twitter
    For Quick Alerts
    ALLOW NOTIFICATIONS  
    For Daily Alerts

    ಇನ್ನು ಅಪರಿಚಿತರು ಬಂದರೆ ನಂಬುವುದಿಲ್ಲ: ಜಗ್ಗೇಶ್ ಹೀಗೆ ಹೇಳಿದ್ದೇಕೆ?

    |

    ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು. ಚಿತ್ರರಂಗದ ಕೆಲವು ಅಪರೂಪದ ಸಂಗತಿಗಳನ್ನು, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅನೇಕ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಜತೆಗೆ ತಮ್ಮ ರಾಜಕೀಯ ನಿಲುವಿನ ಕಾರಣಕ್ಕೆ ಕೆಲವು ಪೋಸ್ಟ್‌ಗಳಿಂದ ವಿವಾದದಲ್ಲಿಯೂ ಇರುತ್ತಾರೆ.

    Recommended Video

    ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

    ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜಗ್ಗೇಶ್ ಅವರ ಬಳಿ ಸಹಾಯ ಪಡೆದವರು ಕೂಡ ಹಲವರಿದ್ದಾರೆ. ಕಷ್ಟ ಎಂದು ಹೇಳಿಕೊಂಡವರಿಗೆ ಮಾನಸಿಕ ಸ್ಥೈರ್ಯ ತುಂಬುವ, ಬುದ್ಧಿ ಹೇಳುವ ತಮ್ಮ ಕೈಲಾದ ರೀತಿ ಸಹಾಯ ಮಾಡುವ ಪರೋಪಕಾರಿ ಗುಣವೂ ಅವರಲ್ಲಿದೆ. ಆದರೆ ಇನ್ನು ಮುಂದೆ ಹೀಗೆ ಸಹಾಯ ಕೇಳಿ ಬರುವ ಅಪರಿಚಿತರಿಗೆ ನೆರವು ನೀಡುವುದಿಲ್ಲ ಎಂದು ಜಗ್ಗೇಶ್ ತೀರ್ಮಾನಿಸಿದ್ದಾರೆ. ಇದಕ್ಕೆ ಕಾರಣವೇನು?

    ನಟ ಜಗ್ಗೇಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರುನಟ ಜಗ್ಗೇಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು

    ಪ್ರತಾಪ್ ಡ್ರೋನ್ ಹಾರಿಸಿದ್ದಲ್ಲವೇ?

    ಪ್ರತಾಪ್ ಡ್ರೋನ್ ಹಾರಿಸಿದ್ದಲ್ಲವೇ?

    ಸಹಾಯ ಕೇಳಿ ಬರುವ, ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಜನರನ್ನು ಏಕಾಏಕಿ ನಂಬಬಾರದು ಎಂದು ಜಗ್ಗೇಶ್ ತೀರ್ಮಾನಿಸಲು ಕಾರಣ ಮಂಡ್ಯದ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದ ಡ್ರೋನ್ ಪ್ರತಾಪ್ ಅವರ ಸಾಧನೆ ಎಲ್ಲವೂ ಸುಳ್ಳು ಎಂಬ ಸುದ್ದಿ.

    ಅನಾಮಿಕರನ್ನು ನಂಬುವುದಿಲ್ಲ

    ಅನಾಮಿಕರನ್ನು ನಂಬುವುದಿಲ್ಲ

    ಕಣ್ಣು ಕಿತ್ತರು ನಿದ್ರೆ ಬರಲಿಲ್ಲ ಇವನ ವಿಷಯ ಕೇಳಿ. ಇವನ ಬಗ್ಗೆ ಬರೆದದ್ದು ಪ್ರಯೋಜನವಿಲ್ಲಾ ಎಂದು ತೆಗೆದುಬಿಟ್ಟೆ. ಕಷ್ಟ ಅಂತ ಬಂದವರಿಗೆ ಭುಜಕೊಡುತ್ತಿದ್ದೆ, ಇನ್ನು ಮುಂದೆ ನನ್ನ ಬಳಿ ಯಾರು ಅನಾಮಿಕರು ಬಂದರೂ ನಂಬುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.

