ಚಿರು ಸಾವಿಗೆ ಕಾರಣವಾಯ್ತಾ ಜಾತಕ ದೋಷ? ಜೋತಿಷಿ ಹೇಳಿದ ಕಥೆ ಬಿಚ್ಚಿಟ್ಟ ಜಗ್ಗೇಶ್

By ಫಿಲ್ಮ್ ಡೆಸ್ಕ್

ನಟ ಚಿರಂಜೀವಿ ಸರ್ಜಾ ನಿಧನದ ಸುದ್ದಿ ಇಡೀ ಕರುನಾಡಿಗೆ ದೊಡ್ಡ ಆಘಾತವೊಂಟು ಮಾಡಿದೆ. 39ನೇ ವಯಸ್ಸಿನಲ್ಲಿಯೇ ಚಿರು ಜೀವನವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅರಗಿಸಿಕೊಳ್ಳಲಾಗದ ಚಿರು ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

Recommended Video

ಚಿರಂಜೀವಿಯನ್ನು ನೋಡಿ ಕಣ್ಣಿರಿಟ್ಟ ಅಭಿಮಾನಿಗಳು | Chiranjeevi Sarja| FILMIBEAT KANNADA

ಚಿರಂಜೀವಿ ಸರ್ಜಾ ಮದುವೆಯಾಗಿ ಎರಡು ವರ್ಷಗಳಾಗಿದೆ. ಇತ್ತೀಚಿಗಷ್ಟೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮುದ್ದಾದ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು.. ಆದರೆ ಮಗುವಿನ ಮುಖ ನೋಡುವ ಮೊದಲೆ ಚಿರು ಇಹಲೋಕ ತ್ಯಜಿಸಿದ್ದಾರೆ.

2018 ಮೇ 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೇಘನ ಮತ್ತು ಚಿರಂಜೀವಿ ಸರ್ಜಾ ಅದ್ಧೂರಿ ವಿವಾಹ ಜೀವನಕ್ಕೆ ಕಾಲಿಟ್ಟದ್ದರು. 2017ರಲ್ಲಿ ವಜ್ರದುಂಗುರ ತೊಡಿಸುವ ಮೂಲಕ ಚಿರು ಸರ್ಜಾ, ಮೇಘನಾ ಅವರಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರ ಮದುವೆ ಹಾಗೂ ಆರತಕ್ಷತೆ ಸಮಾರಂಭಕ್ಕೆ ಚಿತ್ರರಂಗದ ಬಹುತೇಕ ಗಣ್ಯರು, ಕಲಾವಿದರು, ತಂತ್ರಜ್ಞರು ಭಾಗವಹಿಸಿ ಶುಭ ಹಾರೈಸಿದ್ದರು.

ಇಬ್ಬರ ಮದುವೆ ಬಗ್ಗೆ ನಟ ಜಗ್ಗೇಶ್ ಒಂದಿಷ್ಟು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಮದುವೆ ವಿಚಾರವಾಗಿ ಚಿರು ಸರ್ಜಾ ಫೋನ್ ಮಾಡಿ ಜಗ್ಗೇಶ್ ಬಳಿ ಹೇಳಿದ್ದನು? ಇಬ್ಬರ ಮದುವೆಗೆ ಒಪ್ಪಿಸಿದ ಜಗ್ಗೇಶ್ ಜಾತಕ ದೋಷದ ಬಗ್ಗೆ ಈಗ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ..

ಮದುವೆಗೆ ಮೇಘನಾ ಅಪ್ಪ-ಅಮ್ಮನ ಒಪ್ಪಿಸಿದ್ದು ಜಗ್ಗೇಶ್

ಮದುವೆಗೆ ಮೇಘನಾ ಅಪ್ಪ-ಅಮ್ಮನ ಒಪ್ಪಿಸಿದ್ದು ಜಗ್ಗೇಶ್

"ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ದಯವಿಟ್ಟು ಮಾಮ ಅದು ಬಿಡಿ. ಅಂದ. ವಿಷಯ ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಅಂದ."

