twitter
    For Quick Alerts
    ALLOW NOTIFICATIONS  
    For Daily Alerts

    ತಾವೇ ನಟಿಸಿದ ಈ ಹಿಟ್ ಚಿತ್ರವನ್ನು ಜಗ್ಗೇಶ್ ನೋಡುವುದಿಲ್ಲವಂತೆ: ಯಾಕೆ ಗೊತ್ತೇ?

    |

    ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ನಟ ಜಗ್ಗೇಶ್, ರಾಜ್ ಕಿಶೋರ್ ನಿರ್ದೇಶನದ 'ಭಂಡ ನನ್ನ ಗಂಡ' ಚಿತ್ರದ ಮೂಲಕ 1992ರಲ್ಲಿ ನಾಯಕನಟನಾಗಿ ಪರಿಚಯವಾದರು. ಅದರ ಬಳಿಕ ಅವರಿಗೆ ನಾಯಕನಾಗಿ ನಟಿಸುವ ಅವಕಾಶಗಳು ಸಿಗಲು ಆರಂಭಿಸಿದವು. ತಮ್ಮದೇ ವಿಶಿಷ್ಟ ಶೈಲಿಯ ಡೈಲಾಗ್ ಡೆಲಿವರಿ ಮತ್ತು ಆಂಗಿಕ ಅಭಿನಯದಿಂದ ಗುರುತಿಸಿಕೊಂಡವರು ಜಗ್ಗೇಶ್.

    Recommended Video

    ಚದುರಂಗದಲ್ಲಿ ಚಾಲೆಂಜ್ ಮಾಡಿಕೊಂಡ ಧ್ರುವ ಬ್ರದರ್ಸ್..! | Dhruva Sarja | Chiranjeevi Sarja

    ಉಪೇಂದ್ರ ನಿರ್ದೇಶನದ 'ತರ್ಲೆ ನನ್ಮಗ' ಚಿತ್ರ ಭರ್ಜರಿ ಹಿಟ್ ಆದ ನಂತರ ಜಗ್ಗೇಶ್ ಮತ್ತೆ ತಿರುಗಿನೋಡುವ ಪ್ರಮೇಯವೇ ಉದ್ಭವಿಸಲಿಲ್ಲ. ನಂತರ ಅವರಿಗೆ ಆರಂಭದಲ್ಲಿ ಯಶಸ್ಸು ತಂದುಕೊಟ್ಟ ಚಿತ್ರಗಳಲ್ಲಿ 'ಸರ್ವರ್ ಸೋಮಣ್ಣ' ಚಿತ್ರವೂ ಒಂದು. 1993ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಕೆ. ವಾಸು ನಿರ್ದೇಶಿಸಿದ್ದರು. ಆಗಾಗ್ಗೆ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿರುತ್ತದೆ. ಆದರೆ ಈ ಚಿತ್ರವನ್ನು ಜಗ್ಗೇಶ್ ಮತ್ತೆ ನೋಡದಿರಲು ತೀರ್ಮಾನಿಸಿದ್ದರು. ಕಾರಣ ಇದು...

    ತಮಿಳಿನ ರೀಮೇಕ್

    ತಮಿಳಿನ ರೀಮೇಕ್

    ಸರ್ವರ್ ಸೋಮಣ್ಣ ಚಿತ್ರವನ್ನು ಕನ್ನಡದಲ್ಲಿ ಕೆ. ವಾಸು ನಿರ್ದೇಶಿಸಿದ್ದರು. ಆದರೆ ಇದು 1964ರಲ್ಲಿ ತೆರೆಕಂಡಿದ್ದ 'ಸರ್ವರ್ ಸುಂದರಂ' ಚಿತ್ರದ ರೀಮೇಕ್. ತಮಿಳಿನಲ್ಲಿ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶಿಸಿದ್ದರು. 'ಸರ್ವರ್ ಸೋಮಣ್ಣ' ನಟಿ ರಂಭಾ ಅವರ ಮೊದಲ ಚಿತ್ರ ಕೂಡ.

    ಕೋಮಲ್ ಮದುವೆಯಾದ 20 ದಿನದಲ್ಲಿ ಈ ಘಟನೆ ನಡೆದಿತ್ತು: ಜಗ್ಗೇಶ್ ಹಂಚಿಕೊಂಡ ನೋವಿನ ಕಥೆಕೋಮಲ್ ಮದುವೆಯಾದ 20 ದಿನದಲ್ಲಿ ಈ ಘಟನೆ ನಡೆದಿತ್ತು: ಜಗ್ಗೇಶ್ ಹಂಚಿಕೊಂಡ ನೋವಿನ ಕಥೆ

    ಪಂಡರೀಬಾಯಿ ತಾಯಿಯ ಪಾತ್ರ

    ಪಂಡರೀಬಾಯಿ ತಾಯಿಯ ಪಾತ್ರ

    ಈ ಚಿತ್ರದಲ್ಲಿ ಜಗ್ಗೇಶ್ ಅವರ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಪಂಡರೀಬಾಯಿ ನಟಿಸಿದ್ದರು. ಚಿತ್ರರಂಗದ ಅನೇಕ ಹೀರೋಗಳಿಗೆ ನಾಯಕಿಯಾಗಿ ನಟಿಸಿದ್ದ ಪಂಡರೀಬಾಯಿ, ನಂತರ ಅಮ್ಮನ ಪಾತ್ರಗಳಲ್ಲಿ ನಟಿಸಿದ್ದರು. ಹಾಗೆಯೇ ಈ ಚಿತ್ರದಲ್ಲಿ ಪಂಡರೀಬಾಯಿ ತಮಗೆ ಅಮ್ಮನಾಗಿ ಅಭಿನಯಿಸಿದ್ದು ತಮ್ಮ ಸೌಭಾಗ್ಯ ಎಂದು ಜಗ್ಗೇಶ್ ತಿಳಿಸಿದ್ದಾರೆ.

