For Quick Alerts
  ALLOW NOTIFICATIONS  
  For Daily Alerts

  ಅಮ್ಮ ಸಂಸಾರದಲ್ಲಿದ್ದು ಸನ್ಯಾಸಿಯಂತೆ ಬದುಕಿದ್ದ ಸಾಧ್ವಿ: ನಟ ಜಗ್ಗೇಶ್

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಗೆ ಅಮ್ಮ ಎಂದರೆ ಪ್ರಾಣ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಅವಕಾಶ ಸಿಕ್ಕಾಗಲೆಲ್ಲ ಅಮ್ಮನ ಬಗ್ಗೆ ಹೇಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಅಮ್ಮನ ನೆನಪನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಇವತ್ತು ಇಷ್ಟು ದೊಡ್ಡ ನಟನಾಗಿ, ಇಡೀ ಕರ್ನಾಟಕ ಇಷ್ಟಪಡುವ ಕಲಾವಿದನಾಗಿ ಬೆಳೆದು ನಿಂತಿರುವ ಜಗ್ಗೇಶ್ ಇತ್ತೀಚಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತರಾಗಿದ್ದಾರೆ. ಗುರುರಾಯರ ಪರಮ ಭಕ್ತರಾಗಿರುವ ಜಗ್ಗೇಶ್ ಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಬರಲು ಕಾರಣನೇ ಅವರ ಅಮ್ಮ.

  32 ವರ್ಷದ ಹಿಂದಿನ ರಾಯರ ಫೋಟೋ ಕಥೆ ಬಿಚ್ಚಿಟ್ಟ ಜಗ್ಗೇಶ್32 ವರ್ಷದ ಹಿಂದಿನ ರಾಯರ ಫೋಟೋ ಕಥೆ ಬಿಚ್ಚಿಟ್ಟ ಜಗ್ಗೇಶ್

  ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಯೊಬ್ಬ ಜ್ಞಾನಿ, ಯೋಗಿ ಆಗಿದ್ದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ನವರಸ ನಾಯಕ ದೀರ್ಘವಾಗಿ ಉತ್ತರ ನೀಡಿದ್ದಾರೆ.

  'ಅಮ್ಮನಿಂದ.. ಅಮ್ಮ ಸಂಸಾರದಲ್ಲಿ ಇದ್ದು ಸನ್ಯಾಸಿಯಂತೆ ಬದುಕಿದ್ದ ಸಾಧ್ವಿ. ಆಕೆ ತನ್ನ 37ನೇ ವಯಸ್ಸಿಗೆ ಶಿವಧೀಕ್ಷೆ ಪಡೆದಿದ್ದವಳು. ನಾನು ಅಮ್ಮನ ಪರಮಭಕ್ತ ಹಾಗು ಆಕೆಯ ಪೂಜೆ ವ್ರತಕ್ಕೆ ಸಹಾಯಕ. ಹಾಗಾಗಿ ಅವಳಿಂದ ಪ್ರಾಪ್ತ ಎಲ್ಲ. ಹೊಟ್ಟೆಪಾಡಿಗಾಗಿ ಕಲೆಗೆ ದಾಸನಾದೆ. ಕೊಟ್ಟ ಪಾತ್ರವಾಗಿ ಜೀವಿಸಿದೆ. ಮಿಕ್ಕಂತೆ ನಾನು ಅಮ್ಮನ ಮಗ. ರಾಯರ ಭಕ್ತ' ಎಂದು ಹೇಳಿದ್ದಾರೆ.

  ಆಧ್ಯಾತ್ಮದ ಬಗ್ಗೆ ಜಗ್ಗೇಶ್ ಸದಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಜಗ್ಗೇಶ್ ರಾಯರ ಫೋಟೋ ಬಗ್ಗೆ ಬಹಿರಂಗ ಪಡಿಸಿದ್ದರು. ಜಗ್ಗೇಶ್ ಅವರು ಬಹಳ ಇಷ್ಟ ಪಡುವ, ಆರಾಧಿಸುವ ರಾಯರ ಫೋಟೋವನ್ನು ಸುಮಾರು 32 ವರ್ಷದ ಹಿಂದೆ ಜಗ್ಗೇಶ್ ಅವರಿಗೆ ನೀಡಿದ ವ್ಯಕ್ತಿ ಬಗ್ಗೆ ಬಹಿರಂಗ ಪಡಿಸಿದ್ದರು.

  ನಿಮ್ಮ ಬಳಿ ಇರುವ ಕೋಟಿ-ಕೋಟಿ ಹಣ ಖರ್ಚುಮಾಡಿ ಅಂತ ಕಂಗನಾಗೆ ತಿವಿದ ರಾಖಿ ಸಾವಂತ್ | Filmibeat Kannada

  ಈ ಫೋಟೋ ಪಡೆದ ನಂತರ ಜಗ್ಗೇಶ್ ಅವರ ಜೀವನದಲ್ಲಿ ಅನೇಕ ಪವಾಡಗಳು ನಡೆದಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

  English summary
  Actor Jaggesh reveals interesting things about his mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X