For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಮಗನ ಕಾರು ಅಪಘಾತ: ನಿಜವಾಗಿ ನಡೆದಿದ್ದು ಏನು?

  |

  ನಟ ಜಗ್ಗೇಶ್ ಅವರ ಎರಡನೇ ಪುತ್ರ ಯತಿರಾಜ್‌ನ ಕಾರು ಇಂದು ಚಿಕ್ಕಬಳ್ಳಾಪುರ ಸಮೀಪ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿದೆ.

  ಅಪಘಾತ ಎಲ್ಲಿ ? ಯಾವಾಗ ? ಹೇಗಾಯ್ತು? | Filmibeat Kannada

  ಯತಿರಾಜ್ ಚಲಾಯಿಸುತ್ತಿದ್ದ ಬಿಎಂಡಬ್ಲು ಕಾರು ಸಂಪೂರ್ಣ ಜಖಂ ಆಗಿದೆ. ಯತಿರಾಜ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಯತಿರಾಜ್ ಕಾರು ಮರಕ್ಕೆ ಢಿಕ್ಕಿ ಆಯಿತೆಂದು ಮೊದಲು ಹೇಳಲಾಯಿತು ನಂತರ ಕಾರು ರಸ್ತೆ ವಿಭಜಗಕ್ಕೆ ಢಿಕ್ಕಿಯಾಗಿದೆ ಎನ್ನಲಾಯಿತು.

  ಆ ವೇಳೆಗೆ ಟ್ವೀಟ್ ಮಾಡಿದ ನಟ ಜಗ್ಗೇಶ್, ಯತಿರಾಜ್‌ಗೆ ಏನೂ ಆಗಿಲ್ಲ. ಕಾರು ಚಲಾಯಿಸುವಾಗ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂತು ಅದನ್ನು ತಪ್ಪಿಸಲು ಹೋಗಿ ಕಾರು ರಸ್ತೆ ವಿಭಜಗಕ್ಕೆ ಢಿಕ್ಕಿಯಾದ ಪರಿಣಾಮ ಕಾರು ಅಪಘಾತವಾಗಿದೆ ಯತಿರಾಜ್‌ಗೆ ಸಣ್ಣ ಗಾಯವೂ ಆಗಿಲ್ಲ ಎಂದಿದ್ದರು. ಆದರೆ ಅಲ್ಲಿ ನಿಜವಾಗಿ ನಡೆದಿದ್ದು ಏನು ಎಂಬುದನ್ನು ಚಿಕ್ಕಬಳ್ಳಾಪುರ ಪೊಲೀಸ್ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

  ''ಬೆಳಿಗ್ಗೆ 11:30 ರಿಂದ 12 ಗಂಟೆ ಸಮಯಕ್ಕೆ ಸರಿಯಾಗಿ ಚಿಕ್ಕಬಳ್ಳಾಪುರ ಬಳಿಯ ಅಗಲಗುರ್ಕಿ ಬಳಿ ಬಾಗೆಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಬಿಎಂಡಬ್ಲು ಕಾರೊಂದು ಅಪಘಾತಕ್ಕೆ ಈಡಾಗಿದೆ. ಸ್ಥಳದಲ್ಲಿ ಹಾಜರಿದ್ದ ಮೂವರು ಬೆಸ್ಕಾಂ ನೌಕರರು ಹೇಳಿದ ಪ್ರಕಾರ ಹೆದ್ದಾರಿಯಲ್ಲಿ ಬೈಕ್ ಒಂದು ಯೂಟರ್ನ್ ತೆಗೆದುಕೊಳ್ಳುತ್ತಿದ್ದು ಅದನ್ನು ತಪ್ಪಿಸಲು ಯತ್ನಿಸಿ ಬಿಎಂಡಬ್ಲು ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿ ಮೂರು ಪಲ್ಟಿಯಾಗಿದೆ'' ಎಂದಿದ್ದಾರೆ ಎಸ್‌.ಪಿ.ಮಿಥುನ್ ಕುಮಾರ್.

  ಯತಿರಾಜ್‌ಗೆ ಗಂಭೀರ ಗಾಯಗಳಾಗಿಲ್ಲ: ಮಿಥುನ್ ಕುಮಾರ್

  ಯತಿರಾಜ್‌ಗೆ ಗಂಭೀರ ಗಾಯಗಳಾಗಿಲ್ಲ: ಮಿಥುನ್ ಕುಮಾರ್

  'ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಮಾಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗ್ಗೇಶ್ ಅವರ ಎರಡನೇ ಪುತ್ರ ಯತಿರಾಜ್ ಕಾರು ಚಾಲನೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ'' ಎಂದು ಮಾಹಿತಿ ನೀಡಿದ್ದಾರೆ ಮಿಥುನ್ ಕುಮಾರ್.

