'ಈತನನ್ನ ಅಂಬಿ ಜಾಗದಲ್ಲಿ ಕೂರಿಸಿ' ಎಂದು ಕೇಳಿಕೊಂಡ ಜಗ್ಗೇಶ್

Recommended Video

Ambareesh: ಅಂಬಿ ಉತ್ತರಾಧಿಕಾರಿ ಇವರಾಗಬೇಕಂತೆ! | FILMIBEAT KANNADA

ರೆಬೆಲ್ ಸ್ಟಾರ್ ಅಂಬರೀಶ್ ಇದ್ದಾಗ ಅಂಬಿ ನಂತರ ಯಾರೂ ಎಂದು ಯಾರೊಬ್ಬರು ಕೂಡ ಯೋಚನೆ ಮಾಡಿರಲಿಲ್ಲ. ಆದ್ರೀಗ, ಅಂಬಿ ಇಲ್ಲದ ಮನೆಯನ್ನ ನೆನಸಿಕೊಳ್ಳುವುದು ಕಷ್ಟವಾಗ್ತಿದೆ.

ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಅಂಬರೀಶ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಹಲವು ಖ್ಯಾತ ನಾಮರ ಹೆಸರುಗಳು ಚರ್ಚೆಯಾಗ್ತಿರುವುದನ್ನ ಕೂಡ ಗಮನಿಸಬಹುದು.

ಅರ್ಥಾತ್ ಅಂಬರೀಶ್ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದರು. ಈಗ ಆ ಸ್ಥಾನವನ್ನ ಯಾರು ಅಲಂಕರಿಸಲಿದ್ದಾರೆ ಎಂಬುದು ಅಷ್ಟೇ ಕುತೂಹಲ ಮೂಡಿಸಿದೆ. ಈ ಮಧ್ಯೆ ಕರ್ನಾಟಕ ಜನರಲ್ಲಿ ನವರಸ ನಾಯಕ ಜಗ್ಗೇಶ್ ಅವರು ಒಂದು ಮನವಿ ಮಾಡಿಕೊಂಡಿದ್ದಾರೆ. ಅಂಬರೀಶ್ ಅವರ ಮೇಲಿನ ಗೌರವಕ್ಕೆ ಬೆಲೆ ಕೊಡುವುದಾದರೇ ಇವರನ್ನ ಅಂಬಿ ಜಾಗಕ್ಕೆ ಕೂರಿಸಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ.....

ಅಪ್ಪನ ಜಾಗಕ್ಕೆ ಮಗನನ್ನ ತನ್ನಿ

ಅಪ್ಪನ ಜಾಗಕ್ಕೆ ಮಗನನ್ನ ತನ್ನಿ

'ಅಪ್ಪನ ಜಾಗಕ್ಕೆ ಮಗನನ್ನ ತನ್ನಿ' ಎಂದು ನಾಡಿನ ಜನತೆಗೆ ನಟ ಜಗ್ಗೇಶ್ ಅವರು ಮನವಿ ಮಾಡಿಕೊಂಡಿದ್ದಾರೆ. ಅಂಬರೀಶ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಜಗ್ಗೇಶ್ ''ನೀವು ನಿಜವಾಗಲು ಅಂಬರೀಶ್ ಅವರ ಮೇಲೆ ಅಭಿಮಾನವಿಟ್ಟಿದ್ದರೇ ಅವರ ಜಾಗಕ್ಕೆ ಅಭಿಷೇಕ್ ಅವರನ್ನ ತನ್ನಿ'' ಎಂದು ಕೇಳಿಕೊಂಡಿದ್ದಾರೆ.

ಅಂಬಿಯಂತೆ ಅಭಿಯನ್ನ ಬೆಳಸಿ

ಅಂಬಿಯಂತೆ ಅಭಿಯನ್ನ ಬೆಳಸಿ

''ಅಂಬರೀಶ್ ಅವರನ್ನ ಹೇಗೆ ಬೆಳಸಿದರೋ ಅದೇ ರೀತಿ ಅವರ ಮಗನನ್ನ ಬೆಳಸಬೇಕು. ಅಭಿ ಸಿನಿಮಾವನ್ನ ಗೆಲ್ಲಿಸಬೇಕು. ಅವರ ತಂದೆಯ ಹಾಗೆ ಮಗನನ್ನು ಕರೆದುಕೊಂಡು ಹೋಗಬೇಕು'' ಎಂದು ನಾಡಿನ ಜನರಲ್ಲಿ ಜಗ್ಗೇಶ್ ವಿನಂತಿಸಿಕೊಂಡಿದ್ದಾರೆ.

ಕಲಾಬಂಧುಗಳಿಗೊಂದು ಸಲಹೆ

ಕಲಾಬಂಧುಗಳಿಗೊಂದು ಸಲಹೆ

''ಕಲಾವಿದರಿಗೆ ಸಿನಿಮಾ ಮಾತ್ರ ಮುಖ್ಯವಲ್ಲ. ಅದರಿಂದ ಹೊರಗಡೆ ಭಾವನೆ ಮತ್ತು ಭಾವನಾತ್ಮಕ ಸಂಬಂಧಗಳು ಮುಖ್ಯ. ನಿಮ್ಮಲ್ಲಿರುವ ಅಹಂಗಳನ್ನ ತೆಗೆದು ಹಾಕಿ, ಇಲ್ಲಿ ಯಾರಿಗೂ ಯಾರು ಪೈಪೋಟಿ ಬೇಡ. ಎಲ್ಲರೂ ಒಂದೇ, ಒಂದೇ ತಾಯಿಯ ಮಕ್ಕಳು ಇದ್ದಂತೆ. ಈ ಭಾವನೆಯನ್ನ ಮುಂದುವರಿಸಿಕೊಂಡು ಹೋಗಿ'' ಎಂದು ಜಗ್ಗೇಶ್ ಹೇಳಿದ್ದಾರೆ.

ಇಂಡಸ್ಟ್ರಿಗೆ 'ಬಾಸ್' ಯಾರು.?

ಇಂಡಸ್ಟ್ರಿಗೆ 'ಬಾಸ್' ಯಾರು.?

ಹಾಗಿದ್ರೆ, ಕನ್ನಡ ಚಿತ್ರರಂಗದಲ್ಲಿ ಅಂಬಿಯಂತೆ ನಿರ್ಣಯಗಳು, ನಿರ್ಧಾರಗಳು ತೆಗೆದುಕೊಳ್ಳುವುದು ಯಾರು ಎಂಬ ಕುತೂಹಲಕ್ಕೆ ಉತ್ತರವಿಲ್ಲ. ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ದೊಡ್ಡಣ್ಣ, ಶ್ರೀನಾಥ್, ಅಶೋಕ್ ಅಂತಹ ಹಿರಿಯ ನಟರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.

More from Filmibeat

English summary
Let Abhishek get the same respect, love and encouragement like Ambareesh said kannada actor Jaggesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X