For Quick Alerts
  ALLOW NOTIFICATIONS  
  For Daily Alerts

  ಬರಗೂರು ರಾಮಚಂದ್ರರಿಂದ ಕುವೆಂಪುಗೆ ಅವಮಾನ: ಜಗ್ಗೇಶ್ ಆರೋಪ

  |

  ರಾಜ್ಯದಲ್ಲಿ ಶಾಲಾ ಪಠ್ಯ ಪರಿಷ್ಕರಣೆ ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲಿ ಚರ್ಚೆಗೆ ಜಿಗಿದಿದ್ದಾರೆ ನಟ, ರಾಜಕಾರಣಿ ಜಗ್ಗೇಶ್.

  ಯೂಟ್ಯೂಬ್ ಚಾನೆಲ್‌ ಒಂದರ ಮೂಲಕ ಮಾತನಾಡಿರುವ ಜಗ್ಗೇಶ್, 'ಬರಗೂರು ರಾಮಚಂದ್ರಪ್ಪ, ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆ'' ಎಂದಿದ್ದಾರೆ. ಇದಕ್ಕೆ ಸಾಕ್ಷ್ಯಗಳು ಇವೆ ಎಂದು ಹೇಳಿದ್ದಾರೆ.

  ''ಕುವೆಂಪು ಅವರಿಗೆ ನಮ್ಮ ಪಕ್ಷ (ಬಿಜೆಪಿ) ಅಪಮಾನ ಮಾಡಿದೆ ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಹಲವು ಸಂದೇಶಗಳು ನನಗೆ ಬರುತ್ತಲೇ ಇದ್ದವು. ಹಾಗಾಗಿ ಈಗ ಅವುಗಳಿಗೆ ಉತ್ತರ ನೀಡುತ್ತಿದ್ದೇನೆ. ಕುವೆಂಪು ಅವರಿಗೆ ಬರಗೂರು ರಾಮಚಂದ್ರಪ್ಪನವರಿಗೆ ಅವಮಾನ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಸಮೇತ ನಾನು ತೋರಿಸುತ್ತೇನೆ'' ಎಂದು ಕೆಲವು ದಾಖಲೆಗಳನ್ನು ಜಗ್ಗೇಶ್ ತೋರಿಸಿದ್ದಾರೆ.

  ರಾಜ್ಯ ಸಭೆಗೆ ಟಿಕೆಟ್ ಘೋಷಣೆ: ನವರಸ ನಾಯಕನಿಗೆ ಬಂಪರ್ ಆಫರ್!ರಾಜ್ಯ ಸಭೆಗೆ ಟಿಕೆಟ್ ಘೋಷಣೆ: ನವರಸ ನಾಯಕನಿಗೆ ಬಂಪರ್ ಆಫರ್!

  ''ಎಂಟನೇ ತರಗತಿಗೆ ಈ ಹಿಂದೆ ಇದ್ದ ಕುವೆಂಪು ಅವರ ಒಂದು ಕವಿತೆ, 'ಅಜ್ಜಯ್ಯನ ಅಭ್ಯಂಜನ' ಎಂಬ ಪಾಠ ತೆಗೆದು ಹಾಕಿ ಕುವೆಂಪು ಅವರಿಗೆ ಬರಗೂರು ರಾಮಚಂದ್ರಪ್ಪನವರು ಅಪಮಾನ ಮಾಡಿದ್ದಾರೆ. ಅಜ್ಜಯ್ಯನ ಅಭ್ಯಂಜನ ಪಾಠ ತೆಗೆದು ಯು.ಆರ್.ಅನಂತಮೂರ್ತಿಯವರ ತಾಯಿ ಪಾಠ ಸೇರಿಸಲಾಗಿದೆ. ಇಂದು ವಿಷಯ ಗೊತ್ತಿಲ್ಲದೆ ಹಲವರು ಸಾಮಾಜಿಕ ಜಾಲತಾಣದಲ್ಲಿ ತೋಚಿದಂತೆ ಮಾತನಾಡುತ್ತಿದ್ದಾರೆ, ಅಂಥಹವರು ವಿಷಯ ಅರಿತು ಮಾತನಾಡಬೇಕು'' ಎಂದಿದ್ದಾರೆ ಜಗ್ಗೇಶ್.

