ಚಿತ್ರರಂಗದ ಸಭೆಗೆ ಗೈರಾದ ನಟ ಜಗ್ಗೇಶ್: ಅಸಲಿ ಕಾರಣ ಇಲ್ಲಿದೆ

ಕನ್ನಡ ಚಿತ್ರರಂಗದ ನಾಯಕತ್ವದ ಜವಾಬ್ದಾರಿ ಈಗ ಶಿವರಾಜ್ ಕುಮಾರ್ ಹೆಗಲಿಗೆ ಬಿದ್ದಿದೆ. ಇತ್ತೀಚಿಗೆ ಶಿವರಾಜ್ ಕುಮಾರ್ ಮನೆಯಲ್ಲಿ ತಂತ್ರಜ್ಞರು, ಕಲಾವಿದರು, ನಿರ್ಮಾಪಕರು, ವಿತರಕರು ಸೇರಿದ್ದಂತೆ ಚಿತ್ರರಂಗದವರೆಲ್ಲರೂ ಒಗ್ಗೂಡಿ ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಿ, ಶಿವರಾಜ್ ಕುಮಾರ್ ಅವರೇ ನಾಯಕತ್ವ ವಹಿಸಬೇಕಂದು ಮನವಿ ಮಾಡಿದ್ದರು. ಅದರಂತೆ ಶಿವಣ್ಣ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿದ್ದಾರೆ.

Recommended Video

ಶಿವಣ್ಣನ ಮನೆಗೆ ಎಲ್ಲಾ ಹೀರೋಗಳು ಬಂದ್ರು ಆದ್ರೆ ದರ್ಶನ್, ಸುದೀಪ್ ಬರ್ಲಿಲ್ಲ. | Filmibeat Kannada

ಡಾ.ರಾಜ್ ಕುಮಾರ್, ಅಂಬರೀಶ್ ಅವರ ನಂತರ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಿವಣ್ಣ ನಾಯಕತ್ವ ವಹಿಸಿಕೊಂಡ ಬಳಿಕ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಸಭೆ ನಡೆಸಲಾಗಿದೆ. ಶಿವರಾಜ್ ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಚಿತ್ರರಂಗದ ಗಣ್ಯರಾದ ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್, ಗಣೇಶ್, ಯಶ್, ದುನಿಯಾ ವಿಜಿ ಮತ್ತು ರಕ್ಷಿತ್ ಶೆಟ್ಟಿ ಸೇರಿದ್ದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಆದರೆ ಜಗ್ಗೇಶ್ ಗೈರು ಎದ್ದು ಕಾಣುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಸಭೆಗೆ ಗೈರಾದ ಜಗ್ಗೇಶ್

ಸಭೆಗೆ ಗೈರಾದ ಜಗ್ಗೇಶ್

ನಟ ಜಗ್ಗೇಶ್ ಸಭೆಗೆ ಗೈರಾಗಿದ್ದರು. ಸುಮಾರು 4 ದಶಗಳಿಂದ ಚಂದನವನದಲ್ಲಿ ಸಕ್ರೀಯರಾಗಿರುವ ಜಗ್ಗೇಶ್ ಸಭೆಗೆ ಹಾಜರಾಗದ ಬಗ್ಗೆ ಅನೇಕರನ್ನು ಕಾಡುತ್ತಿದೆ. ಚಿತ್ರರಂಗ ಬಗ್ಗೆ, ಸಮಸ್ಯೆಗಳ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಜಗ್ಗೇಶ್ ಚಿತ್ರರಂಗದ ಸಭೆಯಲ್ಲಿ ಯಾಕೆ ಭಾಗಿಯಾಗಿಲ್ಲ ಎನ್ನುವುದು ಅನೇಕರ ಪ್ರಶ್ನೆ. ಆದರೆ ಈ ಬಗ್ಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಜಗ್ಗೇಶ್ ಗೆ ಅಭಿಮಾನಿಯ ಪ್ರಶ್ನೆ

ಜಗ್ಗೇಶ್ ಗೆ ಅಭಿಮಾನಿಯ ಪ್ರಶ್ನೆ

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ನವರಸನಾಯಕನಿಗೆ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾರೆ. 'ಅಣ್ಣ ನೀವು ಯಾಕೆ ಹೋಗಿಲ್ಲ ಇವತ್ತು ಶಿವಣ್ಣ ಮನೆಗೆ ನಿಮಗೆ ಆಹ್ವಾನ ಬಂದಿಲ್ವ?' ಎಂದು ಕೇಳಿದ್ದಾರೆ.

ಜಗ್ಗೇಶ್ ಪ್ರತಿಕ್ರಿಯೆ

ಜಗ್ಗೇಶ್ ಪ್ರತಿಕ್ರಿಯೆ

ಗೈರಾದ ಕಾರಣ ಬಿಚ್ಚಿಟ್ಟ ಜಗ್ಗೇಶ್ "ಯಾವುದೆ ಕಾರಣಕ್ಕೂ ಕೊರೊನಾ ಔಷದ ಬರುವವರೆಗೂ ಎಲ್ಲಿಯೂ ಹೋಗುವುದಿಲ್ಲ. ಯಾರ ಭೇಟಿಯು ಮಾಡುವುದಿಲ್ಲ. ಶಿವಣ್ಣ ಪಾಪ ಕರೆದರು ನಾನೆ ಬರುವುದಿಲ್ಲ ಎಂದು ತಿಳಿಸಿದೆ. ನನ್ನ ಸಂಪೂರ್ಣ ಬೆಂಬಲ ನಮ್ಮ ಉದ್ಯಮಕ್ಕಿದೆ. ಎಲ್ಲಾ ಕಾರ್ಯಕ್ಕೆ ವೈಯಕ್ತಿಕವಾಗಿ ಹೋಗದಿದ್ದರು Online ಚರ್ಚೆ ನಡೆಯುತ್ತಿದೆ. ನೀವು ಕ್ಷೇಮವಾಗಿರಿ ಧನ್ಯವಾದ." ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ನಟ

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ನಟ

ಜಗ್ಗೇಶ್ ಸದ್ಯ ಯಾವುದೆ ಸಭೆ ಸಮಾರಂಭಗಳಿಗೆ ಹೋಗುತ್ತಿಲ್ಲ.. ಕೊರೊನಾ ಲಾಕ್ ಡೌನ್ ಆದಗಿಂದಲೂ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಜಗ್ಗೇಶ್ ಸದಾ ಏನಾದರು ಪೋಸ್ಟ್ ಮಾಡುತ್ತ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

More from Filmibeat

English summary
Actor Jaggesh reveals why he was not Attend Film industry meeting in shivaraj kumar house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X