    ತಾಯಿ ಸಾಯುವ ದೃಶ್ಯ

    ತಾಯಿ ಸಾಯುವ ದೃಶ್ಯ

    ಸರ್ವರ್ ಆಗಿದ್ದ ಸೋಮಣ್ಣ ನಟನಾಗಿ ಹೆಸರು ಮಾಡುವ ಕಥೆಯಿತು. ಮಗ ನಟನಾದ ಖುಷಿಯನ್ನು ನೋಡಿ ಸಂಭ್ರಮಿಸುವ ತಾಯಿ ಬಳಿಕ ಅನಾರೋಗ್ಯದಿಂದ ಸಾಯುವ ದೃಶ್ಯವಿದೆ. ಇದು ತಮ್ಮ ಬದುಕಿನಲ್ಲಿ ಕಾಕತಾಳೀಯ ಘಟನೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

    ಅಣ್ಣಾವ್ರ ಮೊದಲ ಭೇಟಿ ಹೇಗಿತ್ತು?: ಜಗ್ಗೇಶ್ ಹಂಚಿಕೊಂಡ ಸವಿ ನೆನಪುಅಣ್ಣಾವ್ರ ಮೊದಲ ಭೇಟಿ ಹೇಗಿತ್ತು?: ಜಗ್ಗೇಶ್ ಹಂಚಿಕೊಂಡ ಸವಿ ನೆನಪು

    ಅರ್ಜುನ್ ಅಭಿಮನ್ಯು ಸಿನಿಮಾ ವೇಳೆ

    ಅರ್ಜುನ್ ಅಭಿಮನ್ಯು ಸಿನಿಮಾ ವೇಳೆ

    ಏಕೆಂದರೆ ಜಗ್ಗೇಶ್ ನಟನಾಗಿ ಬೆಳೆಯುವುದನ್ನು ನೋಡಿ ಖುಷಿ ಪಟ್ಟ ತಾಯಿ ಕೂಡ ಅವರಿಂದ ದೂರವಾದರು. ಟೈಗರ್ ಪ್ರಭಾಕರ್ ಜತೆ 'ಅರ್ಜುನ್ ಅಭಿಮನ್ಯು' ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ನೋವನ್ನು ಅನುಭವಿಸಿದ್ದರು.

    ಸರ್ವರ್ ಸೋಮಣ್ಣ ನೋಡೊಲ್ಲ

    ಸರ್ವರ್ ಸೋಮಣ್ಣ ನೋಡೊಲ್ಲ

    ಪಂಡರೀಬಾಯಿ ಅವರು ನಿಜ ಜೀವನದಲ್ಲಿಯೂ ನನಗೆ ಅಮ್ಮನಂತೆಯೇ ಕಾಣುತ್ತಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ. 'ಸರ್ವರ್ ಸೋಮಣ್ಣ' ಚಿತ್ರದ ದೃಶ್ಯಕ್ಕೂ, ತಮ್ಮ ಬದುಕಿನ ನಿಜ ಘಟನೆಗೂ ಸಂಬಂಧವಿದೆ. ಈ ನೋವಿನ ಕಾರಣಕ್ಕಾಗಿಯೇ ಎಲ್ಲರನ್ನೂ ನಗಿಸಿದ 'ಸರ್ವರ್ ಸೋಮಣ್ಣ' ಚಿತ್ರವನ್ನು ತಾವು ನೋಡುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.

    ಡಾ. ರಾಜ್‌ ಕುಮಾರ್ ಅಗಲಿದ ದಿನವನ್ನು ನೆನಪಿಸಿಕೊಂಡು ಭಾವುಕರಾದ ಜಗ್ಗೇಶ್ಡಾ. ರಾಜ್‌ ಕುಮಾರ್ ಅಗಲಿದ ದಿನವನ್ನು ನೆನಪಿಸಿಕೊಂಡು ಭಾವುಕರಾದ ಜಗ್ಗೇಶ್

    ಮದುವೆಯಾಗಿ 20 ದಿನದಲ್ಲಿ...

    ಮದುವೆಯಾಗಿ 20 ದಿನದಲ್ಲಿ...

    ತಾಯಂದಿರ ದಿನದ ಸಂದರ್ಭದಲ್ಲಿ ಭಾನುವಾರ ಜಗ್ಗೇಶ್ ಅಮ್ಮನನ್ನು ನೆನಪಿಸಿಕೊಂಡಿದ್ದರು. ಅಮ್ಮನ ಆಸೆಯಂತೆ ತಮ್ಮ ಕೋಮಲ್‌ಗೆ ತರಾತುರಿಯಲ್ಲಿ ಮದುವೆ ಮಾಡಿಸಿದ್ದು, ಮದುವೆ ಮಾಡಿದ 20 ದಿನದಲ್ಲಿಯೇ ತಾಯಿ ತಮ್ಮನ್ನು ಅಗಲಿದ್ದರು ಎಂಬ ಕಹಿ ನೆನಪನ್ನು ಅವರು ಹಂಚಿಕೊಂಡಿದ್ದರು.

    English summary
    Actor Jaggesh said that, he do not want to watch his movie Server Somanna for this reason.
    Tuesday, May 12, 2020, 17:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X