ಸಾವಿಗೆ ಕಾರಣವಾಯ್ತಾ ಜಾತಕ ದೋಷ?

ಸಾವಿಗೆ ಕಾರಣವಾಯ್ತಾ ಜಾತಕ ದೋಷ?

"ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅವರು ಹೇಳಿದ್ದು ಜಗ್ಗೇಶ್, ಅಷ್ಟಮ ಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ. ಅದು ಮಾಡಿ ಮುಂದುವರೆಯಿರಿ" ಎಂದರು. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು."

ಸುಂದರ್ ರಾಜ್ ಮನೆಗೆ ಹೋಗಿ ಮದುವೆ ಫಿಕ್ಸ್ ಮಾಡಿದ್ದೆವು

ಸುಂದರ್ ರಾಜ್ ಮನೆಗೆ ಹೋಗಿ ಮದುವೆ ಫಿಕ್ಸ್ ಮಾಡಿದ್ದೆವು

"ಗಣೇಶನ ಜೊತೆ ಒಂದು ಗೆಸ್ಟ್ ರೋಲ್ ಮಾಡಿದೆ. ಆ ಚಿತ್ರೀಕರಣ ಮೇಘನಾ ಮನೆ ಮುಂದೆಯೇ ಇತ್ತು. ಚಿತ್ರೀಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿ ಫಿಕ್ಸ್ ಆಗಿ ಮೇಘನಾ ಹಾಗು ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು, ನಾನು ಪರಿಮಳಾ ಈ ವಿಷಯ ಪ್ರಸ್ತಾಪ ಮಾಡಿದೆವು. ದೇವರ ದಯೆಯಿಂದ ಮದುವೆಯು ಮುಗಿಯಿತು."

ಮದುವೆ ಆದಮೇಲೆ ಯಾಕೆ ಗ್ಯಾಪ್?

ಮದುವೆ ಆದಮೇಲೆ ಯಾಕೆ ಗ್ಯಾಪ್?

"ನಂತರ ಚಿರು ಅನೇಕ ಬಾರಿ ಕರೆಮಾಡಿ "ಮಾಮ ದಯಮಾಡಿ ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ" ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು ನಾನು ಪರಿಮಳಾ, ಚಿರು ಬಗ್ಗೆ ಮಾತಾಡುತ್ತಾ ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ ಗ್ಯಾಪ್? ಇಷ್ಟೊತ್ತಿಗೆ Good News ಬೇಕಿತ್ತು, ಎಂದು ಮಾತಾಡಿಕೊಂಡೆವು."

ಶಂಕರ್ ನಾಗ್ ಸಾಲಿಗೆ ಚಿರು ಸೇರಿಬಿಟ್ಟನೆ

ಶಂಕರ್ ನಾಗ್ ಸಾಲಿಗೆ ಚಿರು ಸೇರಿಬಿಟ್ಟನೆ

"ಮಧ್ಯಾಹ್ನ ಊಟ ಮಾಡಿ ಮಲಗಿದೆ. ಚಾಲಕ ಪದ್ದು ಕರೆಮಾಡಿ, Boss TV ನೋಡಿದ್ರಾ.? ಚಿರು ಹೋಗಿಬಿಟ್ಟಾ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು.? ಇದಕ್ಕಾ ನಮ್ಮ ಹೋರಾಟ..? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ.? ಎಂಥ ದೌರ್ಭಾಗ್ಯ. ಶಂಕರ್ ನಾಗ್ ಹೀಗೆ 36ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ. ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ.? ಓ ದೇವರೆ ಈ ಸಾವು ನ್ಯಾಯವೇ.? ದುಃಖದಿಂದ ವಿದಾಯ ಕಲಾಬಂಧುವಿಗೆ. ಓಂಶಾಂತಿ"

More from Filmibeat

English summary
Actor Jaggesh reveals about Kuja Dosha in Chiranjeevi Sarja;s horoscope.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X