  ಆರ್ಯರು-ದ್ರಾವಿಡರ ಬಗ್ಗೆ ಪಾಠ

  ಆರ್ಯರು-ದ್ರಾವಿಡರ ಬಗ್ಗೆ ಪಾಠ

  ''ಎಂಟನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಆರ್ಯರು ಮಧ್ಯ ಏಷಿಯಾದಿಂದ ಬಂದವರು. ದ್ರಾವಿಡರು ದಕ್ಷಿಣ ಭಾರತೀಯರು ಎಂದು ನಮ್ಮ ದೇಶವನ್ನು ಇಭ್ಭಾಗ ಮಾಡುವ, ನಮ್ಮ ನಡುವೆ ಪ್ರಾದೇಶಿಕತೆ ಭಿತ್ತುವಂಥಹಾ, ಜಗಳ ಹಚ್ಚುವಂಥಹಾ ಪಾಠಗಳನ್ನು, ವಿಶ್ವವನ್ನು ಅರಿಯಬೇಕಾದ ಪುಟ್ಟ ಕಂದಮ್ಮಗಳಿಗೆ ಇಂಥಹಾ ವಿಷಬೀಜವನ್ನು ತಿನ್ನಿಸುವ ಪ್ರಯತ್ನ ಮಾಡಿದ್ದಾರೆ ಬರಗೂರು ರಾಮಚಂದ್ರಪ್ಪ'' ಎಂದಿದ್ದಾರೆ ಜಗ್ಗೇಶ್.

  ಹೊಸ ಕಾರು ಖರೀದಿಸಿ, ಅಪಮಾನ ಎದುರಿಸಿದ್ದ ದಿನಗಳ ನೆನೆದ ಜಗ್ಗೇಶ್ಹೊಸ ಕಾರು ಖರೀದಿಸಿ, ಅಪಮಾನ ಎದುರಿಸಿದ್ದ ದಿನಗಳ ನೆನೆದ ಜಗ್ಗೇಶ್

  ದೇಶವನ್ನು ಒಡೆಯುವ ಕತೆಗಳು ಬೇಕಾ: ಜಗ್ಗೇಶ್

  ದೇಶವನ್ನು ಒಡೆಯುವ ಕತೆಗಳು ಬೇಕಾ: ಜಗ್ಗೇಶ್

  ''ನಾನೂ ಸಹ ತಂದೆ, ತಾತ ಎರಡೂ ಆಗಿದ್ದೇನೆ. ಪೋಷಕರಿಗೆ ನನ್ನ ನೇರ ಪ್ರಶ್ನೆಯೆಂದರೆ. ದೇಶಭಕ್ತಿ ಸೂಚಿಸುವಂಥಹಾ ಬಿಜೆಪಿ ಸೇರಿಸಿರುವ ಕುವೆಂಪು ಅವರ ಕವನ, ಕತೆಗಳು ನಿಮ್ಮ ಮಕ್ಕಳಿಗೆ ಬೇಕೋ ಅಥವಾ ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ ಸೇರಿಸಿರುವ ದೇಶವನ್ನು ಒಡೆಯುವ ಕತೆಗಳು ನಿಮ್ಮ ಮಕ್ಕಳಿಗೆ ಬೇಕೋ? ನೀವೇ ನಿರ್ಧರಿಸಿ'' ಎಂದಿದ್ದಾರೆ ಜಗ್ಗೇಶ್.

  ನನಗೂ ಔರಂಗಾಜೇಬನ ಪಾಠವನ್ನೇ ಓದಿಸಲಾಗಿದೆ: ಜಗ್ಗೇಶ್

  ನನಗೂ ಔರಂಗಾಜೇಬನ ಪಾಠವನ್ನೇ ಓದಿಸಲಾಗಿದೆ: ಜಗ್ಗೇಶ್

  ''ಆರಂಭದಿಂದಲೂ ಶಿಕ್ಷಣ ಮಂತ್ರಿಗಳನ್ನಾಗಿ ಮುಸಲ್ಮಾನರನ್ನೇ ನೇಮಿಸಿಕೊಂಡು ಬರಲಾಗಿದೆ. ಅವರು ಅವರದ್ದೇ ಆದ ಪಠ್ಯವನ್ನು ಮಕ್ಕಳಿಗೆ ಓದಿಸುತ್ತಾ ಬಂದಿದ್ದಾರೆ. ನನಗೂ ಸಹ ಬಾಲ್ಯದಿಂದ ಔರಂಗಾಜೇಬ ದಾಳಿ ಮಾಡಿದ, ಅದು ಮಾಡಿ, ಇದು ಮಾಡಿದ ಎಂಬುದೇ ಗೊತ್ತು. ನಾನು ದೊಡ್ಡವನಾಗುವ ವರೆಗೆ ಶಂಕರಾಚಾರ್ಯ, ಮಧ್ವಾಚಾರ್ಯಗಳ ಬಗ್ಗೆ ಗೊತ್ತಿರಲಿಲ್ಲ. ಬ್ರಹ್ಮಸೂತ್ರ, ವೇದ, ಉಪನಿಷತ್ತುಗಳನ್ನು ನಾನು ತಿಳಿದುಕೊಂಡಿದ್ದು ನನ್ನ ನಲವತ್ತನೇ ವಯಸ್ಸಿನಲ್ಲಿ'' ಎಂದಿದ್ದಾರೆ ಜಗ್ಗೇಶ್.

