತ್ತಿದ್ದಾರೆ

    ಆದರೆ ಈಗ ಈಶ್ವರಪ್ಪ ಸೇರಿ ಕೆಲವು ಸಚಿವರು ಕಜೆ ಅವರ ಆಯುರ್ವೇದ ಕಿಟ್ ಅನ್ನು ಜನರಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಸರ್ಕಾರವೂ ಮೌನ ಒಪ್ಪಿಗೆಯನ್ನು ಕಜೆ ಅವರ ಔಷಧ ಪ್ರಯೋಗವನ್ನು ಸಾರ್ವಜನಿಕಗೊಳಿಸಲು ನೀಡಿದೆ.

    English summary
    Actor Jaggesh request to take ayurveda medicine of Dr Girishar Keje's ayurveda medicine.
    Saturday, July 18, 2020, 19:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X