  ಮದ್ಯಪಾನ ಮಾಡಿರಲಿಲ್ಲ: ಮಿಥುನ್ ಕುಮಾರ್

  ಮದ್ಯಪಾನ ಮಾಡಿರಲಿಲ್ಲ: ಮಿಥುನ್ ಕುಮಾರ್

  ಯತಿರಾಜ್ ಮದ್ಯಪಾನ ಮಾಡಿದ್ದರೆ ಅಥವಾ ಇನ್ನಾವುದೇ ನಶೆಯುಕ್ತ ಪದಾರ್ಥ ಸೇವಿಸಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಿಥುನ್ ಕುಮಾರ್ ಆ ರೀತಿಯ ಯಾವುದೇ ಅಂಶ ಈವರೆಗೆ ಪತ್ತೆಯಾಗಿಲ್ಲ ಎಂದಿದ್ದಾರೆ. ಯತಿರಾಜ್‌ಗೆ ಮುಖದ ಮೇಲೆ ಹಾಗೂ ಕಾಲಿಗೆ ಗಾಯವಾಗಿದೆ ಹಾಗೂ ಅವರಿಗೆ ತಲೆಯಲ್ಲಿ ಗುಯ್‌ಗುಟ್ಟುವ ಅನುಭವ ಆಗುತ್ತಿದೆಯಂತೆ ಹಾಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕಳಿಸಲಾಗಿದೆ. ಅವರೊಟ್ಟಿಗೆ ನಮ್ಮ ಪೊಲೀಸ್ ಸಿಬ್ಬಂದಿಯನ್ನು ಸಹ ಕಳಿಸಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ ಮಿಥುನ್ ಕುಮಾರ್.

  ಪ್ರತ್ಯಕ್ಷದರ್ಶಿಗಳಿಂದ ದೂರು ಸ್ವೀಕಾರ

  ಪ್ರತ್ಯಕ್ಷದರ್ಶಿಗಳಿಂದ ದೂರು ಸ್ವೀಕಾರ

  ''ಘಟನೆಯ ಪ್ರತ್ಯಕ್ಷದರ್ಶಿಗಳಿಂದ ನಾವು ದೂರು ಸ್ವೀಕರಿಸಿಕೊಂಡಿದ್ದು ಐಪಿಸಿ ಸೆಕ್ಷನ್ 207 ಅಡಿಯಲ್ಲಿ ಅತಿವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ, ಪಾದಾಚಾರಿ ಮಾರ್ಗದ ಮೇಲೆ ಚಾಲನೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಕರಣದ ತನಿಖೆ ನಡೆಸಲಿದ್ದೇವೆ ಎಂದಿದ್ದಾರೆ ಎಸ್‌ಪಿ ಮಿಥುನ್ ಕುಮಾರ್.

  ವಿಡಿಯೋ ಒಂದು ವೈರಲ್ ಆಗಿದೆ

  ವಿಡಿಯೋ ಒಂದು ವೈರಲ್ ಆಗಿದೆ

  ಪ್ರಕರಣ ನಡೆದ ಸಂದರ್ಭ ಮಾಡಲಾಗಿರುವ ವಿಡಿಯೋ ಒಂದು ಇದೇ ಸಂದರ್ಭದಲ್ಲಿ ವೈರಲ್ ಆಗಿದ್ದು ವಿಡಿಯೋದಲ್ಲಿ ಯತಿರಾಜ್ ಬಹಳ ಸುಸ್ತಾಗಿ ತಮ್ಮ ಫೋನಿನಿಂದ ಸಂಬಂಧಿಯೊಬ್ಬರಿಗೆ ಕರೆ ಮಾಡುವಂತೆ ವ್ಯಕ್ತಿಯೊಬ್ಬರಿಗೆ ಹೇಳುತ್ತಿದ್ದಾರೆ. ಜನರ ಸಹಾಯದೊಂದಿಗೆ ನೀರು ಕುಡಿದು ತುಸು ದೂರ ನಡೆದ ಯತಿರಾಜ್ ನಂತರ ಕುಸಿದು ಬೀಳುತ್ತಾರೆ. ದೊಡ್ಡ ಗಾಯಗಳೇನೂ ಯತಿರಾಜ್ ದೇಹದ ಮೇಲೆ ಕಾಣುವುದಿಲ್ಲವಾದರೂ ಅವರು ಸುಸ್ತಾಗಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಗೊತ್ತಾಗುತ್ತಿದೆ.

  English summary
  Jaggesh's second son Yathiraj's car met with an accident near Chikkaballaura today. Jaggesh tweeted His son met with accident because he tried to avoid street dog which came in front of Car but police SP explains what really happened.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X