'ರಾಘವೇಂದ್ರ ಸ್ಟೋರ್ಸ್‌'ಗೆ ನೀತಿ ಸಂಹಿತೆ ಬಿಸಿ: ಜಗ್ಗೇಶ್ ಮುಖಕ್ಕೆ ಬಿಳಿ ಹಾಳೆ ಅಂಟಿಸಿ ಹೋದ ಚುನಾವಣಾ ಅಧಿಕಾರಿಗಳು

By ಫಿಲ್ಮಿಬೀಟ್ ಡೆಸ್ಕ್

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಾಘವೇಂದ್ರ ಸ್ಟೋರ್ಸ್' ಕಳೆದ ವಾರವಷ್ಟೇ ರಿಲೀಸ್ ಆಗಿದೆ. ನವರಸ ನಾಯಕ ಜಗ್ಗೇಶ್, ಶ್ವೇತಾ ಶ್ರೀವತ್ಸವ್ ನಟಿಸಿರುವ ಈ ಸಿನಿಮಾಗೆ ಫ್ಯಾಮಿಲಿ ಆಡಿಯನ್ಸ್‌ನಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನವರಸ ನಾಯಕ ಜಗ್ಗೇಶ್ ಅವರ ಕಾಮಿಡಿಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಹಾಸ್ಯ ಮೂಲಕ ಸಂದೇಶ ನೀಡಿರುವ 'ರಾಘವೇಂದ್ರ ಸ್ಟೋರ್ಸ್' ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ಮಾತುಗಳನ್ನೇ ಆಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಸಿನಿಮಾಗೆ ಚುನಾವಣಾ ನೀತಿ ಸಂಹಿತೆ ಸಂಕಷ್ಟಕ್ಕೆ ಸಿಲುಕಿದೆ.

Jaggeshs Raghavendra Stores faces Code of Conduct officials put white paper on a poster in Davanagere

ಏಪ್ರಿಲ್ 28ರಂದು ರಿಲೀಸ್ ಆಗಿದ್ದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ರಾಜ್ಯದ ಮೂಲೆ ಮೂಲೆಯಲ್ಲೂ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ರಿಲೀಸ್ ಆದ ಕಡೆಯಲ್ಲೆಲ್ಲಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನೀತಿ ಸಂಹಿತೆ ಹಿನ್ನೆಲೆ ಜಗ್ಗೇಶ್ ಸಿನಿಮಾದ ವೇಗಕ್ಕೆ ತೊಡಕಾಗುವ ಸಾಧ್ಯತೆ ಇದೆ.

ಜಗ್ಗೇಶ್ ಮುಖಕ್ಕೆ ಬಿಳಿ ಹಾಳೆ

ನವರಸ ನಾಯಕ ಜಗ್ಗೇಶ್ ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಹಾಗೇ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದಾರೆ. ಹೀಗಾಗಿ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ.

ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ತೆರಳಿ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಅಡ್ಡಿಪಡಿಸಿದ್ದರು ಎನ್ನಲಾಗಿದೆ. ಇಂದು (ಮೇ 3) ಬೆಳಗ್ಗೆ ಚಿತ್ರಮಂದಿರಕ್ಕೆ ಸಿನಿಮಾ ಪ್ರದರ್ಶನ ಮಾಡದಂತೆ ಸೂಚನೆ ನೀಡಿದ್ದರು. ವಾದ-ವಿವಾದಗಳ ಬಳಿಕ ಮತ್ತೆ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು, ಸಿನಿಮಾದ ಪೋಸ್ಟರ್‌ನಲ್ಲಿರುವ ಜಗ್ಗೇಶ್ ಮುಖ ಬಿಳಿ ಹಾಳೆ ಅಂಟಿಸಲಾಗಿದೆ.

Jaggeshs Raghavendra Stores faces Code of Conduct officials put white paper on a poster in Davanagere

ಥಿಯೇಟರ್ ಮಾಲೀಕ ಹೇಳಿದ್ದೇನು?

ಚುನಾವಣಾ ಅಧಿಕಾರಿಗಳು 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚನೆ ನೀಡದ್ದರು. ಆದರೆ, ಚಿತ್ರಮಂದಿರದ ಮಾಲೀಕರು ಜಗ್ಗೇಶ್ ಚುನಾವಣೆಗೆ ನಿಂತಿಲ್ಲ. ಚುನಾವಣೆಯಲ್ಲಿ ಅನೇಕ ನಟರು ಪ್ರಚಾರ ಮಾಡುತ್ತಿರುವಂತೆ, ಇವರೂ ಕೂಡ ಮಾಡುತ್ತಿದ್ದಾರೆ. ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು ಅಷ್ಟೇ ಎಂದು ತಿಳಿಸಿ ಹೇಳಿದ್ದರು.

ಆ ಬಳಿಕವಷ್ಟೇ ಚುನಾವಣಾ ಆಯೋಗದ ಅಧಿಕಾರಿಗಳು 'ರಾಘವೇಂದ್ರ ಸ್ಟೋರ್ಸ್' ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ, ಚಿತ್ರಮಂದಿರದ ಮುಂದೆ ಅಂಟಿಸಿದ್ದ ಪೋಸ್ಟರ್‌ನಲ್ಲಿರುವ ಜಗ್ಗೇಶ್ ಮುಖ ಬಿಳಿ ಹಾಳೆಯನ್ನು ಅಂಟಿಸಿ ಹೋಗಿದ್ದಾರೆ.

ಜಗ್ಗೇಶ್ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ?

ನವರಸನಾಯಕ ಜಗ್ಗೇಶ್ ಸಿನಿಮಾಗೆ ಪ್ರೇಕ್ಷಕರು ಮೆಚ್ಚಿದ್ದಾರೆ. ಇನ್ನೂ ಮದುವೆಯಾಗದ 40 ವರ್ಷದ ವ್ಯಕ್ತಿ ಪರಿಸ್ಥಿತಿಯನ್ನು ಸಿನಿಮಾದಲ್ಲಿ ಹಾಸ್ಯದ ರೂಪದಲ್ಲಿ ತೆರೆಮೇಲೆ ತರಲಾಗಿದೆ. ಜಗ್ಗೇಶ್ ಮ್ಯಾನರಿಸಂ ಹಾಗೂ ನಟನೆಗೆ ಸಿನಿಪ್ರಿಯರು ಮೆಚ್ಚಿದ್ದಾರೆ.

'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದಂತೆ ಜಗ್ಗೇಶ್ ಚುನಾವಣಾ ಪ್ರಚಾರ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಎಲ್ಲೆಡೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಪೋಸ್ಟರ್‌ನಲ್ಲಿರುವ ತಮ್ಮ ಮುಖಕ್ಕೆ ಬಿಳಿ ಹಾಳೆ ಅಂಟಿಸಿರೋ ಬಗ್ಗೆ ಜಗ್ಗೇಶ್ ಹಾಗೂ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ ನೀಡಬೇಕಿದೆ.

More from Filmibeat

English summary
Jaggesh's Raghavendra Stores faces Code of Conduct officials put white paper on a poster in Davanagere, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X