  ದೇಶದ ಇತಿಹಾಸ ತಿಳಿದುಕೊಳ್ಳಲಿ, ಪಾಶ್ಚಾತ್ಯರದ್ದಲ್ಲ: ಜಗ್ಗೇಶ್

  ದೇಶದ ಇತಿಹಾಸ ತಿಳಿದುಕೊಳ್ಳಲಿ, ಪಾಶ್ಚಾತ್ಯರದ್ದಲ್ಲ: ಜಗ್ಗೇಶ್

  ''ನಮ್ಮ ಮಕ್ಕಳು ಮೊದಲು ಭಾರತದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಪಾಶ್ಚಾತ್ಯರ ಇತಿಹಾಸದ ಬಗ್ಗೆ ಅಲ್ಲ. ಅವರ್ಯಾರೋ ಬಂದು ಇಲ್ಲಿ ದರೋಡೆ ಮಾಡಿದರು, ನಮ್ಮ ಮೇಲೆ ದೌರ್ಜನ್ಯ ಮಾಡಿದರು ಎಂಬ ಪಾಠಗಳು ನಮ್ಮ ಮಕ್ಕಳಿಗೆ ಬೇಕಾಗಿಲ್ಲ'' ಎಂದ ಜಗ್ಗೇಶ್, ಬರಗೂರು ರಾಮಚಂದ್ರಪ್ಪ ಪರಿಷ್ಕೃತ ಪಠ್ಯವನ್ನು ಎಲ್ಲ ಪೋಷಕರು ವಿರೋಧಿಸಬೇಕು, ಒಂದೊಮ್ಮೆ ಅವರ ಪಠ್ಯವೇ ಅಧಿಕೃತವಾದರೆ, ನಮ್ಮ ಇತಿಹಾಸವನ್ನು ನಾವೇ ನಮ್ಮ ಮಕ್ಕಳಿಗೆ ಹೇಳಿಕೊಡಬೇಕು'' ಎಂದಿದ್ದಾರೆ ಜಗ್ಗೇಶ್.

  ನಮ್ಮ ದೇಶದ ವಿಷಯಗಳು ಓದಲು ಸಿಗಬೇಕು: ಜಗ್ಗೇಶ್

  ನಮ್ಮ ದೇಶದ ವಿಷಯಗಳು ಓದಲು ಸಿಗಬೇಕು: ಜಗ್ಗೇಶ್

  ''ಇನ್ನು ಒಂದು ವರ್ಷದಲ್ಲಿ ಚುನಾವಣೆ ಬರುತ್ತಿದೆ ಹಾಗಾಗಿ ಈಗ ಪಠ್ಯ ಪರಿಷ್ಕರಣೆ ಗಲಾಟೆ ಎಬ್ಬಿಸಲಾಗುತ್ತಿದೆ. ಯಾವ ವ್ಯಕ್ತಿಯ ಬಳಿ ವಿಷಯವಿಲ್ಲವೊ ಆತ ವಿತಂಡ ಮಾಡುತ್ತಾನೆ. ಈ ಹಿಂದೆ ಎಷ್ಟೋ ಪರಿಷ್ಕರಣೆಗಳಾಗಿವೆ, ಆಗೆಲ್ಲ ಎಷ್ಟೆಷ್ಟೊ ಅನ್ಯಾಯಗಳಾಗಿವೆ ಅದನ್ನೆಲ್ಲ ಅವರು ಸಹಿಸಿಕೊಂಡರು ಏಕೆಂದರೆ ಆಗ ಅವರದ್ದೇ ಸರ್ಕಾರವಿತ್ತು. ಅವರು (ವಿಪಕ್ಷ) ತಪ್ಪು ಮೊಂಡತನ ಮಾಡಿದರು. ನಾವು ಸರಿಯಾದ ಮೊಂಡುತನ ಮಾಡುತ್ತಿದ್ದೇವೆ. ನಮ್ಮ ಮಕ್ಕಳಿಗೆ ನಮ್ಮ ನಾಡಿನ, ನಮ್ಮ ದೇಶದ ವಿಷಯಗಳು ಓದಲು ಸಿಗಬೇಕೆಂಬುದೇ ನಮ್ಮ ಹಠ'' ಎಂದಿದ್ದಾರೆ ಜಗ್ಗೇಶ್. ಅಂದಹಾಗೆ ಜಗ್ಗೇಶ್‌ಗೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ನಾಳೆ (ಜೂನ್ 10) ಮತದಾನ ನಡೆಯಲಿದೆ.

  English summary
  Actor, Politician Jaggesh said Baraguru Ramachandrappa insulted Kuvempu by removing some of his poems and lessons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X