    ನಟ ಜಗ್ಗೇಶ್ ಅವರ ಮೊಬೈಲ್ ರಿಂಗ್‌ಟೋನ್ ಯಾವುದು ಗೊತ್ತೆ?ನಟ ಜಗ್ಗೇಶ್ ಅವರ ಮೊಬೈಲ್ ರಿಂಗ್‌ಟೋನ್ ಯಾವುದು ಗೊತ್ತೆ?

    ಹೊಸ ಪಾಠ ಕಲಿತೆ

    ಹೊಸ ಪಾಠ ಕಲಿತೆ

    ತುತ್ತು ಸಿಕ್ಕರು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು. 57ನೆ ವಯಸ್ಸಿಗೆ ಹೊಸ ಪಾಠ ಕಲಿತೆ ಎಂದು ಹೇಳಿರುವ ಜಗ್ಗೇಶ್, ಕಲಿಯುಗದಲ್ಲಿ ಯಾರನ್ನೂ ನಂಬಬಾರದು ಎಂದು ಹೇಳಿಕೊಂಡಿದ್ದಾರೆ.

    ಪ್ರತಾಪ್ ಸಾಧನೆಗಳೆಲ್ಲವೂ ಸುಳ್ಳು?

    ಪ್ರತಾಪ್ ಸಾಧನೆಗಳೆಲ್ಲವೂ ಸುಳ್ಳು?

    22 ವರ್ಷ ವಯಸ್ಸಿನ ಪ್ರತಾಪ್ ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದು ಎಲ್ಲೆಡೆ ಸದ್ದು ಮಾಡಿತ್ತು. ವಿದೇಶದ ವಿಜ್ಞಾನ ಸಂಸ್ಥೆಗಳನ್ನು ಅವರು ಬೆರಗುಗೊಳಿಸಿದ್ದರು. ಫ್ರಾನ್ಸ್ ವೈಜ್ಞಾನಿಕ ಸಂಸ್ಥೆಯ ಮಾಸಿಕ 16 ಲಕ್ಷ ರೂ, ಮನೆ, ಕಾರು ನೀಡುವ ಆಫರ್ ತಿರಸ್ಕರಿಸಿ ಭಾರತದಲ್ಲಿಯೇ ಇರಲು ಬಯಸಿದ್ದಾರೆ. ಹೀಗಾಗಿ ಅವರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಡಿಆರ್‌ಡಿಒ ಸೇರುವಂತೆ ಅವರಿಗೆ ಮನವಿ ಮಾಡಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಪ್ರತಾಪ್ ಸಾಧನೆಗಳೆಲ್ಲವೂ ಸುಳ್ಳು ಎಂದು ವೆಬ್ ಸೈಟ್ ಒಂದು ವರದಿ ಮಾಡಿದ್ದು, ಸಂಚಲನ ಸೃಷ್ಟಿಸಿದೆ.

    ನಟನಾಗುವ ಮುನ್ನಾ ಪಟ್ಟ ಕಷ್ಟಗಳನ್ನು ಅಭಿಮಾನಿಯೊಂದಿಗೆ ಹಂಚಿಕೊಂಡ ಜಗ್ಗೇಶ್ನಟನಾಗುವ ಮುನ್ನಾ ಪಟ್ಟ ಕಷ್ಟಗಳನ್ನು ಅಭಿಮಾನಿಯೊಂದಿಗೆ ಹಂಚಿಕೊಂಡ ಜಗ್ಗೇಶ್

    English summary
    Actor Jaggesh said he will not believe unknown people anymore after the reports reveals that the achievements of Drone Prathap were false.
    Saturday, July 11, 2020, 12:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X